ಕುಮಾರಸ್ವಾಮಿಯವರ ಹೇಳಿಕೆ ಸರಿಯಾಗಿಯೇ ಇದೆ : ಶ್ರೀರಾಮುಲು

ಬೆಂಗಳೂರು

     ಕೆಲ ದಿನಗಳ ಹಿಂದೆ ಪಾದರಾಯನಪುರದ ಪುಂಡರನ್ನು ರಾಮನಗರ ಜೈಲಿಗೆ ಕಳುಹಿಸಿ ನಂತರ ಸೋಂಕಿನ ಶಂಕೆ ಹೆಚ್ಚಾಗಿದ್ದರಿಂದ ಬೆಂಗಳೂರಿಗೆ ವಾಪಸ್ ಕರೆಸಿಕೊಂಡದ್ದು ಸರಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.ಗ್ರೀನ್ ಝೋನ್ ನಲ್ಲಿರುವ ರಾಮನಗರಕ್ಕೆ ಪಾದರಾಯನ ಪುರದ ಕಿಡಿಗೇಡಿಗಳನ್ನು ಸ್ಥಳಾಂತರಿಸಿದ್ದಕ್ಕೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು ಅವರ ಈ ಆಕ್ರೋಶಕ್ಕೂ ಬೆಲೆಯಿದೆ ಎಂದು ಶ್ರೀರಾಮುಲು ಹೇಳಿದ್ದಾರೆ.

    “ಕುಮಾರಸ್ವಾಮಿಯವರ ಹೇಳಿಕೆ ಸರಿಯಾಗಿಯೇ ಇದೆ” ಎಂದು ಸಚಿವರು ಹೇಳುವ ಮೂಲಕ, ಸರಕಾರಕ್ಕೆ ಮುಜುಗರ ತಂದಿದ್ದಾರೆ.“ರಾಮನಗರ ಜಿಲ್ಲೆಗೆ ಆರೋಪಿಗಳನ್ನು ಸ್ಥಳಾಂತರಿಸಿದರೆ ಅಲ್ಲಿಗೂ ಸೋಂಕು ಹರಡಬಹುದು ಎನ್ನುವುದು ಕುಮಾರಸ್ವಾಮಿಯವರ ನಿಲುವಾಗಿದೆ. ರಾಮನಗರ ಗ್ರೀನ್ ಝೋನ್ ನಲ್ಲಿದೆ”.

     “ಪಾದರಾಯನಪುರದ ಘಟನೆಯಲ್ಲಿನ ಬಂಧಿತರನ್ನು ರಾಮನಗರ ಜೈಲಿಗೆ ಸ್ಥಳಾಂತರಿಸಿರುವ ನಿರ್ಧಾರ ಬಂಧೀಖಾನೆ ಡಿಜಿಪಿ ಅಲೋಕ್ ಮೋಹನ್ ಅವರದ್ದು. ಅಲೋಕ್ ಮೋಹನ್ ಅವರಿಗೆ ಹಿಂದಿನಿಂದಲೂ ನನ್ನ ಮೇಲೆ ಸಿಟ್ಟಿದೆ. ನನ್ನ ಮೇಲಿನ ದ್ವೇಷವನ್ನು ತೀರಿಸಿಕೊಳ್ಳಲು ರಾಮನಗರದ ನನ್ನ ಜನತೆಗೆ ತೊಂದರೆಯನ್ನು ಕೊಡುತ್ತಿದ್ದಾರೆ” ಎಂದು ಕುಮಾರಸ್ವಾಮಿ ಕಿಡಿಕಾರಿದ್ದರು
     “ರಾಮನಗರ ಕಾರಾಗೃಹದಲ್ಲಿ ಇರಿಸಲಾಗಿದ್ದ ಪಾದರಾಯನಪುರದ ಗಲಭೆಕೋರರ ಪೈಕಿ ಇಬ್ಬರಿಗೆ ಕೊರೋನಾ ವೈರಸ್ ತಗುಲಿರುವ ಪಾಸಿಟಿವ್ ವರದಿ ಬಂದಿದೆ. ರಾಮನಗರ ಜೈಲಿನಲ್ಲಿ ಇರಿಸಲಾಗಿರುವ ಕೈದಿಗಳನ್ನು ಸಕಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ತಕ್ಷಣವೇ ಸ್ಥಳಾಂತರಿಸದಿದ್ದರೆ ನಾಳೆಯಿಂದ ಉಗ್ರ ಪ್ರತಿಭಟನೆ ಮಾಡುತ್ತೇನೆ” ಎಂದು ಕುಮಾರಸ್ವಾಮಿ ಎಚ್ಚರಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link