ಬೆಂಗಳೂರು:
ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ ಬೃಹತ್ ಶಬ್ಧವೊಂದು ಕೇಳಿ ಬಂದಿದ್ದು, ಬೆಂಗಳೂರಿಗರಲ್ಲಿ ಭಯ ಉಂಟುಮಾಡಿದೆ ನಗರದಾದ್ಯಂತ ಕೇಳಿಸಿರುವ ಬೃಹತ್ ಶಬ್ಧ ಜನರಲ್ಲಿ ಅಚ್ಚರಿಗೆ ಕಾರಣವಾಗಿದ್ದು, ಇದುವರೆಗೂ ಯಾವುದೇ ರೀತಿಯ ಅಪಾಯದ ವರದಿ ಕಂಡುಬಂದಿಲ್ಲ.
ಪ್ರಮುಖವಾಗಿ ಪೂರ್ವ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಕಲ್ಯಾಣ ನಗರ, ಎಂ.ಜಿ.ರೋಡ್, ಮಾರತ್‌ಹಳ್ಳಿ, ವೈಟ್‌ಫೀಲ್ಡ್, ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ ಹಾಗೂ ಹೆಬ್ಬಗೋಡಿಯಲ್ಲಿ ಹೆಚ್ಚಿನ ಪ್ರಮಾಣದ ಶಬ್ಧ ಕೇಳಿ ಬಂದಿದೆ.
ಶಬ್ಧ ಎಲ್ಲಿಂದ ಬಂತು ಎಂಬುದು ಇನ್ನು ನಿಗೂಢವಾಗಿದ್ದು, ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಪ್ರಾಧಿಕಾರದ ವಿಜ್ಞಾನಿಗಳು ಶಬ್ಧದ ಮೂಲವನ್ನು ಪತ್ತೆ ಹಚ್ಚುವ ಕೆಲಸವನ್ನು ಮಾಡುತ್ತಿದ್ದಾರೆ. ಬೃಹತ್ ಶಬ್ಧದ ಬಗ್ಗೆ ಬೆಂಗಳೂರಿನ ನಾಗರಿಕರು ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ಹಂಚಿಕೊಳ್ಳುತ್ತಿದ್ದು, ಭೂಕಂಪದ ಆತಂಕವನ್ನು ಕೂಡ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು, ಕೆಲವು ಜನ ಬೆಂಗಳೂರಿನಲ್ಲಿ ಯುದ್ಧ ವಿಮಾನಗಳ ಹಾರಾಟ ಹೆಚ್ಚಾಗಿರುವುದರಿಂದ ಈ ಶಬ್ಧವನ್ನು ಕೇಳಿರಬಹುದು ಎಂದು ಊಹಿಸಿದ್ದಾರೆ. ಅನೇಕರಿಗೆ ಭೂಕಂಪನದ ಅನುಭವವಾಗಿದೆ. ಆದರೆ, ಇದು ಮೇಲ್ನೋಟಕ್ಕೆ ಭೂಕಂಪನ ಅಲ್ಲ ಎಂದು ತಜ್ಞರು ಹೇಳು ತ್ತಿದ್ದು, ಆಂಫಾನ್ ಚಂಡಮಾರುತದಿಂದ ಈ ರೀತಿ ಶಬ್ಧ ಉಂಟಾಗಿರಬಹುದು ಎಂದು ಭೂಗರ್ಭ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ