ರಾಜ್ಯಮಟ್ಟದ ಮಡಿವಾಳ ಸಮ್ಮೇಳನ ಯಶಸ್ಸಿಗೆ ಸಹಕರಿಸಲು ಸ್ವಾಮೀಜಿ ಕರೆ.

ಚಳ್ಳಕೆರೆ

          ರಾಜ್ಯದ ಬಹುಸಂಖ್ಯಾತ ಮಡಿವಾಳ ಸಮುದಾಯಕ್ಕೆ ಪರಿಶಿಷ್ಟ ಜಾತಿ ಮೀಸಲಾತಿ ನೀಡುವಂತೆ ಒತ್ತಾಯಿಸುವ ಹಿನ್ನೆಲ್ಲೆಯಲ್ಲಿ ಈಗಾಗಲೇ ಸರ್ಕಾರ ಗಮನ ಸೆಳೆಯಲು ಹೋರಾಟಗಳನ್ನು ನಡೆಸಿದ್ದು, ಸರ್ಕಾರದ ನಿರ್ಲಕ್ಷ್ಯವನ್ನು ವಿರೋಧಿಸಿ ಜನವರಿ ಮಾಹೆಯಲ್ಲಿ ಚಿತ್ರದುರ್ಗದಲ್ಲಿ ಬೃಹತ್ ಸಮಾವೇಶವನ್ನು ನಡೆಸಿ ಸರ್ಕಾರ ಮೇಲೆ ಒತ್ತಡ ಹೇರಲು ನಿರ್ಧರಿಸಿರುವುದಾಗಿ ಚಿತ್ರದುರ್ಗದ ಮಡಿವಾಳ ಪೀಠದ ಶ್ರೀಬಸವ ಮಾಚಿದೇವಸ್ವಾಮಿ ಹೇಳಿದರು.

        ಅವರು, ಭಾನುವಾರ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಮಡಿವಾಳ ಸಮುದಾಯದ ರಾಜ್ಯಮಟ್ಟದ ಸಮ್ಮೇಳದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯದಲ್ಲಿ ಈಗಾಗಲೇ ಸುಮಾರು 40 ಲಕ್ಷಕ್ಕೂ ಹೆಚ್ಚು ಜನ ಮಡಿವಾಳ ಸಮುದಾಯವಿದ್ದು ಕಳೆದ ಹಲವಾರು ದಶಕಗಳಿಂದ ಸರ್ಕಾರದಿಂದ ಯಾವುದೇ ರೀತಿಯ ಸೌಲಭ್ಯ ಪಡೆಯದೆ ವಂಚಿತವಾಗಿದೆ. ಸಮುದಾಯದಲ್ಲಿ ಜಾಗೃತಿ ಮೂಡದ ಹಿನ್ನೆಲ್ಲೆಯಲ್ಲಿ ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಸಲು ಇದುವರೆಗೂ ಸಾಧ್ಯವಾಗಿಲ್ಲ. ಈ ಹಿನ್ನೆಲ್ಲೆಯಲ್ಲಿ ಸಮುದಾಯ ಸಂಘಟಿತವಾಗಿ ಹೋರಾಟದಲ್ಲಿ ಪಾಲ್ಗೊಂಡು ನ್ಯಾಯುತವಾಗಿ ದೊರೆಯಬೇಕಾದ ಭೇಡಿಕೆಗಳನ್ನು ಪಡೆಯುವ ನಿಟ್ಟಿನಲ್ಲಿ ಬೃಹತ್ ರಾಜ್ಯ ಮಟ್ಟದ ಸಮ್ಮೇಳವನ್ನು ಚಿತ್ರದುರ್ಗದಲ್ಲಿ ನಡೆಸಲಾಗುವುದು.

          ಸಮ್ಮೇಳನಕ್ಕೆ ರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ವಿವಿಧ ಪಕ್ಷಗಳ ಗಣ್ಯರನ್ನು ಆಹ್ವಾನಿಸಲಿದ್ದು ಸಮುದಾಯದ ಎಲ್ಲಾ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಸಂಘಟನೆಗಳ ವರ್ಗದ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಬೇಕು ಈ ಹಿನ್ನೆಲ್ಲೆಯಲ್ಲಿ ಈಗಾಗಲೇ ರಾಜ್ಯ ವ್ಯಾಪಿ ಪ್ರವಾಸ ಕೈಗೊಂಡಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

         ಈ ಸಮುದಾಯಕ್ಕೆ ಪರಿಶಿಷ್ಟ ಜಾತಿ ಮೀಸಲಾತಿ ದೊರಕಿದಲ್ಲಿ ಮಾತ್ರ ಈ ಸಮುದಾಯದ ಅಭ್ಯುದಯ ಸಾಧ್ಯ. ಅದ್ದರಿಂದ ತಾಲ್ಲೂಕಿನ ಎಲ್ಲಾ ಮಡಿವಾಳ ಸಮುದಾಯ ಯುವಕರು, ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಸಮುದಾಯದ ಬಂಧುಗಳು ರಾಜ್ಯಮಟ್ಟದ ಸಮವೇಶದಲ್ಲಿ ಪಾಲ್ಗೊಳ್ಳಬೇಕು, ಸಮಾವೇಶದಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ ಎಂದರು.

       ಮಡಿವಾಳ ಸಮಾಜದ ರಾಜ್ಯಾಧ್ಯಕ್ಷ ನಂಜಪ್ಪ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ರಾಜ್ಯಮಟ್ಟದ ಪದಾಧಿಕಾರಿಗಳು ನಿರಂತರ ಹೋರಾಟ ನಡೆಸಿದರೂ ಸಹ ನಿರೀಕ್ಷಿತ ಫಲವನ್ನು ಪಡೆಯಲು ಸಾಧ್ಯವಾಗಿಲ್ಲ. ಸರ್ಕಾರ ಈ ಸಮುದಾಯದ ಬೇಡಿಕೆಯ ಬಗ್ಗೆ ನಿರ್ಲಕ್ಷ್ಯೆ ವಹಿಸಿದೆ. ಸಮುದಾಯದ ಹಲವಾರು ಪ್ರಮುಖ ನಾಯಕರು ಸಹ ಹೋರಾಟದ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಈ ಹಿನ್ನೆಲ್ಲೆಯಲ್ಲಿ ಸಮುದಾಯದ ಪೂಜ್ಯ ಸ್ವಾಮೀಜಿ ಬಸವಮಾಚಿದೇವ ನೇತೃತ್ವದಲ್ಲಿಯೇ ರಾಜ್ಯಮಟ್ಟದ ಸಮಾವೇಶ ನಡೆಸಿ ಸರ್ಕಾರದ ವಿರುದ್ದ ಹೋರಾಟ ನಡೆಸಲಾಗುವುದು. ಈ ಹಿನ್ನೆಲ್ಲೆಯಲ್ಲಿ ಸಮುದಾಯದ ಸಮಸ್ತ ಜನರು ಕೈಜೋಡಿಸುವಂತೆ ಮನವಿ ಮಾಡಿದರು.

        ತಾಲ್ಲೂಕು ಅಧ್ಯಕ್ಷ ಎನ್.ಮಂಜುನಾಥ ಮಾತನಾಡಿ, ಸಮಾವೇಶನಕ್ಕೆ ನಗರವೂ ಸೇರಿದಂತೆ ಗ್ರಾಮೀಣ ಭಾಗದಿಂದ ಸಾವಿರಾರು ಸಂಖ್ಯೆಯಲ್ಲಿ ಸಮುದಾಯದ ಮುಖಂಡರು ತಪ್ಪದೆ ಪಾಲ್ಗೊಳ್ಳಬೇಕು. ಪೂಜ್ಯ ಸ್ವಾಮೀಜಿಯವರೇ ನೇತೃತ್ವ ವಹಿಸುವ ಮೂಲಕ ಜನಾಂಗ ಶ್ರೇಯೋಭಿವೃದ್ಧಿಗೆ ಕಾರಣವಾಗಿದ್ಧಾರೆ ಎಂದರು.

        ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ರಮೇಶ್, ರಾಜ್ಯ ಮಡಿವಾಳ ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ, ಯುವ ಘಟಕದ ರಾಜ್ಯಾಧ್ಯಕ್ಷ ದ್ರುವಕುಮಾರ್, ಅಂಜಿನಪ್ಪ, ಹನುಮಂತರಾಯ, ತಾಲ್ಲೂಕು ಮಡಿವಾಳ ಯುವ ಘಟಕದ ಅಧ್ಯಕ್ಷ ಕರೀಕೆರೆ ನಾಗರಾಜು, ವೀರಣ್ಣ, ನಾಗೇಶ್, ತಿಪ್ಪೇಸ್ವಾಮಿ, ರಾಘವೇಂದ್ರ, ಎನ್.ತಿಪ್ಪೇಶ್, ಸಿದ್ದೇಶ್, ರಾಮಣ್ಣ, ನಾಗರಾಜು ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap