ಆತಂಕದಲ್ಲೇ ಪರೀಕ್ಷೆ ಬರೆದ ವಿದ್ಯಾರ್ಥಿಗಳು

ಚಿತ್ರದುರ್ಗ

      ಜಿಲ್ಲೆಯಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಪ್ರಾರಂಭವಾಗಿದೆ. ಮಕ್ಕಳು ಪರೀಕ್ಷಾ ತಯಾರಿಯೊಂದಿಗೆ ಕೊರೊನಾ ವಿರುದ್ಧ ಹೋರಾಡಲು ಪೂರ್ಣ ರೀತಿಯಿಂದ ಸನ್ನದ್ಧರಾಗಿ ಪರೀಕ್ಷಾ ಕೇಂದ್ರವನ್ನು ಪ್ರವೇಶಿಸಿ ಪ್ರಶ್ನೆ ಪತ್ರಿಕೆಗೆ ಉತ್ತರ ನೀಡಿದ್ದಾರೆ.ಕೊರೋನಾ ಭಯದ ನಡುವೆಯೇ ಇಂದಿನಿಂದ ಜುಲೈ 4ರವರೆಗೆ ನಡೆಯಲಿರುವ ಎಸ್.ಎಸ್.ಎಲ್.ಸಿ ಅಂತಿಮ ಪರೀಕ್ಷೆಗೆ ಎಲ್ಲಾ ಕೇಂದ್ರಗಳನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಿ ಸೋಂಕು ಹರಡದಂತೆ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮುನ್ನೆಚ್ಚರಿಕಾ ಕ್ರಮ ವಹಿಸಿದೆ.

    ಪರೀಕ್ಷೆ ಬರೆಯಲು ಆಗಮಿಸಿದ್ದ ಮಕ್ಕಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ ಕೈಗಳಿಗೆ ಸ್ಯಾನಿಟೈಸರ್ ಹಚ್ಚಲಾಗುತ್ತಿದೆ. ಈ ವೇಳೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಹಾಕಲಾಗಿದ್ದ ಬಾಕ್ಸ್‍ನಲ್ಲೇ ಮಕ್ಕಳು ನಿಂತು ಮೆಡಿಕಲ್ ಸ್ಕ್ರೀನಿಂಗ್ ಮಾಡಿಸಿಕೊಂಡಿದ್ದಾರೆ. ಮಾಸ್ಕ್ ಇಲ್ಲದೆ ಆಗಮಿಸಿದ ಮಕ್ಕಳಿಗೆ ಸೆಂಟ್ ಜೋಸೆಫ್ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಮಾಸ್ಕ್ ವಿತರಣೆ ಕೂಡ ಮಾಡಲಾಗಿದೆ

    ನಿತ್ಯ ಬೆಳಗ್ಗೆ 10.30ರಿಂದ ಮಧ್ಯಹ್ನ 1.30ರವರೆಗೆ ಪರೀಖ್ಷೆ ನಡೆಯಲಿದೆ. ಕೊರೋನಾ ಸೋಂಕು ಹರಡದಂತೆ ಪರೀಕ್ಷಾ ಕೇಂದ್ರಗಳಲ್ಲಿ ಪ್ರತಿ ಅಭ್ಯರ್ಥಿಯನ್ನು ಧರ್ಮಲ್ ಸ್ಕ್ರೀನಿಂಗ್ ಮಾಡುವುದರ ಮೂಲಕ ಕೂಠಡಿಗಳಿಗೆ ಕಳುಹಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹೆಚ್ಚುವರಿಯಾಗಿ ಪರೀಕ್ಷಾ ಕೇಂದ್ರಗಳನ್ನು ಪ್ರಾರಂಭ ಮಾಡಲಾಗಿದ್ದು, ಪ್ರತಿ ಕೊಠಡಿಯಲ್ಲಿ 18ರಿಂದ 20 ಮಕ್ಕಳಿಗೆ ವ್ಯವಸ್ಥೆಒಂದು ಬೆಂಚಿನಲ್ಲಿ ಇಬ್ಬರು ಮಾತ್ರ ಇರುವಂತೆ ಆಸನ ವ್ಯವಸ್ಥೆಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ ಮಾಡಲಾಗಿದೆ.

   ಚಿತ್ರದುರ್ಗ ನಗರದ ವಿವಿಧ ಪರೀಕ್ಷಾ ಕೇಂದ್ರಗಳ ಬಳಿ ಸುಮಾರು 100 ಮೀಟರ್ ಅಂತರದಲ್ಲಿಯೇ ವಿದ್ಯಾರ್ಥಿಗಳನ್ನು ಪರಿಶೀಲಿಸಿ ಕೇಂದ್ರಗಳಿಗೆ ಬಿಡಲಾಗಿದೆ, ಜೂ.18 ರಂದು ನಡೆದ ದ್ವಿತೀಯ ಪಿಯು ಪರೀಕ್ಷೆಯ ಕೆಲ ಕೇಂದ್ರಗಳ ಬಳಿ ಸಾಮಾಜಿಕ ಅಂತರವನ್ನು ಕಾಯ್ದೆ ಸಾಮಾನ್ಯ ರೀತಿಯಲ್ಲಿ ಇರಲಾಗಿತ್ತು ಇದರಿಂದ ಈ ಬಾರಿಯ ಎಸ್.ಎಸ್.ಎಲ್.ಸಿ.ಪರೀಕ್ಷೇಯ ಬಗ್ಗೆ ಎಚ್ಚತ್ತೆ ಇಲಾಖೆ ಬಿಗಿಯಾದ ಕ್ರಮವನ್ನು ತೆಗೆದುಕೊಂಡು ಯಾವುದೇ ದೂರು ಬಾರದ ರೀತಿಯಲ್ಲಿ ಪರೀಕ್ಷೆಯನ್ನು ನಡೆಸಲು ಮುಂದಾಗಿದೆ ಅದರಂತೆ ಇಂದು ಪರೀಕ್ಷೆಯನ್ನು ಸಹಾ ನಡೆಸಿದೆ.

    ಜೂನ್ 25 ರಿಂದ ಎಸ್‍ಎಸ್‍ಎಲ್ ಸಿ ಪರೀಕ್ಷೆಗಳು ಆರಂಭವಾಗಿದ್ದು ಗುರುವಾರ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ವಿದ್ಯಾರ್ಥಿನಿ ಒಬ್ಬರಿಗೆ ಜ್ವರ, ಸೀತ, ಕೆಮ್ಮು ಕೋವಿಂಡ್ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಕೂಡಲೇ ಎಚ್ಚೆತ್ತುಕೊಂಡ ಜಿಲ್ಲಾಡಳಿವು ಆ ವಿದ್ಯಾರ್ಥಿನಿಗೆ ಪ್ರತ್ಯೇಕವಾಗಿ ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಡಲಾಗಿದೆ.

   ಕೋವಿಡ್ ರೋಗ ಲಕ್ಷಣಗಳು ಕಂಡು ಬಂದಿದ್ದರಿಂದಾಗಿ ಆರೋಗ್ಯ ಇಲಾಖೆ ಆ ವಿದ್ಯಾರ್ಥಿನಿಯ ಗಂಟಲು ದ್ರವ ಸಂಗ್ರಹ ಮಾಡಿ ಪರೀಕ್ಷೆಗಾಗಿ ಕಳುಹಿಸಿದೆ ವಿದ್ಯಾರ್ಥಿಗಳು ಯಾವುದೇ ರೀತಿಯಲ್ಲಿ ಆತಂಕಕ್ಕೆ ಒಳಗಾಗಬಾರದು, ಶೀತ, ಜ್ವರ, ಕೆಮ್ಮು, ನೆಗಡಿ ಇದ್ದುದರಿಂದಾಗಿ ಗಂಟಲು ದ್ರವ ಸಂಗ್ರಹ ಮಾಡಲಾಗಿದೆ. ಆ ವಿದ್ಯಾರ್ಥಿನಿಗೆ ಕೋವಿಡ್ ಸೋಂಕಿರುವುದು ದೃಢವಾಗಿಲ್ಲ. ಅಲ್ಲದೆ ಆ ವಿದ್ಯಾರ್ಥಿನಿಯನ್ನು ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.

    ಜ್ವರ, ಶೀತ, ಕೆಮ್ಮ ಲಕ್ಷಣ ಇದ್ದ ವಿದ್ಯಾರ್ಥಿನಿಯ ಗಂಟಲು ದ್ರವ ಸಂಗ್ರಹ ಮಾಡಿದ್ದು ಕೋವಿಡ್ ಪರೀಕ್ಷೆಯ ವರದಿ ಇನ್ನೂ ಬಂದಿಲ್ಲ. ಒಂದು ವರದಿಯಲ್ಲಿ ಪಾಸಿಟಿವ್ ಬಂದರೆ ಆ ವಿದ್ಯಾರ್ಥಿನಿಯನ್ನು ಶನಿವಾರ ನಡೆಯಲಿರುವ ಪರೀಕ್ಷೆಗೆ ಕೂರಿಸುವುದಿಲ್ಲ ಎಂದು ತಾಲೂಕು ಶಿಕ್ಷಣಾಧಿಕಾರಿ ಸ್ಪಷ್ಟನೆ ನೀಡಿದರು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link