ಬೆಂಗಳೂರು
ನಗರದಲ್ಲಿ ಮತ್ತೆ ನೆತ್ತರು ಹರಿದಿದ್ದು ಬೈಕ್‍ನಲ್ಲಿ ಮನೆಗೆ ಹೋಗುತ್ತಿದ್ದ ಯುವಕನನ್ನ ಅಡ್ಡಗಟ್ಟಿ ಬರ್ಬರವಾಗಿ ಕೊಲೆ ಮಾಡಿರುವ ದುರ್ಘಟನೆ ಕಾಡುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ವಿನೋಬಾ ನಗರದಲ್ಲಿ ನಡೆದಿದೆ.
ವಿನೋಬಾ ನಗರದ ಮೊಹಮ್ಮದ್ ಯಾಹಿಯಾ ಕೊಲೆಯಾದವರು ಕೆಲಸ ಮುಗಿಸಿಕೊಂಡು ಸೋಮವಾರ ರಾತ್ರಿ ಬೈಕ್‍ನಲ್ಲಿ ತೆರಳುತ್ತಿದ್ದ ಮೊಹಮ್ಮದ್‍ನನ್ನು ಅಡ್ಡಗಟ್ಟಿದ ದುಷ್ಕರ್ಮಿ ಜಪ್ರುಲ್ಲಾ ಖಾನ್ ಬೈಕ್‍ನಿಂದ ಕೆಳಗೆ ಬೀಳಿಸಿ ದೊಡ್ಡ ಕತ್ತರಿಯಿಂದ ಕುತ್ತಿಗೆ, ಎದೆ ಸೇರಿದಂತೆ ಹಲವೆಡೆ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ.
ವಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ನಡೆ ಈ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಕಾಡುಗೊಂಡನಹಳ್ಳಿ ಪೊಲೀಸರು ಆರೋಪಿ ಜಫ್ರುಲ್ಲಾ ಖಾನ್‍ಗಾಗಿ ಹುಡುಕಾಟ ನಡೆಸಿದ್ದಾರೆ ಎಂದು ಡಿಸಿಪಿ ರಾಹುಲ್‍ಕುಮಾರ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








