ಬೆಳಗಾವಿ
ಸಭಾಪತಿ ಸ್ಥಾನ ವಂಚಿತ ಮೇಲ್ಮನೆ ಸದಸ್ಯ ಎಸ್.ಆರ್.ಪಾಟೀಲ್‍ಗೆ ಸಿದ್ದರಾಮಯ್ಯ ಸಚಿವ ಸ್ಥಾನದ ಭರವಸೆ ನೀಡಿದ್ದಾರೆ. ಸಭಾಪತಿ ಸ್ಥಾನವನ್ನು ಎಸ್.ಆರ್.ಪಾಟೀಲ್‍ಗೆ ಕೊಡಿಸಬೇಕೆಂದು ಸಿದ್ದರಾಮಯ್ಯ ಈ ಹಿಂದೆ ಪಟ್ಟು ಹಿಡಿದಿದ್ದರು. ಆದರೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಪ್ರತಾಪ್ ಚಂದ್ರಶೆಟ್ಟಿಯವರನ್ನು ಸಭಾಪತಿಯನಾಗಿಸುವ ಮೂಲಕ ಸಿದ್ದರಾಮಯ್ಯ ವಿರುದ್ಧ ಪ್ರಾಬಲ್ಯ ಮೆರೆದಿದ್ದಾರೆ. ಈಗಾಗಲೇ ಸಚಿವಸ್ಥಾನಕ್ಕಾಗಿ ಕಾಂಗ್ರೆಸ್‍ನಲ್ಲಿ ಅಸಮಾಧಾನ ಹೆಚ್ಚುತ್ತಿದ್ದು, ಈಗ ಎಸ್.ಆರ್.ಪಾಟೀಲ್‍ಗೆ ಸಭಾಪತಿ ಸ್ಥಾನ ತಪ್ಪಿದ್ದು ಮತ್ತೊಂದು ಅಸಮಾಧಾನಕ್ಕೆ ಸೇರ್ಪಡೆಯಾದಂತಾಗಿದೆ.
ಸಭಾಪತಿ ಸ್ಥಾನದಿಂದ ವಂಚಿತರಾಗಿರುವ ಎಸ್.ಆರ್.ಪಾಟೀಲರಿಗೆ ಸಿದ್ದರಾಮಯ್ಯ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದು, ಹಾಗಾಗಿ ಎಸ್.ಆರ್.ಪಾಟೀಲ್ ಈ ಬಗ್ಗೆ ಸದ್ಯ ಮೌನ ವಹಿಸಿದ್ದಾರೆ. ಡಿಸೆಂಬರ್ 18 ರಂದು ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಆದಂತಹ ಅನ್ಯಾಯದ ಬಗ್ಗೆ ಚರ್ಚೆಯಾಗಲಿದೆ. ಉತ್ತರ ಕರ್ನಾಟಕ ಭಾಗದ ಲಿಂಗಾಯತ ಶಾಸಕರ ನಿಯೋಗ ಶಾಸಕಾಂಗ ಸಭೆಯಲ್ಲಿ ಸಿದ್ದರಾಮಯ್ಯರಿಗೆ ದೂರು ನೀಡಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ