ಭ್ರಷ್ಟಾಚಾರದ ಕಳಂಕದಿಂದ ಸರ್ಕಾರ ಮುಕ್ತವಾಗಲು ವಿದ್ಯಾರ್ಥಿಗಳು, ಯುವಕರು ಸಹಕರಿಸಿ

ಚಳ್ಳಕೆರೆ

        ಯಾವುದೇ ಸರ್ಕಾರದ ಆಡಳಿತಗಳು ಉತ್ತಮವಾಗಿ ರೂಪುಗೊಳ್ಳಬೇಕಾದರೆ ಅವುಗಳಿಗೆ ಭ್ರಷ್ಟಚಾರದ ಕಳಂಕ ಎಂದಿಗೂ ಇರಬಾರದು. ಇಂದು ಸರ್ಕಾರದ ಆಡಳಿತದ ಪ್ರತಿಯೊಂದು ಹಂತದಲ್ಲೂ ಭ್ರಷ್ಟಾಚಾರವೆಂಬ ಭೂತ ಸರ್ಕಾರದ ಖ್ಯಾತಿಗೆ ಕಳಂಕ ತರುವ ಮಟ್ಟಿಗೆ ಹೋಗಿದೆ. ಭ್ರಷ್ಟಾಚಾರದ ವಿರುದ್ದ ಪ್ರತಿಯೊಬ್ಬ ನಾಗರೀಕರೂ ಧ್ವನಿ ಎತ್ತುವ ಕಾಲ ಹತ್ತಿರವಾಗುತ್ತಿದೆ ಎಂದು ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಟಿ.ನಾಗರಾಜು ತಿಳಿಸಿದರು.

        ಅವರು, ಶನಿವಾರ ಇಲ್ಲಿನ ಎಚ್‍ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಕಾಲೇಜು ಆಡಳಿತ ಮಂಡಳಿ, ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗ ಹಮ್ಮಿಕೊಂಡಿದ್ದ ಭ್ರಷ್ಟಚಾರ ವಿರೋಧಿ ಜಾಗೃತಿ ಅರಿವು ಸಪ್ತಾಹ-2018ರನ್ನು ಉದ್ಘಾಟಿಸಿ ಮಾತನಾಡಿದರು. ಭ್ರಷ್ಟಚಾರ ರಹಿತ ಸಮಾಜ ಮತ್ತು ಆಡಳಿತವನ್ನು ಸೃಷ್ಠಿ ಮಾಡುವನೈತಿಕ ಹೊಣೆ ಎಲ್ಲರ ಮೇಲಿದೆ. ಇಂದು ಭ್ರಷ್ಟಚಾರ ಸಣ್ಣ ಅಧಿಕಾರಿಗಳಿಂದ ಹಿಡಿದು ಉನ್ನತ್ತ ಅಧಿಕಾರಿಗಳ ತನಕ ವ್ಯಾಪಕವಾಗಿದೆ.

         ಇದರ ನಿಯಂತ್ರಣದಿಂದ ಸರ್ಕಾರದ ಪಾರದರ್ಶಕ ಆಡಳಿತ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಭ್ರಷ್ಟಚಾರ ವಿರೋಧಿ ಆಂದೋಲಕ್ಕೆ ಸಹಕಾರ ನೀಡುವಂತೆ ಅವರು ಮನವಿ ಮಾಡಿದರು.

         ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ.ಜಿ.ವೆಂಕಟೇಶ್ ಮಾತನಾಡಿ, ಇಂದು ಸರ್ಕಾರ ವಿಶ್ವವಿದ್ಯಾಲಯಗಳ ಮೂಲಕ ಇಂತಹ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದೆ. ಭ್ರಷ್ಟಚಾರ ಒಂದು ರೀತಿ ಕ್ಯಾನ್ಸರ್ ರೋಗದ ಪಿಡುಗೆ ಇಂದಂತೆ. ಒಮ್ಮೆ ಭ್ರಷ್ಟಚಾರಕ್ಕೆ ಕೈ ಹಾಕಿದ ವ್ಯಕ್ತಿ ಅದೇ ಮಾರ್ಗದಲ್ಲಿ ಮುನ್ನಡೆಯಲು ಹವಣಿಸುತ್ತಾನೆ. ಇದು ಬಹು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದರು.ಕಾರ್ಯಕ್ರಮದಲ್ಲಿ ಡಾ.ಡಿ.ಟಿ.ಸುರೇಶ್, ಪ್ರೊ.ಕೃಷ್ಣೇಗೌಡ, ಸತೀಶ್, ರವಿಕುಮಾರ್, ವಿಮಲ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link