ಜಿಲ್ಲೆಯಲ್ಲಿ ಕಾಣದಂತೆ ಮಾಯವಾಗಿದ ಶ್ರೀರಾಮುಲು :ಎಸ್.ತಿಪ್ಪೇಸ್ವಾಮಿ

 ಚಳ್ಳಕೆರೆ

     ರಾಜ್ಯದ ಅತಿ ಹಿಂದುಳಿದ ವಿಧಾನಸಭಾ ಕ್ಷೇತ್ರವಾದ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿದ್ದು, ಕ್ಷೇತ್ರದ ಶಾಸಕರೇ ಆರೋಗ್ಯ ಸಚಿವರಾಗಿದ್ದರೂ ಸಹ ಮೊಳಕಾಲ್ಮೂರು ಸರ್ಕಾರಿ ಆಸ್ಪತ್ರೆಗೆ ವೈದ್ಯರೇ ಇಲ್ಲ. ಜನರ ಗೋಳು ಕೇಳುವರೇ ಇಲ್ಲ. ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಕೆಲಸ ನಿರ್ವಹಿಸಲು 20 ಜನ ಆಪ್ತಸಹಾಯಕರನ್ನು ಇಟ್ಟುಕೊಂಡಿದ್ದು, ಅವರು ಕೇವಲ ಹಣ ವಸೂಲಿ ದಂದೆಗೆ ಇಳಿದಿದ್ದಾರೆಂದು ಕ್ಷೇತ್ರದ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ನೇರವಾಗಿ ಆರೋಪಿಸಿದ್ಧಾರೆ.

    ಅವರು, ಶುಕ್ರವಾರ ಪತ್ರಿಕೆಯೊಂದಿಗೆ ಮಾತನಾಡಿ, ನಾನು ಶಾಸಕನಾದ ಸಂದರ್ಭದಲ್ಲಿ ಗ್ರಾಮೀಣ ಭಾಗದ ರಸ್ತೆ, ನೀರು, ವಿದ್ಯುತ್ ಸಂಪರ್ಕಕ್ಕೆ ಯಾವುದೇ ಕೊರತೆ ಇಲ್ಲದಂತೆ ಕಾರ್ಯನಿರ್ವಹಿಸಿದ್ದೇನೆ. ಕ್ಷೇತ್ರದಲ್ಲಿ ಶಿಕ್ಷಣದ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ. 5 ಮೊರಾರ್ಜಿ, 1 ಕಿತ್ತೂರು ರಾಣಿ ಚನ್ನಮ್ಮ, 1 ಐಟಿಐ ಕಾಲೇಜುನ್ನು ಪ್ರಾರಂಭಿಸಿದ್ದೆ.

    ತುಂಗಾ ಹಿನ್ನೀರು ಯೋಜನೆಯಡಿ ಕ್ಷೇತ್ರದ ಬಹುತೇಕ ಗ್ರಾಮಗಳ ಕೆರೆಗಳನ್ನು ತುಂಬಿಸಲು ಪ್ರಯತ್ನಿಸಿದ್ದೆ. ಕ್ಷೇತ್ರದ ಅಭಿವೃದ್ಧಿಗೆ ಸದಾಕಾಲ ಜನರೊಂದಿಗೆ ಸಂಪರ್ಕವಿಟ್ಟುಕೊಂಡು ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೆ. ಯಾವುದೇ ಗ್ರಾಮಕ್ಕೂ ಹೋದರು ಅಲ್ಲಿ ಜನರ ಸಮಸ್ಯೆಗೆ ಮೊದಲ ಆದ್ಯತೆ ನೀಡುತ್ತಿದ್ದೆ. ನಾನು ಈ ಹಿಂದೆ ಕೈಗೊಂಡಿರುವ ಕೆಲವು ಕಾಮಗಾರಿಗಳ ಉದ್ಘಾಟನೆಗೆ ಮಾತ್ರ ಇವರು ಆಗಮಿಸುತ್ತಾರೆಂದು ಆರೋಪಿಸಿದ್ದಾರೆ.

     ವಿಶೇಷವಾಗಿ ಸರ್ಕಾರ ಆಸ್ಪತ್ರೆಗಳ ಸಮಸ್ಯೆಗಳ ನಿವಾರಣೆಗೂ ಸಹ ಪ್ರಯತ್ನ ನಡೆಸಿದ್ದೆ. ಆದರೆ, ಕ್ಷೇತ್ರದ ಜನತೆಯ ದುದೈವವೆನ್ನುವಂತೆ ಕ್ಷೇತ್ರದ ಶಾಸಕರೇ ಆರೋಗ್ಯ ಸಚಿವರಾಗಿದ್ದರೂ ಸಹ ಮೊಳಕಾಲ್ಮೂರು ಆಸ್ಪತ್ರೆಗೆ ವೈದ್ಯರಿಲ್ಲ, ಸ್ವಚ್ಚತೆ ಇಲ್ಲ. ಅದೇ ರೀತಿ ಜಿಲ್ಲೆಯ ಬಹುದೊಡ್ಡ ತಾಲ್ಲೂಕು ಕೇಂದ್ರವಾದ ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲೂ ಸಹ ಸೂಕ್ತ ಸೌಲಭ್ಯಗಳಿಲ್ಲ. ಕೇವಲ ಆರೋಗ್ಯ ಸಚಿವರೆಂಬ ಅಧಿಕಾರವನ್ನು ಹೊಂದಿದ್ದರೂ ಕ್ಷೇತ್ರದ ಜನರ ಸಮಸ್ಯೆ ನಿವಾರಿಸಲು ಇವರಿಂದ ಸಾಧ್ಯವಾಗಿಲ್ಲ. ಕ್ಷೇತ್ರಕ್ಕೆ ಭೇಟಿ ನೀಡುವುದು, ಜನರ ಕೈಗೆ ಸಿಗುವುದೇ ಅಪರೂಪವಾಗಿದ್ದು, ಆಕಸ್ಮಿಕವಾಗಿ ಬಂದಲ್ಲಿ ನೂರಾರು ಜನರೊಂದಿಗೆ ಆಗಮಿಸಿ ಕೆಲವೇ ನಿಮಿಷವಿದ್ದು, ಹೊರಟು ಹೋಗುತ್ತಾರೆ.

    ಆದ್ದರಿಂದ ಕೇವಲ ಅಧಿಕಾರದ ಆಸೆಗಾಗಿ ಸಚಿವ ಸ್ಥಾನ ಪಡೆದಂತೆ ಕಾಣುತ್ತದೆ. ಜನಸೇವೆಯನ್ನು ಮರೆತ ಇಂತಹ ಜನಪ್ರತಿನಿಧಿಗೆ ಜನರು ಮುಂದಿನ ದಿನಗಳಲ್ಲಿ ಬುದ್ದಿಕಲಿಸುತ್ತಾರೆಂದು ಅವರು ತಿಳಿಸಿದ್ಧಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link