ಎಸ್‍ಆರ್‍ಎಸ್ ಶಾಲೆಯಲ್ಲಿ ದಸರಾ ವೈಭವದ ಗೊಂಬೆ ಪ್ರದರ್ಶನಕ್ಕೆ ಚಾಲನೆ

ಚಳ್ಳಕೆರೆ

      ನಾಡಿನ ಪ್ರಸಿದ್ದ ಮೈಸೂರು ದಸರಾ ಉತ್ಸವ ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ಮೈಸೂರು ದಸರಾ ವೈಭವ ಕುರಿತು ಮಾಹಿತಿ ನೀಡುವ ದೃಷ್ಠಿಯಿಂದ ಇಲ್ಲಿನ ಎಸ್‍ಆರ್‍ಎಸ್ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ಶಾಲಾ ಆಡಳಿತ ಮಂಡಳಿ ಗೊಂಬೆಗಳ ಪ್ರದರ್ಶನವನ್ನು ಏರ್ಪಡಿಸಿತ್ತು.

     ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಬಿ.ಎಸ್.ವಿಜಯ, ಕರ್ನಾಟಕದ ಅತ್ಯಂತ ವೈಭವದ ಮತ್ತು ನಾಡ ಸಂಸ್ಕತಿ, ಸಂಪ್ರದಾಯ ಬದ್ದ ಮೈಸೂರು ದಸರಾ ಉತ್ಸವ ಪ್ರತಿವರ್ಷದಂತೆ ಈ ವರ್ಷವೂ ಸಂಭ್ರಮ, ಸಡಗರಗಳಿಂದ ನಡೆಯಲಿದೆ.

     ಶಾಲಾ ಮಕ್ಕಳಿಗೆ ಈ ಬಗ್ಗೆ ಮೈಸೂರು ದಸರಾ ಹಬ್ಬದ ಆಕರ್ಷಣಿಯ ಆಚರಣೆಗಳಲ್ಲಿ ಒಂದಾದ ಗೊಂಬೆಗಳ ಹಬ್ಬ ಮತ್ತು ಪ್ರದರ್ಶನವನ್ನು ಏರ್ಪಡಿಸುವ ಮೂಲಕ ಎಲ್ಲಾ ಮಕ್ಕಳಿಗೆ ಮೈಸೂರು ದಸರಾ ಹಬ್ಬಕ್ಕೆ ಹೆಚ್ಚಿನ ವಿಚಾರಗಳನ್ನು ತಿಳಿಸಲು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳಿಂದ ಪೋಷಕರಿಂದ ಮತ್ತು ಶಾಲಾ ಆಡಳಿತ ಮಂಡಳಿಯಿಂದ ಉತ್ತಮ ಸಹಕಾರ ದೊರತಿದೆ ಎಂದರು.

         ಉಪ ಪ್ರಾಂಶುಪಾಲೆ ಅನಿತಾ ಮಾತನಾಡಿ, ಮೈಸೂರು ದಸರಾ ಪ್ರತಿಯೊಬ್ಬರ ಮನದಲ್ಲೂ ಹೆಚ್ಚು ಸಂತೋಷವನ್ನು ಮೂಡಿಸುವ ಅಬ್ದುತ ಕಾರ್ಯಕ್ರಮವಾಗಿದೆ. ಕೇವಲ ಕರ್ನಾಟಕವಷ್ಟೇಯಲ್ಲ, ರಾಷ್ಟ್ರದ ಮೂಲೆ, ಮೂಲೆಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಹಾಗೂ ವಿದೇಶಿಯರು ಸಹ ನಾಡ ಹಬ್ಬ ದಸರಾ ವೀಕ್ಷಣೆಗೆ ಆಗಮಿಸುತ್ತಾರೆ. ಇಂತಹ ಚರಿತ್ರಾರ್ಹ ನಾಡ ಹಬ್ಬದ ವೈಶಿಷ್ಟ್ಯವನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಲು ಈ ಕಾರ್ಯಕ್ರಮ ಯೋಜಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಶಾಲೆ ಹಾಗೂ ಕಾಲೇಜಿನ ಉಪನ್ಯಾಸಕಾರ ಸಹನ, ಹರೀಶ್, ತಹೀರ್‍ಖಾನ್ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link