ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿ ಕೈಬಿಟ್ಟ ರಾಜ್ಯ ಸರ್ಕಾರ..!

ಪಾವಗಡ ;-

       ತಾಲ್ಲೂಕಿನಲ್ಲಿ ಸತತವಾಗಿ 10 ವರ್ಷಗಳಿಂದ ಮಳೆ ಅಭಾವ ಕಂಡಿದ್ದು,ರೈತರು ಇಟ್ಟ ಬೆಳೆ ನಾಶವಾಗುತ್ತಿದ್ದು,ಇದನ್ನು ಕೆಲ ರೈತರು ಪರಿರ್ಯಾಯವಾಗಿ ಹೈನುಗಾರಿಕೆ ಜೋತೆಗೆ ಕುರಿ ಮತ್ತು ಮೇಕೆ ಸಾಕಾಣಿಕೆ,ಜೀವನ ವೃತ್ತಿಯನ್ನಾಗಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಮಳೆ ಅಭಾವದಿಂದ ದನ ಕರುಗಳಿಗೆ ಮೇವು ಇಲ್ಲದೆ ದನಕರುಗಳನ್ನು ಸಂತೆಯಲ್ಲಿ ಮಾರಾಟ ಮಾಡುವ ಪರಿಸ್ಥಿತಿ ಎದುರಾಗಿದೆ ,ಮುಂದಿನ ದಿನಗಳಲ್ಲಿ ಯಾವ ರೀತಿ ಜೀವನ ನಡೆಸಬೇಕು ಎಂಬುದು ರೈತರ ಪ್ರಶ್ನೆಯಾಗಿದೆ.

         ರಾಜ್ಯ ಸರ್ಕಾರ ಪಾವಗಡ ತಾಲ್ಲೂಕನ್ನು ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿ ಕೈಕಟ್ಟಿ ಕುಳಿತರೆ ಹೇಗೆ? ಇಲ್ಲಿನ ರೈತರು ಸಮಸ್ಯೆಗಳನ್ನು ಎದರಿಸುವುದು ಹೇಗೆ.ರೈತರು ವ್ಯವಸಾಯನ್ನು ನಂಬಿದರ ಪರಿಣಾಮ ಕೈ ಸುಡುತ್ತಿದ್ದು,ಪರ್ಯಾಯವಾಗಿ ಕುರಿ ಸಾಕಾಣಿಕೆ ಮಾಡಬೇಕಾದರೆ ಮೇವು ಮತ್ತು ಕುಡಿಯುವ ನೀರಿನ ಕೊರತೆ ಇದ್ದು,ತಾಲ್ಲೂಕಿನಲ್ಲಿ ಯಾವುದೇ ಶ್ವಾಶತ ನೀರಿನ ಯೋಜನೆ ಜಾರಿಯಾಗಿಲ್ಲ,ಇವೇಲ್ಲವನ್ನು ಬಿಟ್ಟು ಕೆಲಸ ಮಾಡಬೇಕಾದ ಪರಿಸ್ತತಿ ಬಂದೊದಗಿದೆ .

      ಒಂದು ಕೈಗಾರಿಕೆ ಸಹ ಅನುಷ್ಠಾನವಾಗಿಲ್ಲ,ವಿಶ್ವದಲ್ಲಿ ಅತಿ ದೊಡ್ಡ ಸೋಲಾರ್ ಪಾರ್ಕ್ ಪಾವಗಡ ತಾಲ್ಲೂಕಿನಲ್ಲಿ ನಿರ್ಮಾಣವಾದರು ಸಹ ಯಾರಿಗೂ ಕೆಲಸ ಕೊಟ್ಟಿಲ್ಲ ,ಈ ರೀತಿ ಇರುವಾಗ ಯಾವರೀತಿ ಜೀವನ ನಡೆಸಬೇಕು ಎಂಬುದು ಜನತೆಯ ಅಳಲಾಗಿದೆ.

       ಸರ್ಕಾರ ಮಾಡಬೇಕಾದ ಮೊದಲು ಕೆಲಸ ಎಂದರೆ ಕುಡಿಯುವ ನೀರು ಮತ್ತು ದನಕರುಗಳಿಗೆ ಮೇವು ಒದಗಿಸುವುದು ,ತಾಲ್ಲೂಕಿನಲ್ಲಿ ಯಾವುದೇ ಭಾಗದಲ್ಲಿ ಮಳೆಯಾಗಿಲ್ಲ,ಕೆರೆ ಕುಂಟೆಗಳಲ್ಲಿ ಕುಡಿಯಲೂ ಸಹ ನೀರಿಲ್ಲದೇ ಪರಿದಾಡುವಂತಾಗಿದ್ದು , ಮೇವು ವಿತ್ತರಣೆ ಮಾಡದಿದ್ದರೆ ದನ ಕರುಗಳು ಮತ್ತು ಮೇಕೆ,ಕುರಿ ಹಸಿವೆಯಿಂದ ಸಾಯುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link