ಗಡಿಭಾಗದಲ್ಲಿ ಸಾರಿಗೆ ಬಸ್ ಸೌಕರ್ಯಕ್ಕೆ ಸಂಚಕಾರ

ಚಳ್ಳಕೆರೆ

    ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಗ್ರಾಮೀಣ ಪ್ರದೇಶದ ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ನಿರೀಕ್ಷೆಗೆ ತಕ್ಕಂತೆ ಸೌಲಭ್ಯಗಳನ್ನು ಒದಗಿಸುತ್ತಿಲ್ಲ. ತಾಲ್ಲೂಕು ಕೇಂದ್ರದಿಂದ ಸುಮಾರು 30 ಕಿ.ಮೀ ದೂರವಿರುವ ಗಡಿ ಗ್ರಾಮಗಳ ಜನರೂ ಹಾಗೂ ವಿದ್ಯಾರ್ಥಿಗಳು ಪ್ರತಿನಿತ್ಯ ಬಸ್ ಸೌಕರ್ಯಕ್ಕಾಗಿ ಹರಸಾಹಸ ಪಡುತ್ತಿದ್ದಾರೆ.

    ತಾಲ್ಲೂಕಿನ ತಳಕು ಹೋಬಳಿಯ ಓಬಳಾಪುರ ಗ್ರಾಮದಿಂದ ಬಸಾಪುರ ಗ್ರಾಮದ ಮೂಲಕ ದೊಡ್ಡಉಳ್ಳಾರ್ತಿಯಿಂದ ಚಳ್ಳಕೆರೆ ನಗರ ಸೇರುವ ಕೆಎಸ್‍ಆರ್‍ಟಿಸಿ ಒಂದು ಬಸ್ ಮಾತ್ರ ಪ್ರತಿದಿನ 7.30ಕ್ಕೆ ಓಬಳಾಪುರ ಗ್ರಾಮಕ್ಕೆ ಬರುತ್ತಿದ್ದು, ಈ ಬಸ್‍ನಲ್ಲಿ ನೂರಾರು ವಿದ್ಯಾರ್ಥಿಗಳು ಅನಿವಾರ್ಯವಾಗಿ ಸಹ ಪ್ರಯಾಣಿಕರೊಂದಿಗೆ ತನ್ನ ವಿದ್ಯಾಭ್ಯಾಸಕ್ಕಾಗಿ ಚಳ್ಳಕೆರೆ ನಗರಕ್ಕೆ ಬಸ್‍ನ ಡೋರ್‍ನಲ್ಲಿ ನಿಂತು ಪ್ರಾಣ ಬೀಗಿ ಹಿಡಿದು ಆಗಮಿಸುತ್ತಿದ್ದು, ಇದೇ ಮಾರ್ಗದಲ್ಲಿ ಮತ್ತೊಂದು ಬಸ್‍ನ್ನು ಬೆಳಗ್ಗೆ 6ರ ಸಮಯಕ್ಕೆ ಓಡಿಸಬೇಕೆಂದು ವಿದ್ಯಾರ್ಥಿಗಳು ಕೆಎಸ್‍ಆರ್‍ಟಿಸಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

     ಪ್ರತಿನಿತ್ಯ ಶಾಲಾ, ಕಾಲೇಜು ವಿದ್ಯಾರ್ಥಿಗಳು ಬಸ್ ವ್ಯವಸ್ಥೆ ಇಲ್ಲದೆ ತಮ್ಮ ವಿದ್ಯಾಭ್ಯಾಸವನ್ನು ಮೊಟಕು ಗೊಳಿಸುವ ಸ್ಥಿತಿ ಉಂಟಾಗಿದೆ. ಕೂಡಲೇ ಬಸ್ ಸೌಕರ್ಯ ಒದಗಿಸಬೇಕೆಂದು ಮೈಲನಹಳ್ಳಿನಾಗರಾಜು, ಗೋವಿಂದಪ್ಪ, ವಿದ್ಯಾರ್ಥಿಗಳಾದ ದರ್ಶನ್‍ಗೌಡ, ಪುನೀತ್, ಸಿದ್ದೇಶ್‍ಕುಮಾರ್, ನರಸಿಂಹ ಮುಂತಾದವರು ಒತ್ತಾಯ ಪಡಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link