ಡಂಬಲ್ಸ್ ನಿಂದ ಹೊಡೆದು ವ್ಯಾಪಾರ ಕೊಲೆ…!!!!

ಬೆಂಗಳೂರು

     ಕುಡಿದ ಅಮಲಿನಲ್ಲಿ ಜಗಳ ಮಾಡಿಕೊಂಡು ಬೀದಿ ವ್ಯಾಪಾರಿಗೆ ಮತ್ತೊಬ್ಬ ವ್ಯಾಪಾರಿ ಡಂಬಲ್ಸ್‍ನಿಂದ ಹೊಡೆದು ಕೊಲೆಮಾಡಿರುವ ದುರ್ಘಟನೆ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಜಕ್ಕೂರು ಲೇಔಟ್‍ನ ಜಯರಾಮ್ (45) ಎಂದು ಕೊಲೆಗೈದ ಶಕೀಲ್ (40)ನನ್ನು ಬಂಧಿಸಲಾಗಿದೆ ಕುಡಿದು ರಂಪ ಮಾಡುತ್ತಿದ್ದ ಜಯರಾಮ್‍ಗೆ ಹೊಡೆದು ಬುದ್ದಿ ಹೇಳಲು ಹೋದಾಗ ಈ ಧುರ್ಘಟನೆ ಸಂಭವಿಸಿದ್ದು ಕೊಲೆ ಮಾಡುವ ಉದ್ದೇಶ ನನಗಿರಲಿಲ್ಲ ಎಂದು ಅಮೃತಹಳ್ಳಿ ಪೆÇಲೀಸರ ವಿಚಾರಣೆಯಲ್ಲಿ ಆರೋಪಿ ತಿಳಿಸಿದ್ದಾನೆ.

     ಮೊದಲು ಕಂಬಿಕಟ್ಟುವ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಜಯರಾಮ್ ಇತ್ತೀಚೆಗೆ ತಳ್ಳುವ ಗಾಡಿಯಲ್ಲಿ ಪಾತ್ರೆ ಸಾಮಾನು ಮಾರಾಟ ಮಾಡುತ್ತಿದ್ದ ಶಕೀಲ್ ಕೂಡ ಆತನ ಜೊತೆಗೆ ವ್ಯಾಪಾರ ಮಾಡುವಾಗ ಪರಿಚಯವಾಗಿ ಇಬ್ಬರು ಸ್ನೇಹಿತರಾಗಿದ್ದರು. ಜಯರಾಮ್ ಮನೆಯಲ್ಲಿ ಯಾರೂ ಇಲ್ಲದಿದ್ದರಿಂದ ಮದ್ಯಪಾನಕ್ಕಾಗಿ ಶಕೀಲ್‍ನನ್ನು ಕರೆದಿದ್ದು, ಇಬ್ಬರೂ ಸೇರಿ ರಾತ್ರಿ 12.30ರ ವೇಳೆ ಮದ್ಯಪಾನ ಮಾಡಿ ಮೊಬೈಲ್ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದಾರೆ.

       ಹೊರಗಡೆ ಬಂದ ಜಯರಾಮ್ ಜೋರಾಗಿ ಗಲಾಟೆ ಮಾಡುತ್ತ ಅಕ್ಕಪಕ್ಕದವರಿಗೆಲ್ಲಾ ತೊಂದರೆ ಕೊಡುತ್ತಿದ್ದ. ಆತನಿಗೆ ಹೊಡೆದು ಒಳಗೆ ಕರೆದುಕೊಂಡು ಹೋಗಲು ಮುಂದಾದ ಶಕೀಲ್, ಅಲ್ಲೇ ಇದ್ದ ನೆಲಗಟ್ಟಿ ಮಾಡುವ ಡಂಬಲ್ಸ್‍ನಿಂದ ಹೊಡೆದಿದ್ದಾನೆ.

        ತಲೆಗೆ ಪೆಟ್ಟು ಬಿದ್ದಿದ್ದರಿಂದ ಕುಸಿದು ಮೋರಿಗೆ ಬಿದ್ದ ಜಯರಾಮ್ ಮೃತಪಟ್ಟಿದ್ದಾರೆ.ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಮೃತಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.ಜಯರಾಮ್ ಕುಡಿತದ ಚಟ ಅಂಟಿಸಿಕೊಂಡಿದ್ದು, ಮನೆಯ ಬಳಿ ಅಂಗಡಿ, ಇನ್ನಿತರ ಕಡೆಗಳಲ್ಲಿ ಜಗಳ ಮಾಡುತ್ತ, ಕಿರಿಕಿರಿ ಉಂಟು ಮಾಡುತ್ತಿದ್ದ. ಈ ಸಂಬಂಧ ಆತನ ಮೇಲೆ ಮೂರ್ನಾಲ್ಕು ದೂರುಗಳು ದಾಖಲಾಗಿರುವುದು ಕಂಡುಬಂದಿದೆ ಎಂದು ಡಿಸಿಪಿ ಕಲಾಕೃಷ್ಣಸ್ವಾಮಿ ತಿಳಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link