ಕುಮಾರಸ್ವಾಮಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮ : ರೇಣುಕಾಚಾರ್ಯ

ಬೆಂಗಳೂರು

      ಮೈತ್ರಿ ಪಕ್ಷಗಳ ಹೊಡೆದಾಟದಿಂದಲೇ ಸರ್ಕಾರ ಅಸ್ಥಿರಗೊಳ್ಳುವಂತಹ ಸನ್ನಿವೇಶ ಸೃಷ್ಟಿಯಾಗಿದೆಯೇ ಹೊರತು ಆಪರೇಷನ್ ಕಮಲದಿಂದಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮ ಎಂದು ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.

     ಸರ್ಕಾರವನ್ನು ಅಸ್ಥಿರಗೊಳಿಸುವಂತಹ ಪ್ರಯತ್ನವನ್ನು ಬಿಜೆಪಿ ಯಾವತ್ತಿಗೂ ಮಾಡಿಲ್ಲ. ಮೈತ್ರಿ ಸರ್ಕಾರದಲ್ಲಿ ದಿನದಿಂದ ದಿನಕ್ಕೆ ಸಂಘರ್ಷಗಳು ನಡೆಯುತ್ತಿದ್ದು, ಸರ್ಕಾರದ ಶಾಸಕರು ಚಾಕು ಚೂರಿ ಹಿಡಿದು ಹೊಡೆದಾಡುವುದೊಂದು ಬಾಕಿ ಉಳಿದಿದೆ. ಬಿಜೆಪಿಯ 104 ಶಾಸಕರೆಲ್ಲ ಒಟ್ಟಾಗಿಯೇ ಇದ್ದು, ನಮ್ಮ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿನ ಸಮಸ್ಯೆಗೆ ತೇಪೆಹಚ್ಚಲು ಬಿಜೆಪಿಯವರ ಒಗ್ಗಟ್ಟನ್ನು ಒಡೆಯುವ ಪ್ರಯತ್ನ ಮಾಡಲಾಗುತ್ತಿದೆ. ಯಡಿಯೂರಪ್ಪನವರೇ ನಮ್ಮ ಮುಂದಿನ ಮುಖ್ಯಮಂತ್ರಿ ಎಂದು ಪಕ್ಷದ ಹೈಕಮಾಂಡ್ ತೀರ್ಮಾನಿಸಿದೆ ಎಂದು ಅವರು ತಿಳಿಸಿದರು.

      ಯಡಿಯೂರಪ್ಪ ನಿವಾಸದಲ್ಲಿ ಶಾಸಕರಿಗೆ ಉಪಹಾರ ವ್ಯವಸ್ಥೆ ಬಗ್ಗೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ಪಕ್ಷದ ನಾಯಕರ ಮನೆಗೆ ಬರದೇ ದೇವೇಗೌಡರ ಮನೆಗೆ ಹೋಗುವುದಕ್ಕೆ ಸಾಧ್ಯವೇ.

ನಾವು ನಮ್ಮ ನಾಯಕರ ಮನೆಗೆ ಬರೋದು ತಪ್ಪಾ?

       ದೇವೇಗೌಡರ ಮನೆಗೆ ಯಡಿಯೂರಪ್ಪರ ನಿವಾಸಕ್ಕೆ ಬಂದಂತೆ ಸುಲಭವಾಗಿ ಹೋಗಲು ಸಾಧ್ಯವಿಲ್ಲ. ಅಲ್ಲಿಗೆ ಫೋನ್ ಮಾಡಿ ಕೇಳಿಕೊಂಡು ಹೋಗಬೇಕು. ಆದರೆ ನಮ್ಮ ನಾಯಕ ಯಡಿಯೂರಪ್ಪ ಅವರ ಮನೆಗೆ ದಿನದ ಇಪ್ಪತ್ತನಾಲ್ಕು ಗಂಟೆಯೂ ಭೇಟಿ ನೀಡಬಹುದು. ಸಿದ್ದಗಂಗಾ ಮಠದ ದಾಸೋಹದ ರೀತಿಯಲ್ಲಿ ನಾಯಕರು ತಮಗೆಲ್ಲ ಅನ್ನ ಹಾಕುತ್ತಾರೆ. ಬ್ರೇಕ್ ಫಾಸ್ಟ್ ಮೀಟಿಂಗ್ ಗೆ ವಿಷೇಶ ಅರ್ಥ ಕಲ್ಪಿಸುವ ಅಗತ್ಯ ಇಲ ಎಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap