ಚಿಪ್ಪು ಸುಡುವುದನ್ನು ನಿಲ್ಲಿಸಿ ಪರಿಸರ ಮತ್ತು ರೈತರನ್ನು ಉಳಿಸಿ

ತಿಪಟೂರು
ವಿಶೇಷ ವರದಿ:ರಂಗನಾಥ್ ಪಾರ್ಥಸಾರಥಿ
 
    ನಗರಪ್ರದೇಶಗಳಲ್ಲಿ ಪರಿಸರ ಉಳಿಸಿ ಎಂದು ಕೂಗಿಕೊಂಡು ಒಂದು ರೀತಿಯ ಪರಿಸರವನ್ನು ಪ್ಲಾಸ್ಟಿಕ್ ತ್ಯಾಜ್ಯದಿಂದ ಹಾಳುಗೆಡವುತಿದ್ದಾರೆ. ಪರಿಸರ ನಾಶವಾಗುವುದಲ್ಲದೇ ತಮ್ಮ ಫಲವತ್ತಾದ ಜಮೀನಿಗೂ ರೈತರು ಗೊತ್ತಿಲ್ಲದೇ ಕಂಟಕ ತಂದುಕೊಳ್ಳುತ್ತಿದ್ದಾರೆ.
ಕೊಕೊ ಕಾರ್ಬನ್ :
     ಸಕ್ರಿಯ ಕಾರ್ಬನ್‍ಗಳನ್ನು ತಯಾರಿಸಲು ಶೆಲ್ ಇದ್ದಿಲು ಒಂದು ಪ್ರಮುಖ ಕಚ್ಚಾ ವಸ್ತುವಾಗಿದೆ. ತೆಂಗಿನ ಚಿಪ್ಪಿನಿಂದ ಉತ್ಪತ್ತಿಯಾಗುವ ಸಕ್ರಿಯ ಇಂಗಾಲವು ಕೆಲವು ನಿರ್ದಿಷ್ಟ ಪ್ರಯೋಜನಗಳನ್ನು ಹೊಂದಿದೆ ಏಕೆಂದರೆ ಕಚ್ಚಾ ವಸ್ತುವು ಕೆಲವು ಆಣ್ವಿಕ ಪ್ರಭೇದಗಳನ್ನು ಹೀರಿಕೊಳ್ಳುತ್ತದೆ. ಕಾರ್ಬೊನೈಸೇಶನ್ಗೆ ಮಾತ್ರ ಸಾಕಷ್ಟು ಗಾಳಿಯ ಪೂರೈಕೆಯಲ್ಲಿ ಸಂಪೂರ್ಣ ಪ್ರಬುದ್ಧ ಕಾಯಿಗಳ ಚಿಪ್ಪುಗಳನ್ನು ಸುಡುವುದರ ಮೂಲಕ ಶೆಲ್ ಇದ್ದಿಲು ತಯಾರಿಸಲಾಗುತ್ತದೆ, ಚಾರ್ಕೋಲ್ ತಯಾರಕರಾಗಿ ನಾವು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಮಾತ್ರ ತಲುಪಿಸಲು ಸುಧಾರಿತ ತಂತ್ರಗಳೊಂದಿಗೆ ಭಾರತದಿಂದ ಪ್ರೀಮಿಯಂ ಗುಣಮಟ್ಟದ ತೆಂಗಿನಕಾಯಿ ಇದ್ದಿಲು ಉತ್ಪಾದಿಸುತ್ತಿದ್ದು ಇದಕ್ಕೆ ವಿದೇಶದಲ್ಲಿ ಬಾರಿ ಬೇಡಿಕೆ ಇದೆ.
     ಇಂತಹ ಕೋಕೋ ಕಾರ್ಬನ್‍ಗೆ ಹೆಚ್ಚಾಗಿ ಕಚ್ಚಾವಸ್ತು ತಾಲ್ಲೂಕಿನಲ್ಲಿ ದೊರೆಯುತ್ತಿದೆ. ತಾಲ್ಲೂಕಿನಲ್ಲಿ ಕೊಬ್ಬರಿ ಬೆಲೆ ಕುಸಿಯುತ್ತಿರ ಬಹುದು ಆದರೆ ಯಾವುದೇ ಕಾರಣಕ್ಕೂ ತೆಂಗಿನ ಚಿಪ್ಪಿನ ದರವು ಕಡಿಮೆಯಾಗುತ್ತಿಲ್ಲ. ಏಕೆಂದರೆ ನಮ್ಮ ತೆಂಗಿನ ಚಿಪ್ಪನ್ನು ಸುಟ್ಟು ಬೂದಿಮಾಡಿ ವಿವಿಧ ಉತ್ಪನ್ನಗಳಿಗೆ ಬಳಕೆಯಾಗುತ್ತಿದ್ದು ತೆಂಗಿನ ಚಿಪ್ಪು ಟನ್‍ಗೆ ಸುಮಾರು 800 ರಿಂದ 1500 ರೂ ವರೆಗೆ ಇದೆ. ಇನ್ನು ಕೆಲವು ತೆಂಗಿನ ಚಿಪ್ಪಿನ ಉತ್ಪನ್ನಗಳು ಆಕ್ಟಿವೇಟೆಡ್ ಕಾರ್ಬನ್ ಎಂದು 1 ಗ್ರಾಂಗೆ 43 ರೂ ಇದ್ದು. ಇದೇ ಕಾರ್ಬನ್ ಕಡಿಮೆ ಎಂದರೂ ಒಂದು ಕೆ.ಜಿಗೆ 450 ವರೆಗೂ ಇದೆ.
     ಆದರೆ ಇಲ್ಲಿನ ಸ್ಥಳೀಯರಿಗೆ ಇದರ ಬಗ್ಗೆ ಸೂಕ್ತ ಮಾಹಿತಿ ಇಲ್ಲದೇ ಇರುವುದರಿಂದ ಕೊಬ್ಬರಿ ಸುಲಿದ ದುಡ್ಡು ಸಿಕ್ಕರೆ ಸಾಕು ಎಂದು ರೈತರು ಬೆಲೆಯ ಬಗ್ಗೆ ತಿಳುವಳಿಕೆ ಇಲ್ಲದೆ ಮದ್ಯವರ್ತಿಗಳಿಗೆ ಮಾರುತ್ತಿದ್ದಾರೆ.ಈ ರೀತಿಯಾಗಿ ತರಾಯಾರುವ ಕೋಕೋ ಕಾರ್ಬನ್ ಅನ್ನು ಯಾವುದೇ ವೈಜ್ಞಾನಿಕ ವಿಧಿ ಇಲ್ಲದೆ ಸಿಕ್ಕ ಸಿಕ್ಕಜಾಗಗಳಲ್ಲಿ ಆಳವಾದ ಕಂದಕವನ್ನು ನಿರ್ಮಿಸಿ ಪಕ್ಕದಲ್ಲಿರುವ ಗುಂಡಿ, ಕೆರೆಗಳ ನೀರನ್ನು ಬಳಸಿಕೊಂಡು ಪರಿಸರವನ್ನು ಹಾಳುಮಾಡುವ ಘಟಕಗಳು ತಾಲ್ಲೂಕಿನಲ್ಲಿ ಸಾಕಷ್ಟು ಇವೆ ಆದರೆ ಇವಗಳು ಸ್ಥಳಿಯ ಗ್ರಾಮ ಪಂಚಾಯಿತಿ ಮಟ್ಟದಿಂದ ಹಿಡಿದು ತಾಲ್ಲೂಕಿನ ಉಪವಿಭಾಗಾಧಿಕಾರಿಗಳ ವರೆಗೂ ಕೆಲವರು ದೂರನ್ನು ಕೊಟ್ಟಿದ್ದಾರೆ ಆದರೂ ಯಾವುದೇ ಪ್ರಯೋಜನವಾಗದೇ ಪರಿಸರ ನಾಶವು ಅವ್ಯಾಹತವಾಗಿ ಸಾಗುತ್ತಿದೆ.
ಯಾವುದೇ ಪರವಾನಗಿ ಇಲ್ಲ :
      ಈ ರೀತಿ ಅನದಿಕೃತವಾಗಿ ತೆಂಗಿನ ಚಿಪ್ಪು ಸುಡುವವರು ಯಾವುದೇ ರೀತಿಯ ಪರವಾನಗಿಯನ್ನು ಪಡೆಯದೆ ಕರಾಬು ಜಮೀನಿನಲ್ಲಿ ತೆಂಗಿನ ಚಿಪ್ಪು ಸುಡುವ ಅದರಲ್ಲೂ ಹೆದ್ದಾರಿಗೆ ಸಮೀಪವೇ ಚಿಪ್ಪನ್ನು ಸುಡುತ್ತಿರುವುದರಿಂದ ವಾಹನಗಳಲ್ಲಿ ಸಂಚರಿಸುವವರು ಉಸಿರುಕಟ್ಟಿದ ಅನುಭವವಾಗುತ್ತದೆ. ಇನ್ನು ವಾಹನಗಳ ಚಾಲಕರು ಸ್ವಲ್ಪಯಾಮಾರಿದರು ಪ್ರಯಾಣಿಕರು ಶಿವನಪಾದ ಸೇರುವುದು ನಿಶ್ಚಿತವಾಗಿದ್ದರು ಸ್ಥಳಿಯ ಗ್ರಾಮ ಪಂಚಾಯಿತಿಯಿಂದ ಹಿಡಿದು ತಾಲ್ಲೂಕು ಆಡಳಿತ ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಷಕ್ಕೆ ಕಾರಣವಾಗಿದೆ.
      ರಸ್ತೆ ಪಕ್ಕದಲ್ಲಿ ಚಿಪ್ಪು ಸುಟ್ಟರೆ ಪರವಾಗಿಲ್ಲ ಎನ್ನುವುದಾದರೇ ಇನ್ನೊಂದು ಹೆಜ್ಜೆ ಮುಂದುವರೆದ ಚಿಪ್ಪು ಸುಡುವವರು ಮಣಕಿಕೆರೆ ಗ್ರಾಮ ಪಂಚಾಯಿತಿಗೆ ಸೇರಿದ ಕಲ್ಕೆರೆ ಗ್ರಾಮದ ಸರ್ವೇ ನಂ 63ರಲ್ಲಿ ಅನಧಿಕೃತವಾಗಿ ಚಿಪ್ಪು ಸುಡುವುತ್ತಿದ್ದು ಇದಕ್ಕೆ ಗ್ರಾ.ಪಂ ಮತ್ತು ಪರಿಸರ ಇಲಾಖೆಯ ಅಧಿಕಾರಿಗಳು ಕಂಡರು ಕಾಣದಂತೆ ಜಾಣ ಕುರುಡುರಾಗಿದ್ದಾರೆ. ಮಣಕಿಕೆರೆ ಗ್ರಾ.ಪಂನ ಗ್ರಾಮಲೆಕ್ಕಿಕನಿಗೆ ಮಾಮೂಲಿ ಹಣವನ್ನು ಕೊಡುತ್ತಿರುವುದರಿಂದಲೇ ಅವರು ಮತ್ತು ಪಿ.ಡಿ.ಓ ಯಾವುದೇ ಸಮಸ್ಯೆ ಇಲ್ಲದೇ ಮತ್ತು ಯಾವುದೇ ಕರಾಬು ಜಮೀನಿನಲ್ಲಿ ಚಿಪ್ಪುಸುಡಲು ಬಿಟ್ಟಿದ್ದಾರೆಂದು ಎಸ್.ಸಿ/ಎಸ್.ಟಿ. ಉಪವಿಭಾಗದ ಕುಂದುಕೊರತೆ ಸಭೆಯಲ್ಲಿಯೇ ಎಲ್ಲಾ ಅಧಿಕಾರಿಗಳ ಮುಂದೇಯೇ ತಿಳಿಸಿದ್ದರು ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದ್ದಾರೆ.
 
    ಇನ್ನು ಇಲ್ಲಿ ಚಿಪ್ಪು ಸುಡುವ ದಂದೆ ಹೇಗೆ ನಡೆಯುತ್ತಿದೆ ಎಂದರೆ ಸುಮಾರು 20 ರಿಂದ 30 ಗುಂಡಿಗಳನ್ನು ತೋಡಿಕೊಂಡು ಜೆ.ಸಿ.ಬಿಯನ್ನು ಬಳಸುತ್ತಿರುವುದು ಇಲ್ಲಿ ಎಷ್ಟರ ಮಟ್ಟಿಗೆ ಆದಾಯವಿದೆ ಎಂದು ಗಮನಸಿಬೇಕಾಗಿದೆ.ತೆಂಗಿನ ಚಿಪ್ಪು ಸುಡುವವರು ರೈತರಿಂದ 8600 ರೂಗೆ ಚಿಪ್ಪನ್ನು ತೆಗೆದುಕೊಳ್ಳುತ್ತಾರೆ. ಇನ್ನು ಇದನ್ನು ಸುಟ್ಟು ಇದ್ದಿಲಾಗಿ ಪರಿವರ್ತಿಸಿದರೆ ಒಂದು ಟನ್‍ಗೆ ಏನಿಲ್ಲವೆಂದರೂ ರೂ 26000 ದಿಂದ 28000 ಮತ್ತು ಪೌಡರ್ 1 ಟನ್‍ಗೆ 1500 ರೂ ಇದೆ. ಇದರಲ್ಲಿ ಸುಮಾರು 20% ಭಾರತದಲ್ಲಿ ಬಳಸಿದರೆ ಇನ್ನುಳಿದ 80% ವಿದೇಶಗಳಿಗೆ ರಪ್ತಾಗುತ್ತಿದೆ ಎಂದು ತಿಳಿಸುತ್ತಾರೆ.
ಪಕ್ಕದ ಗುಂಡಿಯ ನೀರು ಕಪ್ಪಾಗಿದೆ :
    ಈ ಚಿಪ್ಪು ಸುಡುವ ಉದ್ಯಮದ ಪ್ರಭಾವ ಹೇಗಿದೆ ಎಂದು ಕಲ್ಕೆರೆಯ ಸರ್ವೇನಂ 63ರ ಕರಾಬು ಜಮೀನಿನಲ್ಲಿ ಚಿಪ್ಪು ಸುಡುತ್ತಿರುವುದರಿಂದ ಪಕ್ಕದಲ್ಲೇ ಇರುವ ನೀರು ಸಂಪೂರ್ಣವಾಗಿ ಕಪ್ಪು ಬಣ್ಣಕ್ಕೆ ತಿರುಗಿದ್ದು ನೀರು ಪ್ರಯೋಜನಕ್ಕೆ ಬಾರದಂತಾಗಿದೆ. ಇದರಿಂದ ಇಲ್ಲೇ ವಾಸಿಸುತ್ತಿದ್ದ ಕಾಡುಪ್ರಾಣಿಗಳಿಗೆ ನೀರುನ್ನು ಅರಸಿ ಗ್ರಾಮಗಳಿಗೆ ನುಗ್ಗುತ್ತಿವೆ. ಇನ್ನು ಇಲ್ಲಿನ ಹೊಗೆಯಿಂದ ತೆಂಗಿನ ಮರದ ಹರಳುಗಳು ಉದುರುತ್ತಿದ್ದು ಜೇನುನೊಣಗಳು ಈ ಹೊಗೆಗೆ ಸಿಕ್ಕಿ ಸಾಯುವುದರಿಂದ ಸೂಕ್ತವಾಗಿ ಪರಾಗಸ್ಪರ್ಶವಾಗದೇ ಸೂಕ್ತಬೆಳೆಯು ಕೈಗೆಸಿಗುತ್ತಿಲ್ಲವೆಂದು ರೈತರು ಅಳಲು ತೊಡಿಕೊಂಡಿದ್ದಾರೆ.
     ಇದರ ಬಗ್ಗೆ ಸ್ಥಳೀಯರು ಪೋಲೀಸ್ ಠಾಣೆ, ಗ್ರಾಮ ಪಂಚಾಯಿತಿ, ತಹಸೀಲ್ದಾರ್, ಉಪವಿಭಾಗಾಧಿಕಾರಿಗಳಿಗೆ ಮನವಿಸಲ್ಲಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ ಇದೆಲ್ಲವನ್ನು ಮನಗಂಡು ಜಿಲ್ಲಾಧಿಕಾರಿಗಳಾದರು ನಮಗೆ ನ್ಯಾಯದೊರಕಿಸಿಕೊಡಬೇಕೆಂದು ನೊಂದವರು ಬಯಸಿದ್ದಾರೆ.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link