ಕರೇಕಲ್ ಆಂಜನೇಸ್ವಾಮಿ ಸನ್ನಿಧಿಯಲ್ಲಿ ಶ್ರೀರಾಮ ತಾರಕ ಹೋಮ.

ಚಳ್ಳಕೆರೆ

     ನಾಡಿನೆಲ್ಲೆಡೆ ಮರ್ಯಾದ ಪುರುಷೋತ್ತಮ ಪ್ರಭು ಶ್ರೀರಾಮಚಂದ್ರನ ನಾಮಸ್ಮರಣೆ ಭಕ್ತಿ ಶ್ರದ್ದೆಗಳಿಂದ ನಡೆಯುತ್ತಿದ್ದು, ಚಳ್ಳಕೆರೆ ನಗರದ ಶ್ರೀರಾಮಭಕ್ತರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಇಂದು ಶ್ರೀರಾಮ ನವಮಿಯನ್ನು ಭಕ್ತಿ ಶ್ರದ್ದೆಯಿಂದ ಆಚರಿಸಿದರು.

        ನಗರದ ನಾಯಕನಹಟ್ಟಿ ರಸ್ತೆಯಲ್ಲಿರುವ ಕರೇಕಲ್ ಶ್ರೀಆಂಜನೇಯಸ್ವಾಮಿ ಸ್ವಾಮಿ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ಶ್ರೀರಾಮ ನವಮಿ ಉತ್ಸವ ಭಕ್ತಿ ಶ್ರದ್ದೆಗಳಿಂದ ನಡೆಯಿತು. ದೇವಸ್ಥಾನದ ಆವರಣದಲ್ಲಿ ಲೋಕಕಲ್ಯಾಣಾರ್ಥವಾಗಿ ಶ್ರೀರಾಮತಾರಕ ಹೋಮವನ್ನು ಸಹ ನಡೆಸಲಾಯಿತು.

          ಖ್ಯಾತ ಜ್ಯೋತಿಷಿ ಅನಂತರಾಮ್ ಗೌತಮ್ ಮಾತನಾಡಿ, ಯಾವ ನೆಲದಲ್ಲಿ ಭಕ್ತಿ ಶ್ರದ್ದೆಯಿಂದ ಧಾರ್ಮಿಕ ಕಾರ್ಯಕ್ರಮ ಆಚರಿಸುತ್ತೇವೆಯೋ ಅಲ್ಲಿ ಸುಖ, ನೆಮ್ಮದಿ ಶಾಂತಿ ನೆಲೆಸುತ್ತದೆ ಎಂಬ ಅಚಲವಾದ ನಂಬಿಕೆ ನಮ್ಮಲ್ಲಿದೆ. ಪ್ರಭು ಶ್ರೀರಾಮಚಂದ್ರ ಲೋಕಕಲ್ಯಾಣಕ್ಕಾಗಿ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಜನರ ಸಂರಕ್ಷಣೆಗಾಗಿ ಮುಂದಾಗಿದ್ದನು.

         ಧಾರ್ಮಿಕ ಕಾರ್ಯಗಳಿಂದ ಮಾತ್ರ ಸದ್ಭಾವನೆ ಮೂಡಲು ಸಾಧ್ಯ. ಪ್ರತಿಯೊಂದು ಹಂತದಲ್ಲೂ ನಮ್ಮನ್ನು ಕಾಯುವುದು ನಾವು ಮಾಡುವ ಶ್ರೇಷ್ಠ ಕಾರ್ಯಗಳು ಎಂಬುವುದನ್ನು ಪರಿಚಯಿಸಿಕೊಟ್ಟವನೆ ಪ್ರಭು ಶ್ರೀರಾಮಚಂದ್ರ. ಇಂದಿಗೂ ಸಹ ನಾವು ಎಲ್ಲರ ಒಳಿತಿಗಾಗಿ ಶ್ರೀರಾಮಚಂದ್ರನ ಮಾರ್ಗದರ್ಶನವನ್ನೇ ಅನುಸರಿಸುತ್ತಾ ಬಂದಿದ್ದೇವೆ. ಪ್ರಭು ಶ್ರೀರಾಮಚಂದ್ರನು ಗೌರವವಾದ ವ್ಯಕ್ತಿತ್ವವನ್ನು ಹೊಂದಿದವನು.

          ಸತ್ಯ ನಂಬಿಕೆ, ವಿಶ್ವಾಸದ ಮೂಲಕ ಪ್ರಸಿದ್ದಿಯಾದವನು. ಅವನು ಮಾಡಿದ ಅನೇಕ ಧಾರ್ಮಿಕ ಪುಣ್ಯ ಕಾರ್ಯಗಳು ನಮಗೆ ಇಂದಿಗೂ ಆದರ್ಶಪ್ರಾಯವಾಗಿವೆ. ಹಾಗಾಗಿ ಪ್ರತಿವರ್ಷದ ಶ್ರೀರಾಮನವಮಿಯಂದು ಶ್ರೀರಾಮಚಂದ್ರನನ್ನು ಮುಕ್ತ ಕಂಠದಿಂದ ಸ್ಮರಿಸುವುದೇ ನಮ್ಮೆಲ್ಲರ ಆಧ್ಯಕರ್ತವ್ಯವಾಗಿದೆ ಎಂದರು.

          ನಂತರ ನೆರೆದಿದ್ದ ಭಕ್ತರ ಸಮಕ್ಷಮದಲ್ಲಿ ಪ್ರಭು ಶ್ರೀರಾಮಚಂದ್ರನ ಪೂಜಾ ಕಾರ್ಯಗಳು ನಡೆದವಲ್ಲದೆ ಆಗಮಿಸಿದ್ದ ಎಲ್ಲಾ ಸದ್ಭಕ್ತರಿಗೆ ಪಾನಕ ಮತ್ತು ಕೋಸಂಬರಿಯನ್ನು ವಿತರಿಸಲಾಯಿತು. ಪೂಜಾ ಕಾರ್ಯಗಳು ನೇತೃತ್ವವನ್ನು ಆರ್ಚಕ ವೇತನ ಬ್ರಹ್ಮ ಸಿ.ಎನ್.ನಾಗಶಯನಗೌತಮ್ ವಹಿಸಿದ್ದರು. ಮುರಳಿ ಕೃಷ್ಣ, ನಾಗೇಶ್, ಮುರಳಿಧರ್‍ರಾವ್ ಮುಂತಾದವರು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

          ನಗರದ ಹಳೇಟೌನ್‍ನಲ್ಲಿರುವ ಶ್ರೀರಾಮಮಂದಿರದ ಶ್ರೀಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ, ಸೋಮಗುದ್ದು ರಸ್ತೆಯ ಮುರಡಿ ಆಂಜನೇಯಸ್ವಾಮಿ, ಬಂಡೆ ಆಂಜನೇಯಸ್ವಾಮಿ, ಪಿವಿಟಿಸಿ ಆಂಜನೇಯಸ್ವಾಮಿ ಸೇರಿದಂತೆ ನಗರದ ಹಲವಾರು ದೇವಸ್ಥಾನಗಳಲ್ಲಿ ರಾಮನವಮಿ ಕಾರ್ಯಕ್ರಮವನ್ನು ಆಚರಿಸಲಾಯಿತು. ನೂರಾರು ಭಕ್ತರು ಆಗಮಿಸಿ ದೇವರ ದರ್ಶನ ಪಾನಕ, ಕೋಸಂಬರಿ ಪಡೆದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap