ದಾವಣಗೆರೆ:
ಬೈಕೊಂದು ಆಪೇ ಆಟೋಗೆಡಿಕ್ಕಿ ಹೊಡೆದಿರುವ ಪರಿಣಾಮ ಸ್ಥಳದಲ್ಲಿಯೇ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಸಮೀಪದಸಾಸಲು ರಸ್ತೆಯಲ್ಲಿ ಶುಕ್ರವಾರಜರುಗಿದೆ.
ದಾವಣಗೆರೆಯ ಕಾಲೇಜು ಒಂದರಲ್ಲಿ ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದ ಗೌತಮ್ ಮೃತ ವಿದ್ಯಾರ್ಥಿಯಾಗಿದ್ದಾನೆ. ಸಮೀಪದ ತಣಿಗೆರೆಯ ಅಜ್ಜನ ಮನೆಗೆ ಆಗಮಿಸಿದ್ದ ಗೌತಮ್ ತನ್ನ ಸ್ನೇಹಿತ ಸಂಗಮೇಶ್ ಜೊತೆಗೆ ಮತ್ತೊಬ್ಬ ಸ್ನೇಹಿತನನ್ನು ಮಾತನಾಡಿಸಲು ಬೈಕ್‍ನಲ್ಲಿ ತೆರಳುತ್ತಿದ್ದರು.
ಆಗ ಸಾಸಲು ಕ್ರಾಸ್ ಬಳಿಯಲ್ಲಿ ಮುಂದೆಹೋಗುತ್ತಿದ್ದ ಆಪೇ ಆಟೋಗೆಬೈಕ್‍ಡಿಕ್ಕಿ ಹೊಡೆದಿದೆ.ಡಿಕ್ಕಿಯ ರಭಸಕ್ಕೆ ಬೈಕ್ ಸಮೇತಗೌತಮ್ ಮತ್ತು ಸಂಗಮೇಶ್‍ರಸ್ತೆ ಬದಿಯ ಹೊಲವೊಂದರದಲ್ಲಿ ಬಿದ್ದ ಪರಿಣಾಮ ಸ್ಥಳದಲ್ಲಿಯೇ ಗೌತಮ್ ಮೃತಪಟ್ಟಿದ್ದು, ಘಟಣೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಂಗಮೇಶ್‍ನನ್ನು ಸ್ಥಳೀಯರು ಚಿಕಿತ್ಸೆಗಾಗಿ ದಾವಣಗೆರೆಯ ಆಸ್ಪತ್ರೆಗೆ ಸಾಗಿಸಿದರು.ಈ ಕುರಿತು ಸಂತೇಬೆನ್ನೂರು ಠಾಣೆಯಲ್ಲಿ ದೂರುದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ