ನಗರಸಭೆಸಾಮಾನ್ಯಸಭೆಯಲ್ಲಿ ಶಾಸಕಿ ಪೂರ್ಣಿಮಾ ಖಡಕ್ ಎಚ್ಚರಿಕೆ

ಹಿರಿಯೂರು: 

       ನಗರಸಭೆಗೆ ನಾಗರೀಕರ ತೆರಿಗೆ ಸರ್ಕಾರದ ಅನುದಾನವನ್ನೇ ನಂಬಿ ಕೂರುವ ಬದಲು ಪರ್ಯಾಯ ಸಂಪನ್ಮೂಲ ಕ್ರೋಡೀಕರಣ ಮಾಡಬೇಕು. ಈ ಬಗ್ಗೆ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ. ಎಂಬುದಾಗಿ ಶಾಸಕಿ ಪೂರ್ಣಿಮಾಶ್ರೀನಿವಾಸ್ ಎಚ್ಚರಿಕೆ ನೀಡಿದರು.ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

      ತೇರುಬೀದಿಯಲ್ಲಿರುವ ಘನಪುರಿ ವಾಣಿಜ್ಯ ಸಂರ್ಣದ ಮೊದಲ ಮಹಡಿಯಲ್ಲಿ ನಿರ್ಮಿಸಿರುವ 32 ಮಳಿಗೆಗಳನ್ನು ವಿದ್ಯುತ್ ಸಂಪರ್ಕ ಸಿಕ್ಕಿಲ್ಲ ಎಂಬ ಕಾರಣಕ್ಕೆ ಎರಡು ವರ್ಷಗಳಿಂದ ಬಾಡಿಗೆ ಕೊಟ್ಟಿಲ್ಲ. ನೆಹರೂ ಮಾರುಕಟ್ಟೆಯ ಮೊದಲ ಮಹಡಿಯ 12 ಮಳಿಗೆಗಳು ಹರಾಜಾಗದೇ ಉಳಿದಿವೆ. ನಗರಸಭೆಗೆ ಬರಬೇಕಿದ್ದ ಲಕ್ಷಾಂತರ ರೂಪಾಯಿ ಆದಾಯ ಖೋತಾ ಆಗಿದೆ.ಅ.29ರ ಒಳಗೆ ಮಳಿಗೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಹರಾಜಿಗೆ ಸಿದ್ಧಪಡಿಸಬೇಕು.ಎಂದು ಅವರು ತಾಕೀತು ಮಾಡಿದರು.

     ಸಿದ್ದನಾಯಕ ವೃತ್ತ ಹಾಗೂ ಬಿಲ್ಲಾಲ್ ಮಸೀದಿ ಹತ್ತಿರ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಿದ್ದು, ಅವುಗಳ ನಿರ್ವಹಣೆ ಯಾರು ಮಾಡುತ್ತಿದ್ದಾರೆ. ಎಷ್ಟು ಆದಾಯ ಬರುತ್ತಿದೆ. ಮಾಹಿತಿ ಕೊಡಿ ಎಂದು ಶಾಸಕರು ಕೇಳಿದರು. ಘಟಕ ನಿರ್ವಹಣೆಗೆ ಗುತ್ತಿಗೆ ನೌಕರರನ್ನು ನೇಮಿಸಿದ್ದು, ಬರುವ ಆದಾಯ ನೌಕರರ ವೇತನಕ್ಕೆ ಸರಿ ಹೊಂದುತ್ತದೆ. ಎಂದು ಪೌರಾಯುಕ್ತ ರಮೇಶ್ ಸುಣಗಾರ್ ಉತ್ತರ ನೀಡಿದಾಗ ಶಾಸಕಿ ಅಸಮಾಧಾನಗೊಂಡರು.

      ಗುರುಭವನದ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ನಡೆಸಲು ಶಿಕ್ಷಣ ಇಲಾಖೆ ಅಧಿಕಾರಿಗಳು ಮೌಖಿಕ ಒಪ್ಪಿಗೆ ನೀಡಿದ್ದು, ತಕ್ಷಣ ಪತ್ರ ವ್ಯವಹಾರ ನಡೆಸಿ ಅಲ್ಲಿ ಕ್ಯಾಂಟೀನ್ ಆರಂಭಿಸಿದಲ್ಲಿ ಬಡವರಿಗೆ ಅನುಕೂಲವಾಗುತ್ತದೆ ಎಂದು ಪ್ರೇಮ್ ಕುಮಾರ್ ಸಲಹೆ ನೀಡಿದರು.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಖಾಸಗಿ ಬಸ್ ನಿಲ್ದಾಣದ ಆವರಣದ ಪಕ್ಕದಲ್ಲಿ ಸಂಸ್ಥೆಯ ಬಸ್ಸುಗಳು ನಿಲ್ದಾಣ ಪ್ರವೇಶಿಸಲು ರಸ್ತೆ ನಿರ್ಮಿಸುತ್ತಿದ್ದು, ವಿಳಂಬ, ಗತಿಯಿಂದ ಎಲ್ಲರಿಗೂ ತೊಂದರೆ ಆಗಿದ್ದು, ಬೇಗ ಕಾಮಗಾರಿ ಮುಗಿಸಲು ಪತ್ರ ಬರೆಯಬೇಕು ಎಂದು ಹಿರಿಯರ ಸದಸ್ಯ ಜಬೀವುಲ್ಲಾ ಒತ್ತಾಯಿಸಿದರು.

      ಮಟನ್ ಮಾರ್ಕೆಟ್ ಕುರಿತು ಸೂಕ್ತ ಮಾಹಿತಿಯನ್ನು ಅಧಿಕಾರಿಗಳು ಯಾವುದೇ ಸಭೆಯಲ್ಲೂ ಸಮರ್ಪಕವಾಗಿ ಕೊಡುತ್ತಿಲ್ಲ. ಮಾರುಕಟ್ಟೆ ಸಮೀಪ ಖಾಸಗಿ ಜಾಗದಲ್ಲಿ ಮಾಂಸ ಮಾರಾಟ ನಡೆಯುತ್ತಿದ್ದು, ನೀವು ಏನು ಕ್ರಮ ಕೈಗೊಂಡಿದ್ದೀರಿ ಎಂದು ನಟರಾಜ್ ಪ್ರಶ್ನಿಸಿದರು.
ಪ್ರಥಮ ಬಾರಿಗೆ ತಾಲ್ಲೂಕು ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆದಿತ್ತು. ಕ್ರೀಡಾಂಗಣದ ಸಿದ್ಧತೆಗೆ ಯಾವ್ಯಾವ ಇಲಾಖೆಯವರು ಎಷ್ಟೆಷ್ಟು ನೆರವು ನೀಡಿದ್ದರು. ಎಂಬ ಸಮಗ್ರ ಮಾಹಿತಿ ಬೇಕು. ಬೀದಿ ನಾಯಿಗಳ ಹಾವಳಿ ಬಗ್ಗೆ ಮೂರು ತಿಂಗಳಾದರೂ ಕ್ರಮ ಕೈಗೊಳ್ಳದಿರುವುದು ಬೇಸರದ ಸಂಗತಿ ಎಂದು ಪೂರ್ಣಿಮಾ ಶ್ರೀನಿವಾಸ್ ತಿಳಿಸಿದರು. ಇಂದಿನ ಸಭೆಯಲ್ಲಿ ಅಧ್ಯಕ್ಷೆ ಶ್ರೀಮತಿ ಮಂಜುಳಾ, ಉಪಾಧ್ಯಕ್ಷೆ ಇಮ್ರಾನಾಬಾನು ಹಾಗೂ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link