ಸ್ಟಿಲ್ ಕಂಪನಿಯ ಪವರ್ ಟಿಲ್ಲರ್/ವೀಡರ್ ಕೃಷಿಉಪಕರಣ ಮಾರುಕಟ್ಟೆಗೆ

ತುಮಕೂರು
 
      ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಅತ್ಯಾಧುನಿಕ ಕೃಷಿ ಪರಿಕರಗಳನ್ನು ಒದಗಿಸುವ ಉದ್ಧೇಶದಿಂದ ನಮ್ಮ ದೇಶದ ಪುಣೆಯಲ್ಲಿರುವ ಆಂಡ್ರಿಯಾ ಸ್ಟಿಲ್ ಪ್ರೈ.ಲಿಮಿಟೆಡ್ ಕಂಪನಿಯು ವಾಟರ್ ಪಂಪ್, ಸ್ಪೇಯರ್ಸ್, ಇಂಟರ್ ಕಲ್ಟಿವೇಟರ್ಸ್, ಗುಂಡಿ ತೆಗೆಯುವ ಯಂತ್ರಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ ಎಂದು ಸ್ಟಿಲ್ ಇಂಡಿಯಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪರಿಂದ್ ಪ್ರಭು ದೇಸಾಯ್ ತಿಳಿಸಿದರು.
      ನಗರದ ಜೆ.ಸಿ.ರಸ್ತೆಯಲ್ಲಿರುವ ಶ್ರೀರಂಗನಾಥ ಅಗ್ರಿ ಮಾರ್ಟ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಂಡ್ರಿಯಾ ಸ್ಟಿಲ್ ಎಜಿ ಮತ್ತು ಕೋ ಕೆಜಿ ಎಂಬುದು ಜರ್ಮನ್ ಮೂಲದ ಕಂಪನಿಯಾಗಿದೆ. ಈ ಕಂಪನಿಯು ಔಟ್‍ಡೀರ್ ಪವರ್ ಟೂಲ್ಸ್ ತಯಾರಿಕೆ, ಮಾರಾಟದಲ್ಲಿ 92 ವರ್ಷಗಳ ಅನುಭವ ಹೊಂದಿದ್ದು, ಈ ಕಂಪನಿಯ ತಯಾರಿಕಾ ಘಟಕಗಳು ಜರ್ಮನಿ, ಸ್ವಿಟ್ಜಲ್ರ್ಯಾಂಡ್, ಆಸ್ಟ್ರಿಯಾ, ಯುಎಸ್‍ಎ, ಬ್ರೆಜಿಲ್ ಮತ್ತು ಚೀನಾ ದೇಶಗಳಲ್ಲಿದ್ದು, ವಿಶ್ವದಾದ್ಯಂತ 165 ದೇಶಗಳಿಗೂ ಹೆಚ್ಚು 45000 ಕ್ಕಿಂತ ಅಧಿಕ ಮಾರಾಟ ಮತ್ತು ಸೇವಾ ವಿತರಕರನ್ನು ಹೊಂದಿದೆ ಎಂದು ಹೇಳಿದರು.
      ಶ್ರೀ ರಂಗನಾಥ ಅಗ್ರಿ ಮಾರ್ಟ್‍ನ ಬಿ.ಆರ್. ಶಶಿಧರ ಮಾತನಾಡಿ, ಕರ್ನಾಟಕ ಅದರಲ್ಲೂ ತುಮಕೂರು ಜಿಲ್ಲೆಯ ರೈತರ ಅಡಿಕೆ ತೋಟ, ರೇಷ್ಮೆ ಬೆಳೆ, ಜೋಳ, ತೆಂಗಿನ ಬೆಳೆ ಸೇರಿದಂತೆ ಮುಖ್ಯವಾಗಿ ಸಣ್ಣ ಸಣ್ಣ ರೈತರಿಗೆ ಅನುಕೂಲವಾಗುವಂತಹ ಸ್ಮಾರ್ಟ್ ಟಿಲ್ಲರ್ಸ್ ಮಿಶ್ರ ಬೇಸಾಯಕ್ಕೆ ಅನುಕೂಲವಾಗುವಂತಹ ನಿಟ್ಟಿನಲ್ಲಿ ಟಿಲ್ಲರ್ಸ್‍ನ್ನು ಆಂಡ್ರಿಯಾ ಸ್ಟಿಲ್ ಇಂಡಿಯಾ ಕಂಪನಿ ಒದಗಿಸಿಕೊಟ್ಟಿದೆ. ಬೇರೆ ಕಂಪನಿಗಿಂತ ಉತ್ತಮ ಗುಣಮಟ್ಟವುಳ್ಳ, 1 ವರ್ಷದ ವ್ಯಾರೆಂಟಿಯೊಂದಿಗೆ ರೈತರಿಗೆ ಪವರ್‍ಟಿಲ್ಲರ್ಸ್‍ನ್ನು ಒದಗಿಸಿಕೊಡಲಾಗುತ್ತಿವೆ.
       ಪೆಟ್ರೊಲ್ ಚಾಲಿತ 6 ಹೆಚ್.ಪಿ. ಮತ್ತು 7 ಹೆಚ್‍ಪಿ ಇಂಜಿನ್‍ವುಳ್ಳ ಪವರ್‍ಟಿಲ್ಲರ್‍ಗಳನ್ನು ರೈತರಿಗೆ ಒದಗಿಸಿಕೊಟ್ಟಿದೆ. 6 ಹೆಚ್‍ಪಿ ಪವರ್‍ಟಿಲ್ಲರ್ 1 ಅಥವಾ 2 ಎಕರೆವುಳ್ಳ ಸಣ್ಣ ಸಣ್ಣ ರೈತರಿಗೆ ಅನುಕೂಲವಾಗಲಿದ್ದು, 7 ಹೆಚ್.ಪಿ. ಪವರ್‍ಟಿಲ್ಲರ್ ಕೂಡ ಸಣ್ಣ ರೈತರು ಬಳಸಬಹುದು ಎಂದು ತಿಳಿಸಿದರು.
     ಒಂದು ತಿಂಗಳಲ್ಲೇ 20 ಪವರ್‍ಟ್ರಿಲ್ಲರ್ ಯಂತ್ರಗಳನ್ನು ರೈತರಿಗೆ ಮಾರಾಟ ಮಾಡಲಾಗಿದೆ. ದುಬಾರಿ ಬೆಲೆಯ, ಅತ್ಯಾಧುನಿಕ ಮಾದರಿಯ ಕೃಷಿ ಪರಿಕರಗಳನ್ನು ಖರೀದಿ¬ಸಲು ಸಾಧ್ಯವಾಗದ ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ವರ್ಗದ ರೈತರಿಗೆ ಕಡಿಮೆ ದರದಲ್ಲಿ,  ಅತ್ಯುತ್ತಮ ಗುಣಮಟ್ಟದ ಪವರ್‍ವೀಡ ಕಟ್ಟರ್, ಕಳೆ ಕೊಚ್ಚುವ ಯಂತ್ರ, ಮರ ಕತ್ತರಿಸುವ ಯಂತ್ರ (ಚೈನ್ಸಾ), ಔಷಧಿ ಸಿಂಪಡಿಸುವ ಯಂತ್ರ (ಮಿಸ್ಟ್ ಬ್ಲೌವರ್) ಹಾಗೂ ಇತರೆ ಯಂತ್ರಗಳನ್ನು ರೈತರಿಗೆ ಒದಗಿಸಿ ಅವರ ಕೆಲಸವನ್ನು ಕಡಿಮೆ ಮಾಡಿ ಕಡಿಮೆ ವೆಚ್ಚದಲ್ಲಿ ಸಮರ್ಪಕವಾಗಿ ಪೂರೈಸಲು ಸಹಾಯವಾಗಿದೆ ಎಂದರು.
      ಈಗ ಹೊಸದಾಗಿ ಆಂಡ್ರಿಯಾ ಸ್ಟಿಲ್ ಕಂಪನಿಯು ವಾಟರ್ ಪಂಪ್, ಸ್ಪೇಯರ್ಸ್, ಇಂಟರ್ ಕಲ್ಟಿವೇಟರ್ಸ್, ಗುಂಡಿ ತಗೆಗೆಯುವ ಯಂತ್ರಗಳು ಇನ್ನೂ ಹೆಚ್ಚು ಉಪಯೋಗವಾಗಲಿವೆ ಎಂದು ವಿವರಿಸಿದರು. 
        ಜಿಲ್ಲೆಯ 10 ತಾಲ್ಲೂಕುಗಳ ಪ್ರಗತಿಪರ ರೈತರನ್ನು ಗುರುತಿಸಿ ಈಗಾಗಲೇ ಯಂತ್ರಗಳ ಡೆಮೋ ತೋರಿಸಿದ್ದು, ರೈತರು ಸಹ ಈ ಯಂತ್ರಗಳನ್ನು ಖರೀಧಿಸಲು ಉತ್ಸುಕರಾಗಿದ್ದಾರೆ. ಇದರ ಭಾಗವಾಗಿ ಗುರುವಾರ ಪವರ್‍ಟ್ರಿಲ್ಲರ್ ಸೇರಿದಂತೆ ಇತರೆ ಯಂತ್ರಗಳನ್ನು ರೋಡ್‍ಶೋ ಮೂಲಕ ಪರಿಚಯಿಸುತ್ತಿದ್ದು, ಜಿಲ್ಲೆಯ ರೈತರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap