ಸುಳ್ಳು ಸುದ್ದಿ ಹಬ್ಬಿಸುವುದು ಕೊರೋನಾಗಿಂತ ಅಪಾಯಕಾರಿ : ಡಾ.ಸುಧಾಕರ್

ಬೆಂಗಳೂರು

    ಜಾಗತಿಕ ಮಹಾಮಾರಿ ಕೋವಿಡ್ 19 ವಿರುದ್ದ ಇಡೀ ಜಗತ್ತು ಹೋರಾಟ ಮಾಡುತ್ತಿರುವ ಸಂದರ್ಭದಲ್ಲಿ ತಮ್ಮ ಹಾಗೂ ಆರೋಗ್ಯ ಸಚಿವ ಬಿ. ಶ್ರೀರಾಮುಲು ನಡುವೆ ಕಂದಕ ಹುಟ್ಟು ಹಾಕಿ ಸುಳ್ಳು ಸುದ್ದಿ ಹಬ್ಬಿಸುವುದು ಕೋರಾನಾಗಿಂತಲೂ ಅಪಾಯಕಾರಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ, ಸುಧಾಕರ್ ಕಿಡಿ ಕಾರಿದ್ದಾರೆ.

     ಕೆಲವರು ನಮ್ಮಿಬ್ಬರ ನಡುವೆ ಕಂದಕ ಹುಟ್ಟು ಹಾಕಿ ಜನ ಸಂಕಷ್ಟದಲ್ಲಿರುವ ಈ ಸಮಯದಲ್ಲಿ ಸುಳ್ಳು ಸುದ್ದಿ ಹಬ್ಬಿಸುವ ಮನಸ್ಥಿತಿ ಹೊಂದಿರುವುದು ಸರಿಯಲ್ಲ, ಈ ಬೆಳವಣಿಗೆ ಕೊರೋನಾ ವೈರಸ್ ಗಿಂತಲೂ ಅಪಾಯಕಾರಿ ಎಂದಿದ್ದಾರೆ.

     ಯಾವುದೇ ವ್ಯಕ್ತಿಗಳ ವೈಯುಕ್ತಿಕ ಆಶಯಕ್ಕೆ ಮೀರಿದ ಸಂಕಷ್ಟದಲ್ಲಿ ಇಂದು ಜಗತ್ತು ನಿಂತಿದೆ. ನಾನಾಗಲಿ ಮತ್ತು ನನ್ನಸಹೋದರನಂತಿರುವ ರಾಮುಲು ಆಗಲಿ, ನಾವೆಲ್ಲರೂ ಕೊರೊನ ಮಹಾ ಮಾರಿಯನ್ನು ಬಗ್ಗು ಬಡಿಯಲು ಟೊಂಕ ಕಟ್ಟಿ ನಿಂತಿದ್ದೇವೆ. ಜನಹಿತ ಕಾಯುವುದೇ ನಮ್ಮ ಧ್ಯೇಯ. ಇದರಲ್ಲಿ ಪ್ರಚಾರ ಪಡೆಯುವ ಅಗತ್ಯ ಏನಿದೆ ? ಎಂದಿದ್ದಾರೆ.

    ಇನ್ನು ನಾವಿಬ್ಬರು ಜನರ ಮಧ್ಯೆ ಇದ್ದು ಜನ ಸೇವೆ ಮಾಡಿಕೊಂಡು ಜನ ಪ್ರತಿನಿಧಿಗಳಾದವರು. ನಮ್ಮ ಜನರಿಂದ ಬರುವಶಹಬಾಷ್ ಗಿರಿಯೇ ನಮಗೆ ಶ್ರೀ ರಕ್ಷೆ ಇದರಲ್ಲಿ ಪ್ರಚಾರದ ಮಾತೆಲ್ಲಿ ? ಎಂದು ಡಾ. ಸುಧಾಕರ್ ಪ್ರಶ್ನಿಸಿದ್ದಾರೆ .ನಾನೊಬ್ಬ ವೈದ್ಯ ಅದಕ್ಕಿಂತ ಹೆಚ್ಚಾಗಿ ಜನಸೇವೆಗೆ ತೊಡಗಿಸಿಕೊಂಡವನು. ಈ ರೀತಿಯ ಕೊಂಕು ಮಾತುಗಳಿಗೆ ಧೃತಿಗೆಟ್ಟುಕರ್ತವ್ಯ ವಿಮುಖನಾಗುವವನು ನಾನಲ್ಲ. ಪ್ರತಿಯೊಂದು ಟೀಕೆ ಪ್ರತಿ ಬಾರಿ ನನ್ನನ್ನು ಇನ್ನಷ್ಟು ಬಲಶಾಲಿಯಾಗಿ ಮಾಡಿದ್ದು, ನನಗೆಆತ್ಮ ಸ್ಥೈರ್ಯ ತುಂಬುತ್ತದೆ. “ನಿಂದಕರಿರಬೇಕಯ್ಯ “ ಅನ್ನುವ ಬಸವಣ್ಣನ ಮಾತಿನಂತೆ ಮುನ್ನುಗಿ ಇನ್ನಷ್ಟು ಜನತಾ ಜನಾರ್ಧನಸೇವೆ ಮಾಡಲು ಪ್ರೇರೇಪಿಸುತ್ತದೆ  ಎಂದಿದ್ದಾರೆ.

    ನಮ್ಮ ಒಗ್ಗಟನ್ನು ಕೊರೋನ ಮಹಾಮಾರಿಯನ್ನು ಓಡಿಸುವಲ್ಲಿ ತೋರಿಸೋಣ. ಸುಳ್ಳು ಸುದ್ದಿ ಹಬ್ಬಿಸುವವರಿಗೆ ಅವರವರದೇವರು ಒಳ್ಳೆ ಬುದ್ದಿ ಕೊಡಲೆಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link