ದೇವರಹಳ್ಳಿ ಚೆಕ್ ಪೋಸ್ಟ್ ಗೆ ಎಸ್ ಪಿ ಭೇಟಿ..!

ಎಂ ಎನ್ ಕೋಟೆ :

      ಗುಬ್ಬಿ ತಾಲ್ಲೂಕಿನ ದೇವರಹಳ್ಳಿ ಚೆಕ್ ಪೋಸ್ವ್ ಗೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣರವರು ಶನಿವಾರ ಧಿಡೀರ್ ಭೇಟಿ ನೀಡಿ ಸಿಬ್ಬಂದಿಗಳ ಪರಿಶೀಲನೆ ಮಾಡಿ ನಂತರ ಹೆದ್ದಾರಿಗಳಲ್ಲಿ ಬರುವ ವಾಹನಗಳನ್ನು ಎಸ್ ಪಿಯವರೇ ನೇರವಾಗಿ ತಪಾಸಣೆ ಮಾಡಿದರು. ಕರೋನಾ ವೈರೆಸ್ ಬಗ್ಗೆ ಸಾರ್ವಜನಿಕರು ಯಾವ ರೀತಿ ಮುಂಜಾಗ್ರತೆ ವಹಿಸಬೇಕು ಎಂಬ ಬಗ್ಗೆ ಮನವರಿಕೆ ಮಾಡಿಸಿದರು.

      ನಂತರ ರೈಲ್ವೆ ಅಂಡರ್‍ಪಾಸ್ ಬಳಿ ಅನವಶ್ಯಕವಾಗಿ ಓಡಾಡುತ್ತಿದ್ದ ಬೈಕ್ ಸವಾರರನ್ನು ಎಸ್ ಪಿ ಯವರು ವಿಚಾರಿಸಿ ಅನವಶ್ಯಕವಾಗಿ ಓಡಾಡಬಾರದು ಎಂದು ಬೈಕ್ ಸವಾರರಿಗೆ ಮನವಿ ಮಾಡಿದರು. ನಂತರ ಚೇಳೂರು ಮಾರ್ಗವಾಗಿ ತುಮಕೂರಿಗೆ ತೆರಳಿದರು.ಗುಬ್ಬಿ ಸಿಪಿಐ ರಾಮಕೃಷ್ಠಯ್ಯ , ಪಿಎಸ್ ಐ ವಿಜಯ್ ಕುಮಾರ್ , ಸಿಬ್ಬಂದಿಗಳಾದ ಮಧು, ರವಿಕುಮಾರ್ , ನಟರಾಜು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link