ರಾಜಣ್ಣ ಅವರ ವಿರುದ್ಧದ ಹೇಳಿಕೆ ಖಂಡನೀಯ

ಪಾವಗಡ:

       ಮಾಜಿ ಶಾಸಕ ರಾಜಣ್ಣನವರು ಮಧುಗಿರಿಯಲ್ಲಿ ಅಭಿವೃದ್ದಿ ಕಾರ್ಯಗಳನ್ನು ಮಾಡಿ ತುಮಕೂರು ಜಿಲ್ಲೆಯಲ್ಲೇ ಮಾದರಿ ತಾಲೂಕನ್ನಾಗಿ ಮಾಡಿ ಜನರ ಹಾಗೂ ದಲಿತ ವರ್ಗದವರ ಮನ್ನಣೆಗಳಿಸಿದ್ದು ನೆರೆಯ ಕೊರಟಗೆರೆಯಲ್ಲಿ ಡಿ.ಸಿ.ಎಂ ಪರಮೇಶ್ವರ್ ಯಾವುದೇ ಅಭಿವೃದ್ದಿಗೆ ಒತ್ತು ನೀಡದೆ ನಿರ್ಲಕ್ಷ ತೋರಿದ್ಡಾರೆ, ರಾಜಣ್ಣನವರನ್ನು ರಾಜಕೀಯವಾಗಿ ತುಳಿಯುವ ಉದ್ದೇಶಕ್ಕಾಗಿಯೇ ಕೆಲವು ಕಿಡಿಗೇಡಿಗಳು ಅವಹೇಳನಕಾರಿ ಹೇಳಿಕೆ ನೀಡುತ್ತಿರುವುದು ಖಂಡನೀಯ,

      ಈ ಚಾಳಿ ಮುಂದುವರೆದರೆ ನಾಯಕ ಸಮುದಾಯ ಸೇರಿದಂತೆ ವಿವಿದ ದಲಿತ ಸಂಘಟನೆಗಳಿಂದ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ವಾಲ್ಮೀಕಿ ಜಾಗೃತಿ ವೇದಿಕೆ ಅಧ್ಯಕ್ಷ ಪಾಳೇಗಾರ್ ಲೋಕೇಶ್ ಎಚ್ಚರಿಸಿದರು.ಪಾವಗಡ ಪಟ್ಟಣದ ವಾಲ್ಮೀಕಿ ದೇವಸ್ಥಾನದ ಆವರಣದಲ್ಲಿ ತಾಲೂಕು ವಾಲ್ಮೀಕಿ ಸಂಘಟನೆ ಹಾಗೂ ದಲಿತ ಸಂಘಟನೆ ಮತ್ತು ಕೆ.ಎನ್.ರಾಜಣ್ಣ ಅಭಿಮಾನಿ ಬಳಗದ ದಿಂದ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

      ದಲಿತ ಮುಖಂಡ ಕನ್ನಮೇಡಿ ಕೃಷ್ಣಮೂರ್ತಿ ಮಾತನಾಡಿ,ರಾಜ್ಯದ ಉಪಮುಖ್ಯಮಂತ್ರಿ ಸ್ಥಾನದಲ್ಲಿರುವ ಪರಮೇಶ್ವರ್‍ರವರು ತುಮಕೂರು ಜಿಲ್ಲೆಯವರಾಗಿದ್ದು ಜಿಲ್ಲೆಯಲ್ಲಿ ಯಾವುದೇ ಅಭಿವೃದ್ದಿ ಕೆಲಸಗಳಿಗೆ ಒತ್ತು ನೀಡದೆ ಯಾವುದೇ ಸಮುದಾಯದ ಏಳಿಗೆಯನ್ನೂ ಬಯಸದೆ ಕಾಲಹರಣ ಮಾಡುತ್ತಿದ್ದು ತಮ್ಮ ಬೆಂಬಲಿಗರ ಮುಖಾಂತರ ಕುತಂತ್ರ ರಾಜಕೀಯ ಮಾಡುತ್ತಿರುವುದು ನಾಗರೀಕ ಸಮಾಜವನ್ನು ನಾಚಿಸುವಂತಿದೆ ಎಂದು ದೂರಿದ ಅವರು ಡಿ.ಸಿ.ಎಂ ಪರಮೇಶ್ವರ್‍ರವರು ಹುಟ್ಟಿನಿಂದಲೇ ಶ್ರೀಮಂತ ಕುಟುಂಬದಲ್ಲಿ ಬೆಳೆದವರಾಗಿದ್ದು ದಲಿತರ ಕಷ್ಟ-ಸುಖಗಳ ಪರಿಜ್ಞಾನವಿಲ್ಲದೆ ರಾಜಕೀಯ ಮಾಡಿಕೊಂಡು ಬಂದಿದ್ದಾರೆ ಹೊರತು ದಲಿತ ನಾಯಕನಾಗಿ ಎಂದಿಗೂ ಸ್ಪಂದಿಸಿಲ್ಲವಾದ್ದರಿಂದ ದಲಿತರು ಪರಮೇಶ್ವರ್‍ರವರನ್ನು ಒಪ್ಪುವುದಿಲ್ಲ ಎಂದು ಅಸಮದಾನ ವ್ಯಕ್ತ ಪಡಿಸಿದರು.

       ಪಟ್ಟಣದ ವಿ.ಎಸ್.ಎಸ್.ಎನ್. ಕಾರ್ಯದರ್ಶಿ ನಾರಾಯಣಮೂರ್ತಿ ಮಾತನಾಡಿ, ಮಾಜಿ ಶಾಸಕ ಕೆ.ಎನ್.ರಾಜಣ್ಣ ನವರು ಹುಟ್ಟಿನಿಂದಲೂ ಇಲ್ಲಿಯವರೆಗೆ ದಲಿತರ ದು:ಖ-ದುಮ್ಮಾನಗಳನ್ನು ಆಲಿಸಿದ್ದಾರೆ, ಜನಪರ ಕಾರ್ಯಕ್ರಮಗಳ ಮೂಲಕ ದಲಿತರ ಏಳಿಗೆಗೆ ಸ್ಪಂದಿಸಿದ್ದು ದಲಿತ ಸಮುದಾಯಕ್ಕೆ ತನ್ನದೆ ಆದ ಕೊಡುಗೆಗಳನ್ನು ನೀಡುತ್ತಾ ಬಂದಿದ್ದು ಅವರ ವಿರುದ್ದ ಪರಮೇಶ್ವರ್ ಬೆಂಬಲಿಗ ಕೊರಟಗೆರೆ ಜಿ.ಪಂ ಸದಸ್ಯ ನಾರಾಯಣಮೂರ್ತಿ ಹಣದ ಆಮಿಷಕ್ಕೆ ಬಲಿಯಾಗಿ ರಾಜಣ್ಣನವರ ವಿರುದ್ದ ಇಲ್ಲ ಸಲ್ಲದ ಆರೋಪ ಮಾಡುತ್ತಾ ರಾಜಕೀಯವಾಗಿ ತುಳಿಯಲು ಷ್ಯಡ್ಯಂತರ ನಡೆಸುವುದನ್ನು ಕೂಡಲೆ ನಿಲ್ಲಿಸಬೇಕು ಎಂದು ಎಚ್ಚರಿಸದರು.

        ವಾಲ್ಮೀಕಿ ಸಮಾಜದ ಮಹಿಳಾ ಮುಖಂಡರಾದ ರಂಗಮ್ಮ ಮಾತನಾಡಿ ಲೋಕಸಭಾ ಚುನಾವಣೆಯಲ್ಲಿ ದೇವೆಗೌಡರ ಸೋಲಿಗೆ ಕೆ.ಎನ್.ರಾಜಣ್ಣ ಕಾರಣ ಎಂದು ಪರಮೇಶ್ವರ್ ಬೆಂಬಲಿಗರು ಆರೋಪಿಸುತ್ತಿರುವುದು ಸರಿಯಲ್ಲ, ಕೆ.ಎನ್.ರಾಜಣ್ಣ ನವರ ಬೆಂಬಲವಿಲ್ಲದೇ ಜಿಲ್ಲೆಯ ಯಾವುದೇ ತಾಲೂಕಿನಲ್ಲಿ ಕಾಂಗ್ರೆಸ್ ಗೆಲ್ಲಲು ಸಾಧ್ಯವಿಲ್ಲ, ಜಿಲ್ಲೆಯಾದ್ಯಂತ ಸಹಕಾರಿ ಸಂಸ್ಥೆಗಳ ಮೂಲಕ ರೈತರನ್ನು, ದಲಿತರನ್ನು ಸೇರಿದಂತೆ ಎಲ್ಲಾ ಶೋಷಿತರ ಏಳಿಗೆ ಬಯಸಿರುವ ಏಕೈಕ ವ್ಯಕ್ತಿ ರಾಜಣ್ಣ, ಈ ಕೂಡಲೆ ರಾಜಣ್ಣ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿರುವ ನಾರಾಯಣಮೂರ್ತಿಯನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸುವಂತೆ ಆಗ್ರಹಿಸಿದರು.

       ಈ ಸಂದರ್ಭದಲ್ಲಿವಾಲ್ಮೀಕಿದೇವಸ್ಥಾನ ಸಮಿತಿ ಅಧ್ಯಕ್ಷ ಡಿ.ಸಿ.ಸಿ.ಸೀನಪ್ಪ, ಮದಕರಿ ಬ್ಯಾಂಕ್‍ಅಧ್ಯಕ್ಷ ನಾಗರಾಜು, ಶ್ರೀರಾಮಸೇನೆ ತಾಲೂಕು ಅಧ್ಯಕ್ಷ ರಾಮಾಂಜಿನಪ್ಪ, ಎತ್ತಿನಹಳ್ಳಿ ಈರಪ್ಪ,ಗಂಗಪ್ಪ, ಆನಂದಪ್ಪ, ಎ.ಓ.ನಾಗರಾಜ್, ಶ್ರೀನಿವಾಸನಾಯಕ, ಮಂಗಳವಾಡ ನಾಗರಾಜ್,ಕನ್ನಮೇಡಿ ಸುರೇಶ್, ಸಿ.ಕೆಪುರ ಪಾಂಡಪ್ಪ, ವೆಂಕಟೇಶ, ಬೇಕರಿನಾಗರಾಜ್, ಕಲ್ಯಾಣ್ ಸೇರಿದಂತೆ ವಾಲ್ಮೀಕಿ ಸಮುದಾಯದ ಬಂದುಗಳು ಹಾಗೂ ದಲಿತ ಸಂಘಟನೆಯ ಪದಾಧಿಕಾರಿಗಳು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap