ಪತ್ರವನ್ನು ಸೋರಿಕೆ : ಕಠಿಣ ಕ್ರಮಕ್ಕೆ ವೀರಪ್ಪ ಮೊಯ್ಲಿ ಆಗ್ರಹ

ಬೆಂಗಳೂರು

    ಪಕ್ಷದ ಹಿತದೃಷ್ಟಿಯಿಂದ ಏಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ನಾವು ಪತ್ರ ಬರೆದಿದ್ದು, ಇಂತಹ ರಹಸ್ಯ ಪತ್ರ ಹೇಗೆ ಸೋರಿಕೆ ಆಗಿದೆ ಎಂಬುದು ಗೊತ್ತಿಲ್ಲ. ಪತ್ರವನ್ನು ಸೋರಿಕೆ ಮಾಡಿದವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಕಾಂಗ್ರೆಸ್ ಹಿರಿಯ ಮುಖಂಡ ವೀರಪ್ಪ ಮೊಯ್ಲಿ ಆಗ್ರಹಿಸಿದ್ದಾರೆ.

     ಆರ್.ಟಿ.ನಗರ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಈ ಕುರಿತು ಮಹತ್ವದ ಚರ್ಚೆಯಾಗಿದೆ. ಪ್ರಮುಖ 23 ಜನ ಮುಖಂಡರು ಕಾಂಗ್ರೆಸ್ ಪುನರ್ ಸಂಘಟನೆ ಬಗ್ಗೆ ಪತ್ರ ಬರೆದಿದ್ದು, ಇದಕ್ಕೆನಾನೂ ಸಹ ಸಹಿ ಮಾಡಿದ್ದೇನೆ. ಆದರೆ ಇದು ನಾಯಕತ್ವ ಬದಲಾವಣೆ ಬಗ್ಗೆ ಅಲ್ಲ ಎಂದು ಸ್ಪಷ್ಟಪಡಿಸಿದರು.

    ಕಾಂಗ್ರೆಸ್ ಈಗ ಅತ್ಯಂತ ಹೀನಾಯ ಸ್ಥಿತಿಯಲ್ಲಿ ಇದೆ ಎಂದು ರಾಹುಲ್ ಗಾಂಧಿ ಅವರಿಗೆ ಹೇಳಿದೆ. ಕಾಂಗ್ರೆಸ್ ಎಲ್ಲಾ ಚಟುವಟಿಕೆಗಳಲ್ಲಿ ನಾವು ಭಾಗಿಯಾದವರು. ದೇವರಾಜ್ ಅರಸ್ ಅವರು ಕಾಂಗ್ರೆಸ್ ವಿರುದ್ಧ ಹೋದರು. ಆಗ ನಮ್ಮ ಪಕ್ಷದ ಹಲವರು ಅರಸು ಹಿಂದೆ ಹೋದರು. ನಾನು ಪಕ್ಷಕ್ಕೆ ವಿಧೇಯನಾಗಿ ಕೆಲಸ ಮಾಡಿದ್ದೇನೆ. ನಾನು ಸಾಯುವ ವರೆಗೂ ಕಾಂಗ್ರೆಸ್ ನಲ್ಲಿ ಇರುತ್ತೇನೆ, ಬಿಜೆಪಿ ಗೆ ಹೋಗುವ ಪ್ರಶ್ನೆ ಇಲ್ಲ ಎಂದರು.

     2024 ರಲ್ಲಿ ಪಕ್ಷ ಅಧಿಕಾರಕ್ಕೆ ಬರಲೇಬೇಕು,ಆ ಹಿತದೃಷ್ಟಿಯಿಂದ ನಾವು ಪತ್ರ ಬರೆದಿದ್ದೇವೆ. ಸೋನಿಯಾ ಗಾಂಧಿ ಅವರು ನಮಗೆ ತಾಯಿಗೆ ಸಮಾನ, ಅವರ ನಾಯಕತ್ವವನ್ನು ನಾನು ಒಪ್ಪುತ್ತೇನೆ. ಬಿಜೆಪಿ ಜೊತೆಗೆ ಕೈ ಜೋಡಿಸಿದ್ದಾರೆ ಎಂಬ ವಿಚಾರ ತುಂಬಾ ಮನಸಿಗೆ ನೋವುಂಟು ಮಾಡಿದೆ ಎಂದು ಹೇಳಿದರು.

    ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಕ್ಷದ ವಿಚಾರದ ಬಗ್ಗೆ ಮಹತ್ವದ ಚರ್ಚೆಯಾಗಿದೆ. ಅಲ್ಲಿನ ಚರ್ಚೆಯ ಪ್ರತಿ ವಿಚಾರವೂ ಸೋರಿಕೆಯಾಗಿದೆ. ಈ ರೀತಿ ಸೋರಿಕೆಯಾಗುವುದು ಸರಿಯಲ್ಲ. ನಮ್ಮ ಪತ್ರವೂ ಹಾಗೆಯೇ ಸೋರಿಕೆಯಾಗಿದೆ. ಪತ್ರ ಲೀಕ್ ಮಾಡುವ ಅಗತ್ಯವಿರಲಿಲ್ಲ. ಸಿಡಬ್ಲ್ಯುಸಿ ಸಭೆ ನಡೆಯುವಾಗಲೇ ಈ ಪತ್ರ ಬಹಿರಂಗವಾಗಿದ್ದು ಹೇಗೆ. ಇದು ದೊಡ್ಡ ಪ್ರಮಾದವೇ ಸರಿ. ಈ ಬಗ್ಗೆ ವಿಚಾರಣೆ ನಡೆಯಲೇಬೇಕು ಎಂದು ಹೇಳಿದರು.

    ರಾಷ್ಟ್ರದ ಹಿತದೃಷ್ಟಿಯಿಂದ ನಾವು ಪತ್ರ ಬರೆದಿದ್ದೇವೆ. ತಳಮಟ್ಟ,ಬೂತ್ ಮಟ್ಟ, ರಾಷ್ಟ್ರ ಮಟ್ಟದಲ್ಲಿ ಪಕ್ಷ ಸಂಘಟನೆಯಾಗಬೇಕು. ಇದೇ ಉದ್ದೇಶದಿಂದ ನಾವು ಪತ್ರ ಬರೆದಿದ್ದೇವೆ. ಸೋನಿಯಾ ಗಾಂಧಿ ಅವರು ಪಕ್ಷದ ಅಧ್ಯಕ್ಷರಾಗಿ ಮುಂದುವರಿದಿರುವುದಕ್ಕೆ ಸ್ವಾಗತವಿದೆ. ಪಕ್ಷದ ಘನತೆಯನ್ನು ಎತ್ತಿಹಿಡಿಯು ವ ಕೆಲಸ ಸೋನಿಯಾ ಮಾಡಿದ್ದಾರೆ. ಪಕ್ಷದ ಮಟ್ಟಿಗೆ ಅವರು ತಾಯಿಯಿದ್ದಂತೆ. ಆ ಬೆಂಬಲ ಇಂದು ಎಂದೆಂದಿಗೂ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap