ಜಗಳೂರು:
ಪಟ್ಟಣದಲ್ಲಿ ವಾಲ್ಮಿಕಿ, ಮದಕರಿನಾಯಕ, ಬಸವಣ್ಣನವರ ಪುತ್ತಳಿಯನ್ನು ನಿರ್ಮಾಣ ಸೇರಿದಂತೆ ಎಲ್ಲಾ ಸಮಾಜದ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಕ್ಷೇತ್ರದ ಶಾಸಕ ಎಸ್.ವಿ.ರಾಮಚಂದ್ರ ಭರವಸೆ ನೀಡಿದರು.
ಪಟ್ಟಣದ ಗುರುಭವದ ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಮಹರ್ಷಿ ವಾಲ್ಮಿಕಿ ಜಯಂತೋತ್ಸವ ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು.
ಅಧಿಕಾರ ಈಗ ಹೋಗುತ್ತೆ ನಾಳೆ ಹೋಗುತ್ತೆ ಎಂದು ಗಾಳಿ ಸುದ್ದಿ ಹಬ್ಬಿಸುತ್ತಿದ್ದಾರೆ. ರಾಮಚಂದ್ರನ ಅಧಿಕಾರ ಇನ್ನು ನಾಲ್ಕು ವರ್ಷವಿರುತ್ತದೆ. ನಾಯಕಜನಾಂಗದವನಾದ ನನ್ನನ್ನು ಅಧಿಕ ಮತಗಳನ್ನು ನೀಡುವ ಮೂಲಕ ಶಾಸಕನಾಗಿ ನೀವು ನನಗೆ ಅಧಿಕಾರ ಕೊಟ್ಟಿದ್ದೀರಿ. ಅಧಿಕಾರ ನಮ್ಮಪ್ಪನ ಆಸ್ಥಿಯಲ್ಲ. ನಿಮ್ಮ ಆಸ್ಥಿ, ನಿಮಗೆ ತಲೆಬಾಗಿ ಕೆಲಸಮಾಡುತ್ತೇನೆ. ನಾನು ಎಂದವರಿಗೆ ಜನರು ಸರಿಯಾದ ಪಾಠ ಕಲಿಸಲಿದ್ದಾರೆ ಎಂದವರು ಹೇಳಿದರು.
ಭದ್ರಮೇಲ್ದಂಡೆ ಯೋಜನೆ ನನ್ನ ಕನಸಿನ ಯೋಜನೆಯಾಗಿದ್ದು, ಯಡಿಯೂರಪ್ಪನವರು ಸಿ.ಎಂ,.ಆಗಿದ್ದಾಗೆ 18 ಸಾವಿ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿಗೆ ಅನುಮೋದನೆ ನೀಡಿದ್ದು, 5 ವರ್ಷಗಳ ಕಾಲ ನೆನಗುದಿಗೆ ಬಿದ್ದಿದ್ದು ,ನನ್ನ ಅವಧಿಯಲ್ಲೇ ನೀರಾವರಿಯಾಗಲು ಪ್ರಯತಿಸುತ್ತೇನೆ.ಸಿರಿಗೆರೆ ಶ್ರೀಗಳು ಆಶೀರ್ವಾದದಿಂದ ಸರ್ಕಾರದ ಮೇಲೆ ಒತ್ತಡದ ತಂದ ಪರಿಣಾಮ 52 ಕೆರೆಗಳಿಗೆ ಡಿಪಿಆರ್ ನಡೆಯುತ್ತಿದೆ ಎಂದವರು ಹೇಳಿದರು.
ಪಟ್ಟಣದಲ್ಲಿ ರಾಜ್ಯಮಟ್ಟದ ವಾಲಿಬಾಲ್ ಸೇರಿದಂತೆ ವಿವಿಧ ಕ್ರೀಡಾಕೂಟಗಳು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಮಾಡಿಸಲಾಗುವುದೆಂದರು.
ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷೆ ಪುಪ್ಷಾಲಕ್ಷ್ಮಣ್‍ಸ್ವಾಮಿ ಮಾತನಾಡಿ ಶ್ರೀ ಮಹರ್ಷಿವಾಲ್ಮಿಕಿಯವರ ಆಧರ್ಶಗಳನ್ನು ನಾವು ಅಳವಡಿಸಿಕೊಳ್ಳಬೇಕಿದೆ. ನಾಯಕ ಸಮಾಜದ 18 ಶಾಸಕರಿದ್ದು , ಒಗ್ಗಟ್ಟಿನ ಕೊರತೆ ಇದೆ. ನಾವು ಒಗ್ಗಟ್ಟಾದರೆ ಸರ್ಕಾರವೇ ನಮ್ಮ ಕಡೆ ತಿರುಗಿ ನೋಡುವಂತೆ ಮಾಡಬಹುದು. ಮುಂದಿನ ದಿನಗಳಲ್ಲಿ ನಾಯಕ ಸಮಾಜದವರೇ ಮುಖ್ಯಮಂತ್ರಿಯಾಗಲಿದ್ದಾರೆ ಎಂದವರು ಭವಿಷ್ಯ ನುಡಿದರು.
ಜಿ.ಪಂ.ಸದಸ್ಯರಾದ ಎಸ್.ಕೆ.ಮಂಜುನಾಥ್, ಕೆ.ಪಿ.ಪಾಲಯ್ಯ, ರಾಜಣ್ಣ ಸಮಾರಂಭ ಕುರಿತು ಮಾತನಾಡಿದರು. ತೆಲಗಿ ಮಂಜುನಾಥ ವಾಲ್ಮಿಕಿ ಕುರಿತು ವಿಶೇಷ ಉಪಾನ್ಯಾಸ ನೀಡಿದರು. ನಾಯಕ ಸಮಾಜದ ಅಧ್ಯಕ್ಷ ಬೋರಪ್ಪ ನಾಯಕ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಮಾಜದ ವತಿಯಿಂದ ಸಭೆಯಲ್ಲಿ ನಾಯಕ ಸಮಾಜದವರಿಗೆ ಪ್ರತಿಭಾಪುರಸ್ಕಾರ, ಮರಣೋತ್ತರ ಪ್ರಶಸ್ತಿ, ನಿವೃತ್ತನೌಕರರಿಗೆ ಸನ್ಮಾನ, ಶ್ರೀ ವಾಲ್ಮಿಕಿ ಚೈತ್ನ್ಯ ಪುರಸ್ಕಾರ ,ಪ್ರಗತಿ ಪರ ರೈತರಿಗೆ, ಪೋತರಾಜರಿಗೆ ಶಾಸಕರಿಂದ ಪುರಸ್ಕಾರ ನೀಡಲಾಯಿತು. ಶಾಸಕ ಎಸ್.ವಿ.ರಾಮಚಂದ್ರ ,ಇಂದಿರಾ ರಾಮಚಂದ್ರವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸಭೆಗೂ ಮುನ್ನ ಶ್ರೀ ಮಹರ್ಷಿ ವಾಲ್ಮಿಕಿ ಪೋಟೋದೊಂದಿಗೆ ಪಟ್ಟಣದಲ್ಲಿ ವಿವಿಧ ವಾದ್ಯಗಳೊಂದಿಗೆ ಅದ್ಧೂರಿಯಾಗಿ ಮೆರವಣಿಗೆ ಮೂಲಕ ಕಾರ್ಯಕ್ರಮದ ವೇದಿಕಿಗೆ ತರಲಾಯಿತು.
ಈ ಸಂದರ್ಭದಲ್ಲಿ ನಾಯಕ ಸಮಾಜದ ಉಪಾಧ್ಯಕ್ಷ ಓಬಣ್ಣ, ಕಾರ್ಯದರ್ಶಿ ಸೂರಲಿಂಗಪ್ಪ, ಜೆ.ಡಿ.ಎಸ್.ಮುಖಂಡ ದೇವೇಂದ್ರಪ್ಪ, ಇಂದಿರಾರಾಮಚಂದ್ರ, ಜಿ.ಪಂ.ಉಪಾಧ್ಯಕ್ಷೆ ರಷ್ಮಿರಾಜಪ್ಪ, ಸದಸ್ಯರಾದ ಸವಿತಾಕಲ್ಲೇಶಪ್ಪ, ಉಮಾವೆಂಕಟೇಶ್, ಸಿದ್ದಪ್ಪ, ಶಾಂತಕುಮಾರಿ,ಎಪಿಎಂಸಿ ಅಧ್ಯಕ್ಷ ಹನುಮಂತಪ್ಪ, ತಾ.ಪಂ.ಉಪಾಧ್ಯಕ್ಷ ಮುದೇಗೌಡ್ರು ಬಸವರಾಜು, ಅಖಿಲವೀರಶೈವಸಮಾಜದ ಅಧ್ಯಕ್ಷ ಶಿವನಗೌಡ, ಪಂಚಮಶಾಲಿಸಮಾಜದ ಅಧ್ಯಕ್ಷ ಎಂ.ಎಸ್.ಪಾಟೀಲ್, ನಾಯಕ ಸಮಾಜದಮುಖಂಡರುಗಳಾದ ಬಿ.ಲೋಕಣ್ಣ, ರವಿಕುಮಾರ್, ರಮೇಶ್,ಬಿಸ್ತುವಳ್ಳಿಬಾಬು, ಎನ್..ಎಸ್.ರಾಜು, ವಾಮಣ್ಣ, ತಿಮ್ಮಾರೆಡ್ಡಿ, ಹೆಚ್.ನಾಗರಾಜು,ಎ.ಪಾಲಯ್ಯ, ಸೇರಿದಂತೆ,ತಾ.ಪಂ.,ಎಪಿಎಂಸಿ, ಪಟ್ಟಣ ಪಂಚಾಯಿತಿ ಸದಸ್ಯರುಗಳು, ನಾಯಕ ಸಂಘದ ಪಾಧಿಕಾರಿಗಳು, ಮುಖಂಡರುಗಳು, ವಿವಿಧ ಸಮಾಜದ ಮುಖಂಡರುಗಳು, ಚುನಾಯಿತ ಸದಸ್ಯರುಗಳು ಸಭೆಯಲ್ಲಿ ಉಪಸ್ಥತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








