ಹುಳಿಯಾರು
ಪಟ್ಟಣದ ಹಲವೆಡೆ ಹಲವು ದಿನಗಳಿಂದ ಬೀದಿ ದೀಪಗಳು ಹಗಲಿನಲ್ಲೂ ಉರಿಯುತ್ತಿದ್ದು, ವಿದ್ಯುತ್ ಉಳಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕಾದ ಪಟ್ಟಣ ಪಂಚಾಯಿತಿ ಮೌನಕ್ಕೆ ಶರಣಾಗಿದೆ ಎಂದು ಇಲ್ಲಿನ ನಿವಾಸಿ ಶ್ರೀನಿವಾಸ್ ಆರೋಪಿಸಿದ್ದಾರೆ.
ನುರಾನಿ ಮಸೀದಿ ಬೀದಿ ಸೇರಿದಂತೆ ಪಟ್ಟಣದ ಅನೇಕ ಬೀದಿಯ ಅನೇಕ ಕಂಬಗಳಲ್ಲಿ ನಿತ್ಯ ಹಗಲಿನಲ್ಲಿ ವಿದ್ಯುತ್ ದೀಪಗಳು ಉರಿಯುತ್ತವೆ. ಈ ವಾಟ್ಸಪ್‍ನಲ್ಲಿ ಫೋಟೋ ಹಾಕಿದರೂ ಸಹ ಸಂಬಂಧಪಟ್ಟವರು ಎಚ್ಚರ ವಹಿಸಿಲ್ಲ. ಇದರಿಂದಾಗಿ ವಿದ್ಯುತ್ ಅನಗತ್ಯವಾಗಿ ಪೋಲಾಗುತ್ತಿದೆ.
ಬೀದಿ ದೀಪದ ಸ್ವಿಚ್‍ಆಫ್ ಮಾಡಲು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಆದರೆ ಸಂಬಂಧಪಟ್ಟವರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಆ ಮೂಲಕ ಕರ್ತವ್ಯ ಲೋಪ ಎಸಗಿ ಪಪಂಗೆ ನಷ್ಟ ಉಂಟು ಮಾಡುತ್ತಿದ್ದಾರೆ ಎಂದಿದ್ದಾರೆ. ಇನ್ನಾದರೂ ಸಂಬಂಧಪಟ್ಟವರು ಇತ್ತ ಕ್ರಮ ವಹಿಸಬೇಕು ಎಂದು ಶ್ರೀನಿವಾಸ್ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ







