ಚಿತ್ರದುರ್ಗ
ಚಿತ್ರದುರ್ಗ ಜಿಲ್ಲೆಯಲ್ಲಿ 2018-19 ನೇ ಸಾಲಿನ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ಕಳಪೆ ಫಲಿತಾಂಶ ತೋರುವ ಶಾಲೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಎಚ್ಚರಿಕೆ ನೀಡಿದರು.
ಜಿಲ್ಲೆಯ 2017-18 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಫಲಿತಾಂಶದ ವಿಶ್ಲೇಷಣೆ ಹಾಗೂ ಈ ಬಾರಿಯ ಫಲಿತಾಂಶ ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತುಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ಸಭೆಯಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಈ ವರ್ಷದ ಫಲಿತಾಂಶಉತ್ತಮವಾಗಬೇಕು.ಎಲ್ಲ ಶಾಲೆಗಳೂ ಶೇ.100 ರಷ್ಟು ಫಲಿತಾಂಶದ ಗುರಿಯನ್ನಿಟ್ಟುಕೊಂಡೇ ತಮ್ಮ ಪ್ರಯತ್ನವನ್ನು ಮುಂದುವರೆಸಬೇಕು.ಈ ಬಾರಿಚಿತ್ರದುರ್ಗಜಿಲ್ಲೆರಾಜ್ಯ ಮಟ್ಟದಲ್ಲಿ 10 ರೊಳಗೆ ಸ್ಥಾನ ಪಡೆಯಬೇಕು.
ಕಳೆದ ವರ್ಷದ ಎಸ್‍ಎಸ್‍ಎಲ್‍ಸಿ ಫಲಿತಾಂಶವನ್ನು ಅವಲೋಕಿಸಿದಾಗ, ಶೇ.81.46 ಫಲಿತಾಂಶ ಬಂದಿದ್ದು, ರಾಜ್ಯ ಮಟ್ಟದಲ್ಲಿ 16 ನೇ ಸ್ಥಾನದಲ್ಲಿದೆ.ಜಿಲ್ಲೆಯಲ್ಲಿ 51 ಶಾಲೆಗಳು ಶೇ.60 ಕ್ಕಿಂತಕಡಿಮೆ ಫಲಿತಾಂಶ ಪಡೆದಿದ್ದು, ಈ ಪೈಕಿ ಸರ್ಕಾರಿ ಶಾಲೆಗಳು-09, ಅನುದಾನರಹಿತ- 11 ಹಾಗೂ ಅನುದಾನಿತ- 31 ಶಾಲೆಗಳಲ್ಲಿ ಕಡಿಮೆ ಫಲಿತಾಂಶ ಬಂದಿದೆ.ಅಂದರೆ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳೇ ಉತ್ತಮ ಸಾಧನೆತೋರಿವೆ.
ಸರ್ಕಾರದಿಂದ ಅನುದಾನ, ಸವಲತ್ತುಗಳನ್ನು ಪಡೆದು, ಶಾಲೆಗಳನ್ನು ನಡೆಸುವಅನುದಾನಿತ ಶಾಲೆಗಳೇ ಹೆಚ್ಚು ಕಳಪೆ ಸಾಧನೆತೋರಿರುವುದು ಕಂಡುಬಂದಿದೆ.ಶಾಲಾ ಆಡಳಿತ ಮಂಡಳಿಗಳು ಕೇವಲ ಅನುದಾನ ಪಡೆಯುವ ಸಲುವಾಗಿಯೇ ಮಕ್ಕಳನ್ನು ದಾಖಲಿಸಿಕೊಂಡು, ಬಳಿಕ ಅವರೆಡೆಗೆ ಗಮನ ನೀಡದಿರುವುದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುವ ನಿಟ್ಟಿನಲ್ಲಿತೋರುವ ನಿರ್ಲಕ್ಷ್ಯಧೋರಣೆಯಿಂದಾಗಿ ಕಳಪೆ ಫಲಿತಾಂಶ ಬಂದಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.
ಇನ್ನುಅನುದಾನರಹಿತ ಶಾಲೆಗಳು, ಅರ್ಹ ಶಿಕ್ಷಕರನ್ನು ನೇಮಿಸಿಕೊಳ್ಳದಿರುವುದು, ಶಿಕ್ಷಕರಿಗೆ ಕಡಿಮೆ ವೇತನ ನೀಡುವುದು, ವಿಷಯಾಧಾರಿತ ಶಿಕ್ಷಕರ ಸಂಖ್ಯೆಇಲ್ಲದಿರುವುದು ಸೇರಿದಂತೆ ಹಲವು ಕಾರಣಗಳಿಂದ ಉತ್ತಮ ಫಲಿತಾಂಶ ಬರುತ್ತಿಲ್ಲಎಂದುಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಮಕ್ಕಳ ಶೈಕ್ಷಣಿಕ ಭವಿಷ್ಯದೊಂದಿಗೆ ಚೆಲ್ಲಾಟವಾಡುವ ಶಾಲೆಗಳನ್ನು ಸುಮ್ಮನೆ ಬಿಡುವುದಿಲ್ಲ.
ಮಕ್ಕಳಿಂದ ಹೆಚ್ಚು ಶುಲ್ಕವನ್ನು ಪಡೆದು, ನಿಮ್ಮಕರ್ತವ್ಯ ಪಾಲನೆಯಲ್ಲಿ ವಿಫಲರಾಗುತ್ತಿದ್ದೀರಿ.ಕೇವಲ ಹೆಸರಿಗಷ್ಟೇ ಶಾಲೆಗಳನ್ನು ನಡೆಸಿ, ಮಕ್ಕಳಿಗೆ ಸಮಯಕ್ಕೆ ಸರಿಯಾಗಿಗುಣಮಟ್ಟದ ಶಿಕ್ಷಣ ನೀಡದಿದ್ದರೆ, ಮಕ್ಕಳು ಮುಂದಿನ ಬದುಕು ಕಟ್ಟಿಕೊಳ್ಳುವುದು ಹೇಗೆ.
ಸಮಾಜದಲ್ಲಿಆತನ ಸ್ಥಾನಮಾನ ಏನು, ದೇಶಕ್ಕೆಆತಯಾವರೀತಿಕೊಡುಗೆ ನೀಡುತ್ತಾನೆ, ಮಕ್ಕಳ ಹಾಗೂ ಪಾಲಕರ ಮನಸ್ಥಿತಿ ಏನಾಗಬೇಕು ಎನ್ನುವುದನ್ನು ನೀವು ಯೋಚಿಸಿದ್ದೀರ ಎಂದುಕಿಡಿಕಾರಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿನಅನುದಾನಿತ ಶಾಲೆಗಳಲ್ಲಿ ದಾಖಲಾದ ಮಕ್ಕಳ ಸಂಖ್ಯೆ, ಹಾಜರಾಗುತ್ತಿರುವ ಮಕ್ಕಳ ಸಂಖ್ಯೆ, ಗೈರು ಹಾಜರಿಇದ್ದರೆ, ಆ ಮಕ್ಕಳು ಏಲ್ಲಿಗೆ ಹೋದರು, ಇವೆಲ್ಲವನ್ನೂಆಯಾಕ್ಷೇತ್ರ ಶಿಕ್ಷಣಾಧಿಕಾರಿಗಳು ಪರಿಶೀಲಿಸಿ, ಒಂದು ವಾರದ ಒಳಗಾಗಿ ವರದಿ ಸಲ್ಲಿಸಬೇಕು. ಈ ವರದಿಯನ್ನಾಧರಿಸಿ, ಅಂತಹ ಶಾಲೆಗಳ ವಿರುದ್ಧಕ್ರಮ ಕೈಗೊಳ್ಳಲಾಗುವುದು.2018-19 ನೇ ಸಾಲಿನ ಪರೀಕ್ಷೆಯಲ್ಲಿ ಕಳಪೆ ಫಲಿತಾಂಶತೋರುವ ಶಾಲೆಗಳ ಮಾನ್ಯತೆಯನ್ನುರದ್ದುಪಡಿಸಲಾಗುವುದುಎಂದುಜಿಲ್ಲಾಧಿಕಾರಿ ವಿನೋತ್ ಪ್ರಿಯಾಅವರುಎಚ್ಚರಿಕೆ ನೀಡಿದರು.
ಪ್ರತಿ ವಿದ್ಯಾರ್ಥಿಯ ಫಲಿತಾಂಶವೂ ಮುಖ್ಯ
ಜಿಲ್ಲೆಯ ಫಲಿತಾಂಶ ಮಟ್ಟವನ್ನು ಸುಧಾರಿಸಬೇಕೆಂದರೆ, ಪ್ರತಿಯೊಬ್ಬ ವಿದ್ಯಾರ್ಥಿಯ ಫಲಿತಾಂಶವೂ ಇಲ್ಲಿ ಪ್ರಮುಖವಾಗಲಿದೆ. ಹೀಗಾಗಿ, ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಯ ಬಗ್ಗೆಯೂ ಶಿಕ್ಷಕರು ನಿಗಾ ವಹಿಸಬೇಕು. ಆತನ ಕಲಿಕಾ ಸಾಮಥ್ರ್ಯ, ಶಿಕ್ಷಣದ ಗುಣಮಟ್ಟ, ಯಾವ ವಿಷಯದಲ್ಲಿ ಆತ ಕಲಿಕೆಯಲ್ಲಿ ಹಿಂದುಳಿದಿದ್ದಾನೆ ಎಂಬುದನ್ನು ಗುರುತಿಸಿ, ಅಂತಹವರಿಗೆ ವಿಶೇಷ ಕ್ರಮಕೈಗೊಂಡು, ಆತ ಉತ್ತೀರ್ಣನಾಗುವ ರೀತಿ ಪಾಸಿಂಗ್ ಪ್ಯಾಕೇಜ್‍ರೂಪಿಸಬೇಕು ಎಂದು ಜಿಲ್ಲಾಧಿಕಾರಿಗಳು ಸಲಹೆ ನೀಡಿದರು
ವಿಷಯವಾರು ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಸಾಮಥ್ರ್ಯ ಪರಿಶೀಲಿಸಬೇಕು.
ಒಂದು ಅಥವಾಎರಡು ವಿಷಯಗಳಲ್ಲಿ ಫೇಲ್ ಆಗುವ ಸಾಧ್ಯತೆಗಳು ಕಂಡುಬಂದರೆ, ಪರ್ಯಾಯ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು.ಡಿಡಿಪಿಐ ಹಾಗೂ ಬಿಇಒ ಗಳು ಎಲ್ಲ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳೊಂದಿಗೆ ಸಭೆ ನಡೆಸಿ, ಮಕ್ಕಳಿಗೆ ಸಮರ್ಪಕ ಶಿಕ್ಷಣ ಒದಗಿಸುವಂತೆ ಹಾಗೂ ಶಿಕ್ಷಕರಿಗೆ ಸರಿಯಾಗಿ ವೇತನ ನೀಡುವಂತೆ ತಿಳಿಸಬೇಕು.ಅಲ್ಲದೆ ಫಲಿತಾಂಶ ಸುಧಾರಿಸಲು ಸಾಧ್ಯವಾಗದಿದ್ದಲ್ಲಿ , ಮಾನ್ಯತೆ ಹಿಂಪಡೆಯುವಕುರಿತುಎಚ್ಚರಿಕೆಯನ್ನು ನೀಡುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಶಾಲೆ ನಡೆಸಲಾಗದಿದ್ದರೆ ಬಿಟ್ಟುಬಿಡಿ:
ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಅಧಿಕಾರಿ ಪಿ.ಎನ್. ರವೀಂದ್ರಅವರು, ಕಳಪೆ ಫಲಿತಾಂಶತೋರಿದ ಶಾಲೆಗಳನ್ನುದ್ದೇಶಿಸಿ ಮಾತನಾಡಿ, ಶಾಲೆಯನ್ನು ಸರಿಯಾಗಿ ನಡೆಸಲು ಸಾಧ್ಯವಾಗದಿದ್ದರೆ, ಬಿಟ್ಟುಬಿಡಿ, ಮಕ್ಕಳ ಭವಿಷ್ಯ ಏಕೆ ಹಾಳು ಮಾಡುತ್ತೀರಿ. ನಿಮ್ಮ ಶಾಲೆಯ ಮಕ್ಕಳನ್ನು ನಾವೇ ಸಮೀಪದ ಸರ್ಕಾರಿ ಶಾಲೆಗಳಲ್ಲಿ ದಾಖಲಿಸಿಕೊಂಡು, ಒಳ್ಳೆಯ ವ್ಯವಸ್ಥೆ ಕಲ್ಪಿಸಿ ಗುಣಮಟ್ಟದ ಶಿಕ್ಷಣ ನೀಡುತ್ತೇವೆಎಂದು ತೀಕ್ಷ್ಣ ಮಾತುಗಳಿಂದ ಎಚ್ಚರಿಸಿದರು.
ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಪಾಲಕರು ಉದ್ಯೋಗವನ್ನು ಅರಸಿ, ವಲಸೆ ಹೋಗುತ್ತಿರುವುದರಿಂದ, ಅಂತಹ ಕುಟುಂಬಗಳ ಮಕ್ಕಳ ಶಿಕ್ಷಣ ಕುಂಠಿತವಾಗುವ ಸಾಧ್ಯತೆಗಳಿವೆ. ಶಾಲಾ ಶಿಕ್ಷಕರು, ಅಂತಹ ಕುಟುಂಬಗಳ ಪಟ್ಟಿ ಮಾಡಿ, ಮಕ್ಕಳನ್ನು ಗುರುತಿಸಿ ನೀಡಿದಲ್ಲಿ, ಅಂತಹವರಿಗೆ ಹಾಸ್ಟೆಲ್ ವ್ಯವಸ್ಥೆ ಮಾಡಿಕೊಟ್ಟು, ಶಿಕ್ಷಣ ಮುಂದುವರೆಸಲು ಅನುಕೂಲ ಮಾಡಿಕೊಡಲಾಗುವುದು.ಅಲ್ಲದೆ ಪಾಲಕರಿಗೂ ವಲಸೆ ಹೋಗುವುದನ್ನುತಡೆಯಲು, ಸ್ಥಳೀಯವಾಗಿಯೇ ಉದ್ಯೋಗಖಾತ್ರಿಯೋಜನೆಯಡಿ ಕೂಲಿ ಕೆಲಸ ಕೊಡಲಾಗುವುದು ಎಂದರು
ಡಿಡಿಪಿಐ ಅಂಥೋನಿ ಮಾತನಾಡಿ, ಈ ಬಾರಿಯ ಎಸ್‍ಎಸ್‍ಎಲ್‍ಸಿ ಫಲಿತಾಂಶವನ್ನು ಸುಧಾರಿಸಲುಆರಂಭದಿಂದಲೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಶಿಕ್ಷಕರ ಸಾಮಥ್ರ್ಯಅಭಿವೃದ್ಧಿಕಾರ್ಯಗಾರಆಯೋಜನೆ, ಪೋಷಕರ ಸಭೆಗಳು, ವಿದ್ಯಾರ್ಥಿಗಳಿಗೆ ಪ್ರೇರಣೆ, ವಿಷಯಾಧಾರಿತತಜ್ಞರಿಂದ ವಿಶೇಷ ಬೋಧನೆ, ಯೋಗ ಮತ್ತುಧ್ಯಾನ, ಗುಂಪು ಅಧ್ಯಯನ, ರಸ ಪ್ರಶ್ನೆ ಕಾರ್ಯಕ್ರಮಗಳು, ಮನೆ ಮನೆ ಭೇಟಿ, ನಿಧಾನಕಲಿಕೆಯ ಮಕ್ಕಳ ಬಗ್ಗೆ ಕಾಳಜಿ.ಪಾಸಿಂಗ್ ಪ್ಯಾಕೇಜ್‍ನಂತಹ ವಿಶೇಷ ಕ್ರಮಗಳು.ತಾಲ್ಲೂಕು ಮಟ್ಟದ ನೋಡಲ್ ಅಧಿಕಾರಿಗಳ ನೇಮಕ. ಶಿಕ್ಷಕರಿಗೆ ಬೋಧನಾಕೌಶಲ್ಯಕುರಿತತರಬೇತಿ ನೀಡುವಂತಹ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
