ಸ್ಥಳೀಯ ಸಂಸ್ಥೆ ಚುನಾವಣೆಗೆ ಅಧಿಸೂಚನೆ ಪ್ರಕಟ :ಇಂದಿನಿಂದ ನಾಮ ಪತ್ರ ಸಲ್ಲಿಕೆ

ತುರುವೇಕೆರೆ:

      ಸ್ಥಳೀಯ ಪಟ್ಟಣ ಪಂಚಾಯ್ತಿಗೆ ನಡೆಯುವ ಚುನಾವಣಾ ಪ್ರಕ್ರಿಯೆಗೆ ಮೇ 9 ರಿಂದ 16 ರ ವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬಹುದಾಗಿದೆ ಎಂದು ತಹಸೀಲ್ದಾರ್ ಹಾಗೂ ಚುನಾವಣಾಧಿಕಾರಿ ನಯೀಂ ಉನ್ನಿಸ್ಸಾ ತಿಳಿಸಿದರು.

       ಪಟ್ಟಣದ ತಾಲೂಕು ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಪಟ್ಟಣದಲ್ಲಿ 14 ವಾರ್ಡ್‍ಗಳಲ್ಲಿ ಒಟ್ಟು 11161 ಮತದಾರರು ಪೈಕಿ 5404 ಮಂದಿ ಪುರುಷರೂ, 5655 ಮಂದಿ ಮಹಿಳೆಯರೂ, ಇತರೆ 2 ಇದ್ದಾರೆ. ಸರ್ಕಾರಿ ರಜಾ ದಿನ ಹೊರತುಪಡಿಸಿದ ನಾಮಪತ್ರ ಸಲ್ಲಿಸುವ ದಿನಾಂಕಗಳಲ್ಲಿ ಬೆಳಗ್ಗೆ 11 ರಿಂದ 3 ಗಂಟೆಯವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ಪ್ರತಿ ಅಭ್ಯರ್ಥಿಗೆ 4 ಪ್ರತಿ ನಾಮಪತ್ರಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

         ಪಟ್ಟಣದ ವಾರ್ಡ್ 1 ರಿಂದ 7 ವಾರ್ಡ್ ಅಭ್ಯರ್ಥಿಗಳು ಚುನಾವಣಾಧಿಕಾರಿಗೆ ನಯೀಂ ಉನ್ನಿಸಾಗೆ ವಾರ್ಡ್ 8 ರಿಂದ 14 ರವರೆಗೆ ಸಹಾಯಕ ಚುನಾವಣಾಧಿಕಾರಿ ಸಿಡಿಪಿಓ ಪುಟ್ಟಸ್ವಾಮಿ ನಾಮಪತ್ರ ಸಲ್ಲಿಸಬಹುದು. ಅಭ್ಯರ್ಥಿ ಚುನಾವಣೆಯ ಖರ್ಚು ಒಂದು ಲಕ್ಷ ರೂ ಮಾತ್ರ. 17 ರಂದು ಪರಿಶೀಲನೆ, 20 ರಂದು ನಾಮಪತ್ರ ವಾಪಸ್ ಗೆ ಕಡೆ ದಿನಾಂಕ. 29 ರಂದು ಮತದಾನ. 31 ರಂದು ಮತ ಎಣಿಕೆ ನಡೆಸಲಾಗುವುದು ಎಂದರು.

ಠೇವಣಿ:

        ಸಾಮಾನ್ಯ ಅಭ್ಯರ್ಥಿ ಒಂದು ಸಾವಿರ ರೂ ಠೇವಣಿಯನ್ನು ಇಡಬೇಕು. ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ, ಹಿಂದುಳಿದ ವರ್ಗಗಳ ಹಾಗೂ ಮಹಿಳೆಯರು ಕೇವಲ 500 ರೂಗಳನ್ನು ಮಾತ್ರ ಠೇವಣಿಯನ್ನು ಕಟ್ಟಬೇಬೇಕಿದೆ.

ಮಾಹಿತಿ ಕೇಂದ್ರ ಸ್ಥಾಪನೆ:

          ಪಟ್ಟಣದ ಚುನಾವಣೆ ಸಂಬಂಧ ಅಭ್ಯರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ಸಲುವಾಗಿ ಮಾಹಿತಿ ಕೇಂದ್ರವನ್ನು ತೆರೆಯಲಾಗಿದೆ. ಸಾರ್ವಜನಿಕರು ಚುನಾವಣೆ ಸಂಬಂಧ ಮತದಾರರ ಪಟ್ಟಿ ಪಡೆಯಲು, ಸಲಹೆ, ಸೂಚನೆಗಳು ಮತ್ತು ದೂರುಗಳನ್ನೂ ಸಹ ಈ ಕೇಂದ್ರಕ್ಕೆ ಸಲ್ಲಿಸಬಹುದಾಗಿದೆ. ಇದರ ದೂರವಾಣಿ ಸಂಖ್ಯೆ 08139 – 287011 ಕರೆ ಮಾಡಬಹುದಾಗಿದೆ. ಅಭ್ಯರ್ಥಿಗಳಿಗೆ ಅಗತ್ಯವಿರುವ ಜಾತಿ ಪ್ರಮಾಣ ಪತ್ರ ಹಾಗೂ ಇನ್ನಿತರೆ ದಾಖಲೆಗಳನ್ನು ಶೀಘ್ರವಾಗಿ ಒದಗಿಸುವ ಸಲುವಾಗಿ ತಮ್ಮ ಸಿಬ್ಬಂದಿ ಕಾರ್ಯಪ್ರವೃತ್ತವಾಗಿದೆ ಎಂದು ತಹಸೀಲ್ದಾರ್ ನಯೀಮ್ ಉನ್ನಿಸ್ಸಾ ಹೇಳಿದರು.

ವಿದ್ಯುನ್ಮಾನ ಮತಯಂತ್ರ :

        ಈ ಚುನಾವಣೆಯಲ್ಲಿ 14 ವಾರ್ಡ್‍ಗಳಲ್ಲೂ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗತ್ತಿದೆ. ಇದರಲ್ಲಿ ವಿವಿ ಪ್ಯಾಡ್ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link