ಬೆಂಗಳೂರು
ಅಪರಾಧ ಕೃತ್ಯಗಳಿಂದ ಆತಂಕ ಸೃಷ್ಠಿಸುತ್ತಿದ್ದ ಕಾಡುಗೊಂಡನ(ಕೆಜಿ)ಹಳ್ಳಿ ರೌಡಿ ಸ್ಟೀಫನ್ ರಾಜ್ ಕೊಲೆಗೆ ಆತನ ಪತ್ನಿ ಅನೈತಿಕ ಸಂಬಂಧವೇ ಕಾರಣವಾಗಿದೆ.
ಕೆಲ ದಿನಗಳ ಹಿಂದಷ್ಟೇ ರೌಡಿ ಸ್ಟೀಫನ್ ರಾಜ್ನನ್ನು ಲಾಂಗು, ಮಚ್ಚುಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದ ಪ್ರಕರಣಲ್ಲಿ ಆತನ ಪತ್ನಿ ಮತ್ತು ಆಕೆಯ ಪ್ರಿಯಕರ ಭಾಗಿಯಾಗಿರುವುದನ್ನು ಪತ್ತೆಹಚ್ಚಿರುವ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಕೆಜಿ ಹಳ್ಳಿಯ ಕಾರ್ಪೋರೇಟಿವ್ ಕ್ವಾಟ್ರಸ್ನ ರಂಜಿತಾ(33) ಹಾಗೂ ಆಕೆಯ ಪ್ರಿಯಕರ ಕಿರಣ್(30) ಆತನ ಸ್ನೇಹಿತ ಮಗೇಂದ್ರ(29)ಬಂಧಿತ ಆರೋಪಿಗಳಾಗಿದ್ದಾರೆ
ಕಳೆದ ಮೇ ತಿಂಗಳ 29 ರಂದು ಇದಾಯತ್ನಗರದ ಬಳಿ ರೌಡಿ ಸ್ಟೀಫನ್ ರಾಜ್(40)ನನ್ನು ಕೊಲೆಮಾಡಿ ಮೃತದೇಹವನ್ನು ಆಟೋದಲ್ಲಿಯೇ ಬಿಟ್ಟು ಪರಾರಿಯಾಗಿದ್ದ ಪ್ರಕರಣ ದಾಖಲಿಸಿ ಪತಿ ನಾಪತ್ತೆಯಾಗಿದ್ದ ದೂರು ನೀಡಿದ ರಂಜಿತಾಳನ್ನು ಅನುಮಾನದ ಮೇಲೆ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕೊಲೆ ಕೃತ್ಯ ಬಯಲಾಗಿದ್ದು ಆಕೆಯ ಜೊತೆಗೆ ಇನ್ನಿಬ್ಬರನ್ನು ಬಂಧಿಸಲಾಗಿದೆ.
ಅಕ್ರಮ ಸಂಬಂಧದ ಕೊಲೆ
ಕೊಲೆಯಾದ ಸ್ಟೀಫನ್ ರಾಜ್ ಕೆ.ಜಿ ಹಳ್ಳಿ ರೌಡಿಶೀಟರ್ ಆಗಿದ್ದು, ವೃತ್ತಿಯಲ್ಲಿ ಮರಗೆಲಸ ಮಾಡುತ್ತಿದ್ದು ಸ್ಟೀಫನ್ ರಾಜ್ಗೆ ಆರೋಪಿ ಕಿರಣ್ ಪರಿಚಯವಾಗಿದ್ದನು.ಸ್ಟೀಫನ್ ಮುಖಾಂತರ ಆತನ ಪತ್ನಿ ರಂಜಿತಾಗೂ ಪರಿಚಯವಾಗಿತ್ತು .ನಂತರ ರಂಜಿತಾ ಹಾಗೂ ಕಿರಣ್ ನಡುವೆ ಪ್ರೀತಿ ಮೂಡಿ ಅದು ಅನೈತಿಕ ಸಂಬಂಧ ಕಾರಣವಾಗಿತ್ತು.
ಇವರಿಬ್ಬರ ಅನೈತಿಕ ಸಂಬಂಧದ ವಿಚಾರ ಮೃತ ಸ್ಟೀಫನ್ ರಾಜ್ಗೆ ಗೊತ್ತಾಗಿದೆ. ತಮಿಳುಬನಾಡಿಗೆ ಪತ್ನಿಯನ್ನು ಕರೆದುಕೊಂಡು ಹೋಗಿದ್ದನು ಮತ್ತೆ ಕೆಜಿ ಹಳ್ಳಿಗೆ ವಾಪಸಾಗಿದ್ದು ಕಿರಣ್ ಹಾಗೂ ರಂಜಿತಾ ನಡುವೆ ಮತ್ತೆ ಅನೈತಿಕ ಸಂಬಂಧ ಬೆಳೆದು ಈ ವಿಚಾರ ಗೊತ್ತಾಗಿ ಸ್ಟೀಫನ್ ರಾಜ್ ಗಲಾಟೆ ಮಾಡಲು ಶುರು ಮಾಡಿ ಮದ್ಯಪಾನ ಮಾಡಿ ಹಾದಿ ಬೀದಿ ರಂಪ ಮಾಡುತ್ತಿದ್ದ.
ಪತಿ ಜಗಳದಿಂದ ಆಕ್ರೋಶ
ಇದರಿಂದ ರೋಸಿ ಹೋದ ಆರೋಪಿ ರಂಜಿತಾ ಪತಿಯ ಕೊಲೆಗೆ ನಿರ್ಧಾರ ಮಾಡಿ ಸಂಚು ರೂಪಿಸಿ ಕಿರಣ್ ಗೆಳೆಯ ಮಗೇಂದ್ರನ ಜೊತೆ ಕಳೆದ ಮೇ29 ರ ಮಧ್ಯರಾತ್ರಿ ಸ್ಟೀಫನ್ ಹತ್ಯೆ ಮಾಡಿದ್ದರು.ನಂತರ ರಂಜಿತಾ ಪೊಲೀಸ್ ಠಾಣೆಗೆ ಹೋಗಿ ಪತಿ ಕಾಣೆಯಾದ ಬಗ್ಗೆ ದೂರು ನೀಡಿದ್ದಳು. ಅನುಮಾನಗೊಂಡ ಕೆ.ಜಿ ಹಳ್ಳಿ ಪೊಲೀಸರು ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಈ ಕೃತ್ಯ ಬಹಿರಂಗವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








