ತುರುವೇಕೆರೆ:
ತಾಲೂಕಿನ ದಂಡಿನಶಿವರ ಹೋಬಳಿಯ ಸಂಪಿಗೆ ಗ್ರಾಮದ ಪ್ರಸಿದ್ಧ ಶ್ರೀನಿವಾಸ ಸ್ವಾಮಿಯ ಬ್ರಹ್ಮೋತ್ಸವ ಗುರುವಾರ ಅಪಾರ ಭಕ್ತಾಧಿಗಳ ಸಮ್ಮುಖದಲ್ಲಿ ವೈಭವದಿಂದ ಜರುಗಿತು.
ಬುಧವಾರ ಪಲ್ಲಕ್ಕಿ ಉತ್ಸವ ಜರುಗಿತು. ಗುರುವಾರ ಶ್ರೀನಿವಾಸ ದೇವರಿಗೆ ಹೂವು ಮತ್ತು ವಿದ್ಯುತ್ ದೀಪಾಲಂಕಾರ ಮಾಡಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮಧ್ಯಾಹ್ನ 12.30ಕ್ಕೆ ರಥೋತ್ಸವ ಜರುಗಿತು. ನಂತರ ಗೋಪೂಜೆ, ಭಜನೆ, ಕೋಲಾಟ, ನಾಸಿಕ್ ಡೋಲ್ ಡಾ.ಶೋಕೇಶ್‍ಕುಮಾರ್ ತಂಡವರಿಂದ ಜರುಗಿದ ನಾದಸ್ವರ ಎಲ್ಲರ ಮೆಚ್ಚುಗೆ ಗಳಿಸಿತು. ನಂತರ ಭಕ್ತಾಧಿಗಳಿಗೆ ಪಾನಕ, ಫಲಹಾರ ಮತ್ತು ಪ್ರಸಾದ ವಿತರಿಸಲಾಯಿತು.
ಈ ಸಂಧರ್ಭದಲ್ಲಿ ಶಾಸಕ ಮಸಾಲಜಯರಾಮ್, ಉಪ ತಹಶೀಲ್ದಾರ್ ಸಿದ್ದಗಂಗಯ್ಯ, ಧರ್ಮದರ್ಶಿಗಳಾದ ಶ್ರೀಧರ್ ಸೇರಿದಂತೆ, ಅಕ್ಕ ಪಕ್ಕದ ಜಿಲ್ಲೆಗಳಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
