ದಾವಣಗೆರೆ:
ಸಂವಿಧಾನ ಉಳಿಸಿ ಹೋರಾಟ ಸಮಿತಿಯ ವತಿಯಿಂದ ಡಿ.23ರಂದು ಬೆಳಿಗ್ಗೆ 11 ಗಂಟೆಗೆ ನಗರದ ಕುವೆಂಪು ಕನ್ನಡ ಭವನದಲ್ಲಿ `ಸಂವಿಧಾನ ಮತ್ತು ಸಮಕಾಲಿನ ಸಂದರ್ಭ’ ವಿಷಯ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ಏರ್ಪಡಿಸಲಾಗಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಇಮ್ತಿಯಾಜ್ ಹುಸೇನ್ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಡಾಯ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ವಿಚಾರ ಸಂಕಿರಣವನ್ನು ಉದ್ಘಾಟಿಸುವರು. ಕಾರ್ಮಿಕ ಮುಖಂಡ ಹೆಚ್.ಕೆ.ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಉಪ ವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಭಾಗವಹಿಸುವರು. ನ್ಯಾಯವಾದಿ ಅನೀಸ್ ಪಾಷಾ ಉಪಸ್ಥಿತರಿರಲಿದ್ದಾರೆಂದು ಹೇಳಿದರು.
ಮಧ್ಯಾಹ್ನ 12.30ರಿಂದ ನಡೆಯುವ ಗೋಷ್ಠಿಯಲ್ಲಿ ‘ಸಂವಿಧಾನ-ಬಹು ಸಂಸ್ಕøತಿಗಳ ಮೇಲಿನ ದಾಳಿಗಳು’ ವಿಷಯ ಕುರಿತು ಪತ್ರಕರ್ತ ಶಿವಸುಂದರ್ ವಿಷಯ ಮಂಡಿಸಲಿದ್ದಾರೆ. ಹಿರಿಯ ನ್ಯಾಯವಾದಿ ರಾಮಚಂದ್ರ ಕಲಾಲ್ ಅಧ್ಯಕ್ಷತೆ ವಹಿಸುವರು. ಕೆಪಿಟಿಸಿಎಲ್ ಅಭಿಯಂತರ ಕೆ.ಎಸ್.ಜಯಪ್ಪ, ನ್ಯಾಯವಾದಿ ಬಿ.ಎಂ.ಹನುಮಂತಪ್ಪ ಉಪಸ್ಥಿತರಿರುವರು. ಮಧ್ಯಾಹ್ನ 2 ಗಂಟೆಗೆ ಪ್ರಾಧ್ಯಾಪಕ ಡಾ.ಎ.ಬಿ.ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಗೋಷ್ಠಿಯಲ್ಲಿ ‘ಸಂವಿಧಾನಿಕ ಬಹುತ್ವ ಭಾರತದ ಪರಿಕಲ್ಪನೆಗಳು’ ವಿಷಯ ಕುರಿತು ಪ್ರಾಧ್ಯಾಪಕ ಡಾ.ಬಸವರಾಜ್ ಹಾಗೂ ‘ಪ್ರಸ್ತುತ ಸಂದರ್ಭದ ಸಂವಿಧಾನಿಕ ಬಿಕ್ಕಟ್ಟುಗಳು’ ಕುರಿತು ನ್ಯಾಯವಾದಿ ಇಕ್ಬಾಲ್ ಹುಸೇನ್ ವಿಷಯ ಮಂಡಿಸಲಿದ್ದಾರೆ. ನಿವೃತ್ತ ಪ್ರಾಚಾರ್ಯ ಡ.ಮಲ್ಲಿಕಾರ್ಜುನ ಕಲಮರಹಳ್ಳಿ, ಪ್ರಾಧ್ಯಾಪಕ ಡಾ.ಎಂ.ಮಂಜಣ್ಣ, ಸಾಹಿತಿ ಕಲೀಂ ಭಾಷಾ ಉಪಸ್ಥಿತರಿರಲಿದ್ದಾರೆಂದು ಮಾಹಿತಿ ನೀಡಿದರು.
ಸಂಜೆ 4 ಗಂಟೆಗೆ ನಿವೃತ್ತ ಪ್ರಾಂಶುಪಾಲ ಪ್ರೊ.ಸಿ.ಕೆ.ಮಹೇಶ್ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ವಿಚಾರವಾದಿ ಡಾ.ಸಿದ್ದನಗೌಡ ಪಾಟೀಲ್ ಭಾಗವಹಿಸುವರು. ಪ್ರಾಂಶುಪಾಲ ಡಾ.ದಾದಾಪೀರ್ ನವಿಲೇಹಾಳ್, ಎಸ್ಸಿ-ಎಸ್ಟಿ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಹಿರೇಹಳ್ಳಿ ಮಲ್ಲಿಕಾರ್ಜು, ನ್ಯಾಯವಾದಿ ದುರುಗೇಶ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರೊ.ಸಿ.ಕೆ.ಮಹೇಶ್, ರಾಮಚಂದ್ರ ಕಲಾಲ್, ಆವರಗೆರೆ ಚಂದ್ರು, ಕಲೀಂ ಬಾಷಾ ಹರಿಹರ, ಜಯಣ್ಣ ಜಾಧವ್, ಕೆ.ಎಲ್.ಭಟ್, ಖತೀಬ್ ಎಂ.ಎ., ರಂಗನಾಥ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
