ಚಿತ್ರದುರ್ಗ;
ಒಂದೇ ಒಂದು ಲೋಟ ಶುದ್ದ ಕುಡಿಯುವ ನೀರು ಕುಡಿದಿಲ್ಲ ರಿಪೇರಿಗೆ ಮಾತ್ರ ಸಾವಿರಾರು ರೂಪಾಯಿ ಖರ್ಚಾಗಿದೆ. 500 ಲೀಟರ್ ಘಟಕಕ್ಕೂ 4.50 ಲಕ್ಷ 1500 ಲೀಟರ್ ಘಟಕಕ್ಕೂ 4.50 ಲಕ್ಷ ಇದು ಹೇಗೆ? ಹಣ ಖರ್ಚಾದರೂ ಶುದ್ದ ಕುಡಿಯುವ ನೀರಿನಲ್ಲಿ ಟಿಡಿಎಸ್ ಕಡಿಮೆ. ಸರ್ಕಾರದ ಹಣ ನೀರಿನಂತೆ ಖರ್ಚಾದರೂ ಜನರಿಗೆ ಶುದ್ದ ನೀರಿಲ್ಲ. ಇದು ಜಿಲ್ಲಾಪಂಚಾಯತ್ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪರಿ.
ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಮಾಸಿಕ ಕೆಡಿಪಿ ಸಭೆಯಲ್ಲಿ ಪ್ರಗತಿ ಪರಿಶೀಲನೆ ವೇಳೆಯಲ್ಲಿ ಮಾತನಾಡಿ, ಎಣ್ಣೆಗೆರೆ ಗ್ರಾಮದಲ್ಲಿ ತಿಪ್ಪೇಯಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಇದೆ. ಮಾನಂಗಿ, ಕ್ಯಾದಿಗುಂಟೆ, ದೊಡ್ಡಸಿದ್ದವ್ವನಹಳ್ಳಿಯಲ್ಲಿ ಆರಂಭದಿಂದಲೂ ಶುದ್ದ ಕುಡಿಯುವ ನೀರಿನ ಘಟಕ ಕಾರ್ಯನಿರ್ವಹಿಸಿಲ್ಲ. ಆದರೂ ರಿಪೇರಿಗೆ ಪಂಚಾಯಿತಿಯ 20 ರಿಂದ 30 ಸಾವಿರ ರೂಪಾಯಿ ಬಳಕೆ ಮಾಡಲಾಗಿದೆ. ಒಂದೇ ಒಂದು ಲೋಟ ನೀರು ಕುಡಿದಿಲ್ಲ ರಿಪೇರಿಗೆ ಏಕೆ ಹಣ ನೀಡಭೇಕು. ಕವಾಡಿಗರಟ್ಟಿಯಲ್ಲಿ ಶುದ್ದ ಕುಡಿಯುವ ನೀರಿನ ಘಟಕ ರಿಪೇರಿಗೆ 25 ಸಾವಿರ ಖರ್ಚು ಮಾಡಲಾಗಿದೆ. ಆದರೆ ನೀರಿನ ಹಣ ನಗರಸಭೆ ಸಂಗ್ರಹಿಸುತ್ತಿದೆ. ಇದು ಯ್ಯಾವ ಲೆಕ್ಕ. ಸರ್ಕಾರದ ಹಣ ಇದೆ ಎಂದು ಈ ರೀತಿ ದುಂದು ವೆಚ್ಚ ಮಾಡಿದರೆ ಹೇಗೆ ಎಂದು ಅಧಿಕಾರಿಗಳ ಮೇಲೆ ಹರಿಹಾಯ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಪಿ.ಎನ್.ರವೀಂದ್ರ, ಜನರು ನೀರೆ ಕುಡಿದಿಲ್ಲ ಎಂದರೆ ರಿಪೇರಿಗೆ ಹೇಗೆ ಹಣ ನೀಡುವುದು. ಇದಕ್ಕೆ ಬಳಕೆ ಪ್ರಮಾಣ ಪತ್ರ ಸ ಲ್ಲಿಸಬಾರದು. ಯಾವುದೇ ಕಾರಣಕ್ಕೂ ಹಣ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಷರತ್ತಿನಂತೆ ಶುದ್ದ ಕುಡಿಯುವ ನೀರಿನ ಘಟಕ ರಿಪೇರಿ ಮಾಡದೆ ಹಾಗೂ ಕಾಮಗಾರಿ ಆರಂಭಿಸದ ಏಜೆನ್ಸಿಗಳನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಅಲ್ಲದೆ ಠೇವಣೆ ಹಣ ಮುಟ್ಟುಗೋಲು ಹಾಕಿಕೊಳ್ಳಬೇಕು. ಸುಮಾರು 69ಕ್ಕೂ ಹೆಚ್ಚು ಶುದ್ದ ಘಟಕ ಕಾಮಗಾರಿ ಆರಂಭವಾಗಿಲ್ಲ. ಕಪ್ಪುಪಟ್ಟಿಗೆ ಸೇರಿಸಿ ಹೊಸದಾಗಿ ಟೆಂಡರ್ ಕರೆಯುವಂತೆ ಸೂಚನೆ ನೀಡಿದರು.
ಸಮಿತಿ ರಚನೆ: ಜಿಲ್ಲೆಯಲ್ಲಿ ಕೊಳವೆಬಾವಿ ಕೊರೆದು ಮೋಟಾರ್‍ಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗುತ್ತದೆ. ಕೊಳವೆಬಾವಿ ಬತ್ತಿದ ನಂತರ ವಿದ್ಯುತ್ ಪರಿವರ್ತಕ ವ್ಯರ್ಥವಾಗುತ್ತದೆ. ಹೊಸದಾಗಿ ಕೊಳವೆಬಾವಿ ಕೊರೆದರೆ ಮತ್ತೆ ವಿದ್ಯುತ್ ಪರಿವರ್ತಕ ಹೊಸದಾಗಿ ಅಳವಡಿಸಲಾಗುತ್ತದೆ. ಇದರ ಬದಲಿಗೆ ಹಳೆ ವಿದ್ಯತ್ ಪರಿವರ್ತಕ ಬಳಕೆ ಮಾಡಿದರೆ ಹಣ ಉಳಿತಾಯವಾಗಲಿದೆ ಎಂದು ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಡಾ.ಕೆ.ಅನಂತ್ ಸಲಹೆ ನೀಡಿದರು.
ಟಿಡಿಎಸ್ ಕಡಿಮೆ: ಶುದ್ದ ಕುಡಿಯುವ ನೀರಿನ ಘಟಕದಲ್ಲಿ ಗ್ರಾಮೀಣ ನೀರು ಪೂರೈಕೆ ಮತ್ತು ನೈರ್ಮಲ್ಯ ವಿಭಾಗದ ಇಂಜಿನಿಯರ್ ನೀಡಿರುವ ವರದಿಯಲ್ಲಿ ಟಿಡಿಎಸ್ 200 ರಿಂದ 600 ಎಂದು ತಿಳಿಸಿದ್ದಾರೆ. ಆದರೆ ತಾವು ತಪಾಸಣೆ ಮಾಡಿಸಿದಾಗ ಕೇವಲ 30 ರಿಂದ 80 ಟಿಡಿಎಸ್ ಇದೆ. ಇದು ಕುಡಿಯಲು ಯೋಗ್ಯವಲ್ಲ. ಕುಡಿದರೂ ಆರೋಗ್ಯವಾಗಿರಲು ಸಾಧ್ಯವಿಲ್ಲ ಎಂದು ಡಾ.ಅನಂತ್ ಸಭೆಯ ಗಮನಕ್ಕೆ ತಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ