ಪಾವಗಡ;-
ನಿಮ್ಮ ಸೇವಾ ಪುಸ್ತಕದಲ್ಲಿ ಕರ್ತವ್ಯಲೋಪ ಎಸಗಿರುವುದನ್ನು ನಮೂದಿಸದ ಹಾಗೇ ಕರ್ತವ್ಯ ನಿರ್ವಹಿಸಬೇಕು ಎಂದು ಗ್ರಾ.ಪಂ. ಪಿ.ಡಿ.ಓ.ಗಳಿಗೆ ತಾ.ಪಂ. ಅಧ್ಯಕ್ಷರಾದ ಸೊಗಡು ವೆಂಕಟೇಶ್ ಖಡಕ್ ಹೆಚ್ಚರಿಕೆ ನೀಡಿದರು , ಮಂಗಳವಾರ ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಕರೆದಿದ್ದ ಗ್ರಾ.ಪಂ. ಅಧ್ಯಕ್ಷರ ಹಾಗೂ ಪಿ.ಡಿ.ಒ.ಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಗ್ರಾ.ಪಂ. ಗಳ ಬಿಲ್ ಕಲೆಕಕ್ಟರ್ ಗಳು ಕರ ವಸೂಲಾತಿಯನ್ನು ಮಾಡುತ್ತಿಲ್ಲ ಸಿಬ್ಬಂದಿ ಕಾಲಹರಣ ಮಾಡುತ್ತಿದ್ದು ಕುಡಿಯುವ ನೀರು, ಗ್ರಾಮಗಳ ಸ್ವಚ್ಚತೆ, ನಿರ್ವಹಣೆ, ಉದ್ಯೋಗಖಾತ್ರಿ ಯೋಜನೆ, ಸ್ವಚ್ಚಭಾರತ್ ಯೋಜನೆ, ವಸತಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಪಿ.ಡಿ.ಒ.ಗಳಿಗೆ ತಾಕೀತು ಮಾಡಿದ ಅವರು, ಕರ ವಸೂಲಿಯಲ್ಲಿ ಬಿಲ್ ಕಲೆಕ್ಟರ್ ಗಳು ಹಿಂದೆ ಬಿದ್ದರೆ ಪಿ.ಡಿ.ಓ. ವಿರುದ್ದ ಕ್ರಮ ಜರುಗಿಸಲಾಗುವುದು ಎಂದು ಸೂಚಿಸಿದರು.
ಮನೆಗಳ ಆಯ್ಕೆ ವಿಚಾರದಲ್ಲಿ ಗುಡಿಸಲು, ಮನೆ ಇಲ್ಲದ ನಿರ್ಗತಿಕರನ್ನು ಹುಡುಕಿ ಅಂತಹ ಫಲಾನುಭವಿಗಳನ್ನು ಆಯ್ಕೆ ಮಾಡಿ, ಲಂಚ ನೀಡಿದವರನ್ನು ಪಟ್ಟಿಯಿಂದ ಕೈಬಿಡಿ ಎಂದು ಪಿ.ಡಿ.ಓ. ಗಳ ವಿರುದ್ದ ಮಾರ್ಮಿಕವಾಗಿ ಗುಡಗಿದರು.
ತಾ.ಪಂ. ಸದಸ್ಯರಾದ ಹನುಮಂತರಾಯ, ನರಸಿಂಹ, ಪುಟ್ಟಣ್ಣ, ರವರು ತಾ.ಪಂ. ಸದಸ್ಯರ ಮಾತಿಗೆ ಗ್ರಾ.ಪಂ.ಗಳು ಕಿವಿಗೊಡುವುದಿಲ್ಲ,ನಮ್ಮನ್ನು ಯಾವುದೇ ಸಭೆಗೆ ಆಹ್ವಾನಿಸುವುದಿಲ್ಲ, ನಾವು ಸೂಚಿಸಿದ ಅರ್ಹ ಬಡವರಿಗೆ ವಸತಿಯೋಜನೆಯಲ್ಲಿ ಮನೆಗಳನ್ನು ನೀಡುವುದಿಲ್ಲ, 10 ರಿಂದ 20 ಸಾವಿರ ಲಂಚ ಕೊಟ್ಟರೆ ಅಂತಹವರಿಗೆ ಮನೆಗಳನ್ನು ಕೊಡುತ್ತಾರೆ ಎಂದು ಸಭೆಯಲ್ಲಿ ಗಂಭಿರವಾಗಿ ಅರೋಪಿಸಿದರು.
ಇ.ಒ. ನರಸಿಂಹಮೂರ್ತಿ ಮಾತನಾಡಿ, ಶೇ ನೂರಲ್ಲಿ ಎಂಬತ್ತರಷ್ಟು ಕರ ವಸೂಲಿ ಮಾಡದೇ ಇರುವ ಬಿಲ್ ಕಲೆಕ್ಟರ್ ಗಳನ್ನು ಸೇವೆಯಿಂದ ವಜಾಗೊಳಿಸಲು ಸರ್ಕಾರ ಅದೇಶ ನೀಡಿದ್ದು, ಈ ತಿಂಗಳೊಳಗಾಗಿ ಕರ ವಸೂಲಿಯಲ್ಲಿ ಪ್ರಗತಿ ತೋರಿಸಲಿಲ್ಲ ವೆಂದರೆ ಅಂತಹ ಗ್ರಾ.ಪಂ. ಬಿಲ್ ಕಲೆಕಲ್ಟರ್ ಗಳ ವಿರುದ್ದ ಕ್ರಮ ಜರುಗಿಸಲಾಗುವುದು ಎಂದು ಸಭೆಯಲ್ಲಿ ಪಿ.ಡಿ.ಒ. ಗಳಿಗೆ ಸೂಚಿಸಿ, ವಸತಿ ಯೋಜನೆಯಲ್ಲಿ ಮೂಂಜೂರಾಗಿರುವ ಮನೆಗಳನ್ನು ಪೂರ್ಣಗೊಳಿಸದೆ ಇರುವ 2395 ಫಲಾನುಭವಿಗಳಿಗೆ ನೋಟಿಸ್ ಜಾರಿಗೊಳಿಸಿ, ನಂತರ ಅವರು ಮನೆಗಳನ್ನು ನಿರ್ಮಿಸಿಕೊಳ್ಳಲು ಮುಂದಾಗಲಿಲ್ಲವೆಂದರೆ ಪಟ್ಟಿಯಿಂದ ಕೈಬಿಟ್ಟು, ಪುನಃ ಗ್ರಾಮ ಸಭೆಗಳನ್ನು ಏರ್ಪಡಿಸಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಎ.ಡಿ.ಎ. ರಂಗನಾಥ್, ತಾ.ಪಂ. ಉಪಾದ್ಯಕ್ಷೆ ಕೃಷ್ಣವೇಣಿಅದಿನಾರಾಯಣ, ತಾ.ಪಂ. ಸದಸ್ಯರಾದ ರವಿಕುಮಾರ್ , ನಾಗರಾಜ್ , ಸಣ್ಣಾರೆಡ್ಡಿ, ಮತ್ತು ಪಿ.ಡಿ.ಓ. ಗಳಾದ ಶ್ರೀರಾಂನಾಯ್ಕ,ದಾದಲೂರಪ್ಪ,ಅಕ್ಕಲಪ್ಪ, ಮತ್ತು ಗ್ರಾ.ಪಂ. ಅಧ್ಯಕ್ಷರುಗಳು ಪಿ.ಡಿ.ಓ. ಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ