ರಾಷ್ಟ್ರೀಯ ಮೌಲ್ಯಮಾಪನ ತಂಡದ ಪೋಸ್ಟ್‍ಮ್ಯಾನ್‍ಗಳಿಗೆ ಖಡಕ್ ಎಚ್ಚರಿಕೆ

ಕೊರಟಗೆರೆ

     ರಾಜ್ಯ ಹಾಗು ಕೇಂದ್ರ ಸರ್ಕಾರ ಬಡವರ ಹಿತರಕ್ಷಣೆಗಾಗಿ ನೀಡುವ ವೃದ್ದಾಪ್ಯ, ವಿದವಾ, ಹಾಗೂ ಅಂಗವಿಕಲ ವೇತನಗಳ ವಿತರಣೆ ಸಂಧರ್ಬದಲ್ಲಿ ಪೋಸ್ಟ್‍ಮ್ಯಾನ್‍ಗಳು ಕಮಿಷನ್ ಹಿಡಿದು ಪಿಂಚಣಿ ಹಣ ನೀಡುತ್ತಿರುವುದು ಗಮನಕ್ಕೆ ಬಂದಿದ್ದು, ಇಂತಹ ಪ್ರಕರಣಗಳು ನಮ್ಮ ಗಮನಕ್ಕೆ ಬಂದರೆ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆಇಂತಹವರ ವಿರುಧ್ಧಕ್ರಮ ತೆಗೆದುಕೊಳ್ಳಲು ಶಿಫಾರಸ್ಸು ಮಾಡಲಾಗುವುದು ಎಂದು ರಾಷ್ಟ್ರೀಯ ಮೌಲ್ಯಮಾಪನ ತಂಡದ ಜುಬೇರ್ ಪೋಸ್ಟ್‍ಮ್ಯಾನ್‍ಗಳಿಗೆ ಎಚ್ಚರಿಕೆ ನೀಡಿದರು.

      ತಾಲೂಕಿನತುಂಬಾಡಿಗ್ರಾಪಂ ವ್ಯಾಪ್ತಿಯ ಹಲವು ಗ್ರಾಮಗಳಿಗೆ ಭೇಟಿ ನೀಡಿದರಾಷ್ಟ್ರೀಯ ಮೌಲ್ಯಮಾಪನತಂಡಕೇಂದ್ರ ಸರಕಾರದಿಂದ ಬರುವಂತಹಅನುಧಾನದ ಬಗ್ಗೆ ಶುಕ್ರವಾರ ಅಂಕಿಅಂಶ ಕಲೆಹಾಕಿ ನಂತರಅಭಿವೃದ್ದಿಯ ಸ್ಥಳ ಪರಿಶೀಲನೆ ನಡೆಸಿ ಪೋಸ್ಟ್‍ಮ್ಯಾನ್‍ಗಳ ವಿರುದ್ದ ಸಾರ್ವಜನಿಕ ವಲಯದಲ್ಲಿ ಕೇಳಿಬಂದ ಆರೋಪದ ಆಲಿಸಿ ತೀಕ್ಷ್ಣ ಪ್ರತಿಕ್ರಿಯೆ ನೀಡಿಇಂತಹವರ ವಿರುದ್ದಕ್ರಮ ತೆಗೆದುಕೊಳ್ಳಲಾಗುವುದು ಎಂದರು.

     ತುಂಬಾಡಿಗ್ರಾಪಂಯಲ್ಲಿ ಆಗಮಿಸಿದ ಕೇಂದ್ರದತಂಡ ಮೂರುಜನ ಅಧಿಕಾರಿಗಳು ಕೊರಟಗೆರೆತಾಲೂಕು ಮಟ್ಟದಇಲಾಖೆಯ ಮಾಹಿತಿಯನ್ನು ಮೂರು ವಿಭಾಗಗಳನ್ನಾಗಿ ವಿಂಗಡಣೆ ಮಾಡಿಕೊಂಡು ಲೇಕ್ಕಾಪತ್ರ ಪರಿಶೀಲನೆ ನಡೆಸಿದರು. ಕೇಂದ್ರತಂಡಅಧಿಕಾರಿ ನರೇಗಾ ಮತ್ತು ವಸತಿಯೋಜನೆ, ನತೀಶ್‍ಕುಮಾರ್ ಸ್ವಸಹಾಯ ಸಂಘದ ಬಗ್ಗೆ ಮತ್ತುಜುಬೇರ್‍ಕಂದಾಯ ಮತ್ತು ಪಿಂಚಣಿ ಹಣ ವಿತರಣೆಯ ಬಗ್ಗೆ ಮಾಹಿತಿಕಲೆಹಾಕಿದರು.

     ತುಂಬಾಡಿ ಗ್ರಾಪಂಯಲ್ಲಿ ಹಿರಿಯ ನಾಗರೀಕ, ವಿಶೇಷ ಚೇತನ ಮತ್ತು ವಿಧವಾ ವೇತನ ಪಡೆಯುವ ಮಹಿಳೆಯ ಸಮಸ್ಯೆಯ ಬಗ್ಗೆ ಕೇಂದ್ರತಂಡದ ಅಧಿಕಾರಿಗಳು ಮಾಹಿತಿ ಕಲೆಹಾಕುವ ವೇಳೆ ಪಿಂಚಣಿಯ ಹಣ ನೀಡುವ ವೇಳೆ ಪೋಸ್ಟ್‍ಮ್ಯಾನ್ 20ರಿಂದ 30ರೂ ಹಣ ಪಡೆಯುತ್ತಾರೆಎಂದುಆರೋಪ ಮಾಡಿದರು. ಪ್ರಧಾನ ಮಂತ್ರಿಜನದನ್‍ಯೋಜನೆಯಡಿ ಪ್ರತಿಯೊಬ್ಬರು ಬ್ಯಾಂಕಿನಲ್ಲಿ ಈಗ ಉಚಿತವಾಗಿಖಾತೆ ತೆರೆಸಿ ಹಣ ವರ್ಗಾವಣೆ ಮಾಡಿಕೊಡಬೇಕುಎಂದುಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಕೇಂದ್ರ ಸರಕಾರದಿಂದ ಗ್ರಾ ಪಂ ಮೂಲಕ ಗ್ರಾಮೀಣ ಪ್ರದೇಶದಅಭಿವೃದ್ದಿಗೆ ಬರುವಂತಹ ಸಂಸದರಆದರ್ಶಗ್ರಾಮ, ಸ್ವಚ್ಚ ಭಾರತ್‍ ಅಭಿಯಾನ , ದಿನ್‍ದಯಾಳ್ ಉಪದ್ಯಾಯ, ಪ್ರಧಾನಮಂತ್ರಿಆವಾಜ್, ಮಹಾತ್ಮಗಾಂಧಿಉದ್ಯೋಗಖಾತ್ರಿ, ಗ್ರಾಮೀಣಅಭಿವೃದ್ದಿ, ಕೃಷಿ ಸಿಂಚಾಯಿ, ವಸತಿ, ಜನಧನ್, ಫಸಲ್‍ಭೀಮಯೋಜನೆ, ಗ್ರಾಮ ಸಡಕ್‍ಯೋಜನೆ, ವೃದ್ದಾಪ್ಯ ವೇತನ, ಡಿಜಿಟಲಿಕರಣ ಸೇರಿ ಹಲವು ಯೋಜನೆಗಳ ಅಭಿವೃದ್ದಿಯ ಅಂಕಿಅಂಶಗಳನ್ನು ಕಲೆ ಹಾಕಿದರು.

    ಪಂಚಾಯಿತಿಯಲ್ಲಿ ಸಾರ್ವಜನಿಕರಿಂದ ಮತ್ತು ಅಧಿಕಾರಿಗಳಿಂದ ಅಭಿವೃದ್ದಿಯ ಬಗ್ಗೆ ಮಾಹಿತಿ ಪಡೆದ ನಂತರತುಂಬಾಡಿಗ್ರಾಪಂ ವ್ಯಾಪ್ತಿಯ ಗೊಲ್ಲಹಳ್ಳಿ, ದಾಸರಹಳ್ಳಿ, ತುಂಬಾಡಿ ಗ್ರಾಮಗಳಿಗೆ ಬೇಟಿ ಅಧಿಕಾರಿಗಳ ತಂಡ ಮಹಾತ್ಮಗಾಂಧಿಉದ್ಯೋಗಖಾತ್ರಿಯೋಜನೆಯಕಾಮಗಾರಿ, ಸ್ವಚ್ಚಭಾರತ್ ಮೀಷನ್ ಮತ್ತು ಪ್ರಧಾನಮಂತ್ರಿ ಹೌಸಿಂಗ್ ಯೋಜನೆಯ ಪಲಾನುಭವಿಗಳಿಂದ ಅಧಿಕೃತವಾಗಿ ಮಾಹಿತಿ ಪಡೆದರು.

     ಪರಿಶೀಲನೆ ವೇಳೆಯಲ್ಲಿ ರಾಷ್ಟ್ರೀಯ ಮೌಲ್ಯ ಮಾಸನತಂಡ ಅಧಿಕಾರಿಗಳಾದ ನತೀಶ್‍ಕುಮಾರ್, ಸಾಚು, ಮಧುಗಿರಿ ವಿಭಾಗದ ಕೃಷಿ ಅಧಿಕಾರಿ ಪುಟ್ಟರಂಗಪ್ಪ, ತಾಪಂ ಇಓ ಶಿವಪ್ರಕಾಶ್, ಎಡಿ ನಾಗರಾಜು, ಉಪತಹಶೀಲ್ದಾರ್ ಶ್ರೀಧರ್, ನರಸಿಂಹಮೂರ್ತಿ, ವಿಎ ಗುರುಶಂಕರ್, ಸಹಾಯಕ ಕೃಷಿ ಅಧಿಕಾರಿಅಂಜನಾ, ಪಿಡಿಓ ವಿಜಯಕುಮಾರಿ, ಸುನೀಲ್‍ಕುಮಾರ್, ಸೇರಿದಂತೆಇತರರುಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link