ಬೆಂಗಳೂರು
ಚಿಕ್ಕಜಾಲ ಹಾಗೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಗಳ ವ್ಯಾಪ್ತಿಯ 6 ಕಡೆಗಳಲ್ಲಿ ಕೇವಲ 1 ಗಂಟೆಯೊಳಗೆ ಇಬ್ಬರ ಮೇಲೆ ಹಲ್ಲೆ ನಡೆಸಿ ಮಹಿಳೆಯೊಬ್ಬರು ಸೇರಿ 6 ಮಂದಿಯನ್ನು ಮಾರಕಾಸ್ತ್ರಗಳಿಂದ ಬೆದರಿಸಿ ಸುಲಿಗೆ ಮಾಡಿ ಪರಾರಿಯಾಗಿದ್ದ ನಾಲ್ವರನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಕಳೆದ ಗುರುವಾರ(ನ. 29) ರಂದು ಮುಂಜಾನೆ 4 ರಿಂದ 5.30ರ ಒಳಗೆ ಎರಡು ಬೈಕ್‍ಗಳಲ್ಲಿ 6 ಕಡೆಗಳಲ್ಲಿ ವಾಹನ ಸವಾರರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ, ವಾಹನ, ನಗದು ಕಸಿದು ಪರಾರಿಯಾದ ಕೂಡಲೇ ನಾಕಾಬಂಧಿ ಮಾಡಿ ಕಾರ್ಯಾಚರಣೆ ನಡೆಸಿದ ಚಿಕ್ಕಜಾಲ ಪೆÇಲೀಸರು ಕೃತ್ಯದಲ್ಲಿ ಭಾಗಿಯಾಗಿದ್ದ ಆರ್.ಟಿ. ನಗರದ ಮಹಮದ್ ಅಶ್ರಫ್‍ಖಾನ್ ಅಲಿಯಾಸ್ ಅಶ್ರಫ್ ಖಾನ್‍ಗೆ ಕೆಲವೇ ನಿಮಿಷದಲ್ಲಿ ಗುಂಡು ಹಾರಿಸಿ ಬಂಧಿಸಿದ್ದರು.
ಈತನ ಜೊತೆಗಿದ್ದು, ಕೃತ್ಯ ನಡೆಸಿ ಪರಾರಿಯಾಗಿದ್ದ ಮಹಮದ್ ಇಫ್ತಿಕಾರ್ ಅಲಿ (20), ಸೈಯ್ಯದ್ ಸುಹೇಲ್ ಅಲಿಯಾಸ್ ಜೊಯಾನ್ (19), ಶೇಷ್ ಅಜ್ಗರ್ ಅಲಿಯಾಸ್ (21) ಸೇರಿ ಮೂವರನ್ನು ಬಂಧಿಸಿಎರಡು ಬೈಕ್, 5 ಮೊಬೈಲ್‍ಗಳು, ಒಂದು ಬೆಳ್ಳಿ ಚೈನ್, ನಗದನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಿಂದ ಹಲ್ಲೆಗೊಳಗಾಗಿದ್ದ ದೇವನಹಳ್ಳಯ ನಾಗರಾಜ್ ಹಾಗೂ ಆವಲಹಳ್ಳಿಯ ಮುನೀಂದ್ರ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಮನೆಗೆ ಮರಳಿದ್ದಾರೆ ಎಂದು ಡಿಸಿಪಿ ಕಲಾಕೃಷ್ಣಸ್ವಾಮಿ ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ