ಬೆಂಗಳೂರು
ಶಾಲೆಗೆ ಪೋಷಕರನ್ನು ಕರೆದುಕೊಂಡು ಬಾ ಎಂದಿದ್ದಕ್ಕೆ ಏಳನೇ ತರಗತಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ದೊಮ್ಮಲೂರಿನಲ್ಲಿ ನಡೆದಿದೆ.
ದೊಮ್ಮಲೂರಿನ ಕೆಆರ್‌ಎಲ್‌ಎಸ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಣುಗೋಪಾಲ್(13)ಎಂದು ಮೃತ ವಿದ್ಯಾರ್ಥಿಯನ್ನು ಗುರುತಿಸಲಾಗಿದೆ.ಆತ ಘಟನೆಗೂ ಮುನ್ನ ಶಾಲೆಯಲ್ಲಿ ದೊಡ್ಡ ಗಲಾಟೆಯೇ ನಡೆದಿತ್ತು.
ಸಹಪಾಠಿಗಳ ನಡುವೆ ಗಲಾಟೆ ನಡೆದ ಸಂದರ್ಭದಲ್ಲಿ ಸಹಪಾಠಿಯೊಬ್ಬನಿಗೆ ವೇಣುಗೋಪಾಲ್ ಚಾಕು ಹಿಡಿದು ಬೆದರಿಸಿದ್ದ ಇದನ್ನು ನೋಡಿದ ಶಿಕ್ಷಕರು ಬೆದರಿಸಿ ನಾಳೆ ಶಾಲೆಗೆ ಪೋಷಕರನ್ನು ಕರೆದುಕೊಂಡು ಬರಬೇಕು ಎಂದು ಹೇಳಿದ್ದರು.ಅದಕ್ಕೆ ಹೆದರಿದ ವೇಣುಗೋಪಾಲ್ ಮನೆಗೆ ಹೋಗಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಶಾಲೆ ಎದುರು ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಬೇರೆ ವಿದ್ಯಾರ್ಥಿಗಳ ಪೋಷಕರೆಲ್ಲರೂ ಶಾಲೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ