ಮುರುಘಾ ಶರಣರಿಂದ ಸಮಾಜದಲ್ಲಿ ಸುಧಾರಣೆ : ಹೆಚ್.ಆಂಜನೇಯ

ಹೊಳಲ್ಕೆರೆ;

    ಮುರುಘಾಮಠದ ಶಿವಮೂರ್ತಿ ಶರಣರು ಸಮಾಜ ಸುಧಾರಣೆಗಾಗಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದು, ಮೂಢನಂಬಿಕೆಯ ವಿರುದ್ದ ಆಂದೋಲನವೇ ರೂಪಿಸಿದ್ದಾರೆ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಬಣ್ಣಿಸಿದರುಇಲ್ಲಿನ ಒಂಟಿಕಂಬದ ಬಳಿ ಶ್ರೀಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರ 26ನೇ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು

     ಮುರುಘಾ ಶರಣರಿಗೆ ಶೋಷಿತವರ್ಗದವರ ಬಗ್ಗೆ ವಿಶೇಷ ಕಾಳಜಿಯಿದೆ.ಮಲ್ಲಿಕಾರ್ಜುನ ಶ್ರೀಗಳು ಶ್ರೀಮಠಕ್ಕೆ ಭದ್ರವಾದ ಬೂನಾದಿಯನ್ನು ಹಾಕಿದ್ದಾರೆ. ಮುರುಘಾಮಠ ಎಲ್ಲರ ಪ್ರೀತಿಗೆ ಪಾತ್ರವಾಗಿದೆ, ಸುಧಾರಣೆಗಳು ಪ್ರಾಯೋಗಿಕವಾಗಿ ಜಾರಿಗೆ ತರುತ್ತಿರುವವರು ಮುರುಘಾ ಶರಣರು ಎಂದು ಹೇಳಿದರು

     ಜಾತ್ಯತೀತವಾಗಿರುವ ಮಠಾಧೀಶರಿಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಅನುದಾನುಕೊಟ್ಟಿದ್ದಾರೆಂದು ಆಂಜನೇಯ ಇದೇ ಸಂದರ್ಭದಲ್ಲಿ ತಿಳಿಸಿದರು.

     ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುರುಘಾಮಠದ ಶೂನ್ಯಪೀಠಾಧ್ಯಕ್ಷರಾದ ಡಾ.ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಸಮಸಮಾಜದ ಕಲ್ಪನೆ ಅವರದು, ವಚನಕಾರರದು ಚಳುವಳಿ, ಇವರಿಗೆ ಸೈದ್ದಾಂತಿಕ ನೆಲೆಗಟ್ಟು ಇತ್ತು, ಸರ್ವಸಮಾಜಕ್ಕೆ ಸಾಮಾಜಿಕ ನ್ಯಾಯಬದಗಿಸಿದರು. ಅವರ ಸಮಸಮಾಜದ ಪರಿಕಲ್ಪನೆ 21ನೇ ಶತಮಾನದ ವರೆಗೆ ಬೆಳಕನ್ನು ಚೆಲ್ಲುತ್ತ ಬಂದಿದೆ, ಇದು ಹಾಗೆಯೇ ಮುಂದುವರಿಯುತ್ತದೆ ಎಂದರು

     ತಾತ್ವಿಕ ನೆಲೆಗಟ್ಟಿನಮೇಲೆ ಮಠಗಳು ನಿಲ್ಲಬೇಕು. ವಿರಕ್ತಪರಂಪರೆಗೆ ಬಸವಾದಿ ಶರಣರು ಪ್ರೇರಣೆಯಾಗುತ್ತಾರೆ. ಕರ್ನಾಟಕದಲ್ಲಿ ವಿರಕ್ತಪರಂಪರೆಗೆ ಸೇರಿದ ನಾಲ್ಕು ಸಾವಿರಕ್ಕೂ ಹೆಚ್ಚು ಮಠಗಳಿವೆ. ಬಸವಾದಿಶರಣರು ಬದುಕಿದಂತೆ ನಾವು ಬದುಕಬೇಕು. ಕೆಲವು ವಿರಕ್ತಪೀಠಗಳು ಸಂಪ್ರಾದಯ ಪೀಠಗಳಾದವು. ಕಾಯಕ ದಾಸೋಹ ಮತ್ತು ಸಮಾನತೆ ಬಸವಾದಿ ಶರಣರ ಸೂತ್ರಗಳು.

    ಸಂಪ್ರದಾಯ ಮಠಗಳ ಸ್ಥಿತಿ ದ್ವಂದ್ವಕ್ಕೆ ಒಳಗಾಗಿದೆ ಎಂದು ಹೇಳಿದರು ಮುರುಘಾಮಠ ಪ್ರಜಾಸತ್ತಿಗೆ ಒಳಾಗಾಗುವಂತೆ ಮಾಡಲಾಗಿದೆ. ಸಂಪ್ರದಾಯಬದ್ದವಾದ ಮುರುಘಾಮಠವನ್ನು ಶರಣ ಸಂಸ್ಕೃತಿಯ ಕಡೆಗೆ ತೆಗೆದುಕೊಂಡು ಹೋಗಿದ್ದೇವೆ. ನಾವು ಗುರುವಾಕ್ಯ ಪರಿಪಾಲಕರು. ಶ್ರೀಮಠವನ್ನು ಸರ್ವಜನಾಂಗ ಶಾಂತಿತೋಟವನ್ನಾಗಿ ಮಾಡಲಾಗಿದೆ ಎಂದು ನುಡಿದರು.

    ಸಮಾರಂಭದ ಸಮ್ಮುಖವನ್ನು ರಾಜನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠದ ಶ್ರೀ ಜ. ಪ್ರಸನ್ನ ವಾಲ್ಮೀಕಿ ಸ್ವಾಮಿಗಳು ವಹಿಸಿ ಮಾತನಾಡುತ್ತ, ಚಿತ್ರದುರ್ಗದ ಚಿನ್ಮೂಲಾದ್ರಿ ಚೇತನ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಇವರು ವ್ಯಾಕರಣ ಪಂಡಿತರಾಗಿದ್ದರು. ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತಶಿಕ್ಷಣವರೆಗೂ ಸಿಗುವಹಾಗೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆಮಾಡಿದರು ಎಂದು ನುಡಿದರು.

    ವಿದ್ಯಾಧಾನ ಹಾಗೂ ಅನ್ನದಾನಕ್ಕೆ ಹೆಸರಾದವರು ಮಲ್ಲಿಕಾರ್ಜುನ ಶ್ರೀಗಳೆಂದು ಶರಣ ಸಂಸ್ಕೃತಿ ಉತ್ಸವದ ಕಾರ್ಯಧ್ಯಕ್ಷರಾದ ಡಾ. ಹನುಮಲಿ ಷಣ್ಮುಖಪ್ಪ ಶ್ರೀಗಳ ಸರಣ್ಮೋತ್ಸವದಲ್ಲಿ ನುಡಿದರು. ಮಾಜಿ ಶಾಸಕ ಎ.ವಿ.ಉಮಾಪತಿ ಮಾತನಾಡಿ, ಮುರುಘಾಮಠದಲ್ಲಿ ಲಿಂಗೈಕ್ಯರಾಗುವುದಕ್ಕೆ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಂಡಿದ್ದರೂ, ಮಲ್ಲಿಕಾರ್ಜುನ ಜದ್ಗುರುಗಳು ಹೊಳಲ್ಕೆರೆ ಈ ತಣ್ಣಗಿರುವ ಸ್ಥಳವನ್ನು ಆಯ್ಕೆಮಾಡಿಕೊಂಡಿದ್ದು ಅವರ ದೂರದೃಷ್ಟಿಯನ್ನು ಹೇಳುತ್ತದೆ. ಇದು ಒಂದು ಪುಣ್ಯ ಭೂಮಿಯಾಗಿದೆ, ಎಲ್ಲಾ ಜನರಿಗೆ ವಿಶ್ರಾಂತಿ ತಾಣವಾಗಿದೆ, ಮುರುಘಾ ಶರಣರು ಎಲ್ಲಾ ಜಾತಿ ಧರ್ಮದವರನ್ನು ಪ್ರೀತಿಯಿಂದ ನಡೆಸಿಕೊಳ್ಳುತ್ತಾರೆ, ಎಲ್ಲರನ್ನು ಅಪ್ಪಿಕೊಳ್ಳುವ ಮಠವೆಂದರೆ ಅದು ಶ್ರೀಮುರುಘಾ ಮಠ ಎಂದು ಹೇಳಿದರು.

    ವಿಶೇಷ ಆಹ್ವಾನಿತರಾದ ಮಾಜಿ ಶಾಸಕ ಪಿ.ರಮೇಶ ಕುಮಾರ್ ಮಾತನಾಡಿ, ಶರಣರು ಮೆಟ್ಟಿದ ಧರೆ ಪಾವನವಯ್ಯ ಎನ್ನುವಂತೆ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಇಲ್ಲಿ ನಡೆದಾಡಿ ಹೊಳಲ್ಕೆರೆಯನ್ನು ಪಾವನಗೊಳಿಸಿದರು. ಬಸವಾದಿ ಪ್ರಮಥರ ಮಾರ್ಗದಲ್ಲಿ ಹೋಗುವವರು ಬಹಳ ಜನ, ಆದರೆ ಅನುಸರಿಸುವ ತುಂಬಾ ಕಡಿಮೆ, ಶರಣ ಸಂಸ್ಕೃತಿ ಉತ್ಸವ ಎಲ್ಲರನ್ನು ಕೂಡಿಸಿಕೊಂಡು ಹೊಗುವ ಸಂಸ್ಕೃತಿ ಎಂದರು.

    ರಾಜನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠದ ಶ್ರೀ ಜ. ಪ್ರಸನ್ನ ವಾಲ್ಮೀಕಿ ಸ್ವಾಮಿಗಳು ಮತ್ತು ಶ್ರೀ ಕಾಗಿನೆಲೆ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ನೆರವೇರಿಸಿದರು. ಮಹಾದ್ವಾರದ ದಾನಿಗಳಾದ ಡಾ.ಎಸ್.ವಿ.ಸಜ್ಜನ್ ದಂಪತಿಗಳಿಗೆ, ಮಾಜಿ ಶಾಸಕರುಗಳಾದ ಎಂ.ಬಿ. ತಿಪ್ಪೇರುದ್ರಪ್ಪ ಮತ್ತು ಜಿ.ಸಿ. ಮಂಜುನಾಥರವರುಗಳನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕರಾದ ಟಿ.ಹೆಚ್.ಬಸವರಾಜ್ , ಎ.ವಿ.ಉಮಾಪತಿ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap