ತುಮಕೂರು:
ವಿದ್ಯಾರ್ಥಿಗಳು ಸಾಮಾಜಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳುವ ಮೂಲಕ,ದೇಶದ ಆಗುಹೋಗುಗಳಿಗೆ ಸ್ಪಂದಿಸಬೇಕಾಗಿದೆ ಎಂದು ಪತ್ರಿಕೋದ್ಯಮಿ ಎಸ್.ನಾಗಣ್ಣ ಕರೆ ನೀಡಿದ್ದಾರೆ.
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್, ಎನ್.ಸಿ.ಸಿ. ಕ್ರೀಡೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಸಮಾನತೆಯ ಹರಿಕಾರ ದೇವರಾಜು ಅರಸು ಅವರು 104ನೇ ಜನ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತಿದ್ದ ಅವರು,ಮಕ್ಕಳು ಸಾಮಾಜಿಕ ಜಾಲ ತಾಣಗಳ ತಲಾಸ್‍ನಲ್ಲಿ ಬೌದ್ದಿಕವಾಗಿ ಕ್ಷೀಣಿಸುತ್ತಿದ್ದು, ಪದವಿ ಪಡೆದರೂ ಉಪಯೋಗಕ್ಕೆ ಬಾರದಂತರಾಗಿದ್ದಾರೆ.ಅವರ ಮುಂದೆ ಅನೇಕ ಕವಲುಗಳಿದ್ದು, ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲ ಇಂದಿನ ಯುವಜನತೆಯನ್ನು ಕಾಡುತ್ತಿದೆ ಎಂದರು.
ಇಂದಿನ ಶೈಕ್ಷಣಿಕ ವ್ಯವಸ್ಥೆಯಿಂದಾಗಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ನಡುವಿನ ಅಂತರ ತಗ್ಗುತಿದ್ದು,ಸ್ನಾತಕೋತ್ತರ ಕಲಿಕೆಯ ಬಗ್ಗೆ ಮಕ್ಕಳಿಗೂ ಆಸಕ್ತಿಯಿಲ್ಲ. ಪಾಠ ಮಾಡಲು ಶಿಕ್ಷಕರಿಗೂ ಕಾಳಜಿ ಇಲ್ಲದಂತಾಗಿದೆ.ಇದರ ಫಲವಾಗಿ ಎತೇಚ್ಚ ಮಾನವ ಸಂಪನ್ಮೂಲವಿದ್ದರೂ ನಿರುದ್ಯೋಗದ ಸಮಸ್ಯೆ ಕಾಡುತ್ತಿದೆ.ದೊಡ್ಡವರ ಕೆಲ ತಪ್ಪಿನಿಂದಾಗಿ ಅರ್ಥಿಕ ಹಿಂಜರಿತ ದೇಶವನ್ನು ಕಾಡುತ್ತಿದ್ದು, ಇವುಗಳಿಂದ ಹೊರಬರುವ ನಿಟ್ಟಿನಲ್ಲಿ ಶಿಕ್ಷಕರು, ಯುವಕರನ್ನು ಬೆಳೆಸಬೇಕಾಗಿದೆ ಎಂದು ಎಸ್.ನಾಗಣ್ಣ ನುಡಿದರು.
ಮಹಾನಗರಪಾಲಿಕೆ ಮೇಯರ್ ಶ್ರೀಮತಿ ಲಲಿತ ಮಾತನಾಡಿ, ಇಂದು ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂದಿದ್ದಾರೆ.ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಮತ್ತಷ್ಟು ಮುಂದೆ ಬರುವ, ತಮ್ಮ ಕಾಲಮೇಲೆ ತಾವು ನಿಲ್ಲುವಂತಹ ಕೆಚ್ಚೆದೆಯನ್ನು ಮಕ್ಕಳು ಬೆಳೆಸಿಕೊಳ್ಳಬೇಕು. ಪಾಲಿಕೆಯವತಿಯಿಂದ ನಗರದ ಪ್ರತಿಭಾನ್ವಿತ ಬಡ ಮಕ್ಕಳಿಗೆ ಶೇ24.10, ಶೇ7ರ ನಿಧಿಯಲ್ಲಿ ಶೈಕ್ಷಣಿಕ ಅಭಿವೃದ್ದಿ ಸಹಾಯಧನ ವಿತರಿಸಲು ಅರ್ಜಿ ಆಹ್ವಾನಿಸಿದ್ದು, ಆರ್ಹರು ಅರ್ಜಿ ಸಲ್ಲಿಸಿದರೆ ದೊರೆಕಿಸಿಕೊಡಲು ಸಿದ್ದ.ಕಾಲೇಜಿನ ಪ್ರಾಂಶುಪಾಲರ ಕೋರಿಕೆಯಂತೆ ಸರಕಾರಿ ಪ್ರಥಮದರ್ಜೆ ಕಾಲೇಜಿನ ಸ್ವಾಗತ ಕಮಾನನ್ನು ಮೇಯರ್ ಅವರ ನಿಧಿಯಿಂದ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.
ಪಾಲಿಕೆ ಸದಸ್ಯ ಶ್ರೀಮತಿ ಗಿರಿಜಾ ಮಾತನಾಡಿ,ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಬಡವರು, ಹಿಂದುಳಿದವರ ದ್ವನಿಯಾಗಿ ಕೆಲಸ ಮಾಡಿದವರು.ಹಾವನೂರು ಆಯೋಗದ ಮೂಲಕ ಅದುವರೆಗೂ ಬೆಳಕಿಗೆ ಬಾರದ ಸಣ್ಣ, ಸಣ್ಣ ಸಮುದಾಯಗಳಿಗೆ ಸರಕಾರದ ಸವಲತ್ತು ದೊರೆಯುವಂತೆ ಮಾಡಿ,ಸಮ ಸಮಾಜದ ಕನಸು ಕಂಡಿದ್ದರು.ಇವರು ಅಧಿಕಾರದಲ್ಲಿದ್ದಾಗ ತುಮಕೂರಿನ ಬಸ್ ನಿಲ್ದಾಣಕ್ಕೆ ಆಗಮಿಸಿ ಭಾಷಣ ಮಾಡಿದ್ದರು. ಇದರ ನೆನಪಿಗೆ ಸ್ಮಾರ್ಟ್‍ಸಿಟಿಯಿಂದ ಅಭಿವೃದ್ದಿಯಾಗುತ್ತಿರುವ ಬಸ್ ನಿಲ್ದಾಣಕ್ಕೆ ಹಾಗೂ ನಗರದ ಮುಖ್ಯರಸ್ತೆಯೊಂದಕ್ಕೆ ದೇವರಾಜ ಅರಸು ಅವರ ಹೆಸರಿಡುವಂತೆ ಮೇಯರ್ ಅವರನ್ನು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಜಗದೀಶಪ್ಪ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಧನಿಯಕುಮಾರ್, ಮುಖಂಡರಾದ ಶ್ರೀಧರ್, ವೆಂಕಟಾಚಲ,ಅರ್ಥಶಾಸ್ತ್ರದ ಅಧ್ಯಾಪಕಿ ಡಾ.ಲೀಲಾ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ದೇವರಾಜು ಅರಸು ಅವರ ಕುರಿತ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಚಿರಾಗ್, ಚೇತನ್‍ಕುಮಾರ್, ಸುಮ.ಎನ್.ಹಾಗೂ ಅತಿ ಹೆಚ್ಚು ಅಂಕ ಪಡೆದ ಕಾಲೇಜಿನ ವಿದ್ಯಾರ್ಥಿಗಳಾದ ರಶ್ಮಿ, ಡಿ., ವಿನಯ.ಜಿ.ಎಸ್., ಜೀವಿತ ,ಹೆಚ್.ಬಿ.ಸತೀಶ್ ಅವರುಗಳನ್ನು ಅಭಿನಂದಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ