ಖಾಸಗಿ ಶಾಲಾ ವಾಹನ ಪಲ್ಟಿ: ವಿದ್ಯಾರ್ಥಿಗಳಿಗೆ ಗಾಯ-ಆಸ್ಪತ್ರೆಗೆ ದಾಖಲು

ಚಿ.ನಾ.ಹಳ್ಳಿ / ತುಮಕೂರು

    ಖಾಸಗಿ ಶಾಲಾ ವಾಹನ ಉರುಳಿಬಿದ್ದು ವಾಹನದಲ್ಲಿದ್ದ 7 ಶಾಲಾ ಮಕ್ಕಳು ಸೇರಿದಂತೆ ಒಟ್ಟು 9 ಮಂದಿ ಗಾಯಗೊಂಡು ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬುಧವಾರ ಸಂಜೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ಅಗಸರಹಳ್ಳಿ ಬಳಿ ನಡೆದಿದೆ.

     ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಕ್ರಾಸ್‍ನಲ್ಲಿರುವ ಶ್ರೀಗುರು ಕಾನ್ವೆಂಟ್ ಶಾಲಾ ಮಕ್ಕಳಿದ್ದ ವಾಹನ ಅಪಘಾತಕ್ಕೆ ಒಳಗಾಗಿದೆ. ಶಾಲೆ ಬಿಟ್ಟ ನಂತರ ಮಕ್ಕಳನ್ನು ಅವರವರ ಗ್ರಾಮಗಳಿಗೆ ಬಿಡಲು ವಾಹನದಲ್ಲಿ ಕರೆದೊಯ್ಯುತ್ತಿದ್ದಾಗ ಅಗಸರಹಳ್ಳಿಗೆ ಹೋಗುವ ( ಬ್ಯಾಡರಹಳ್ಳಿ-ಸಾಸಲು ರಸ್ತೆ) ತಿರುವಿನ ಕೆರೆ ಬಳಿ ಈ ಘಟನೆ ಸಂಭವಿಸಿದೆ. ವಾಹನ ಉರುಳಿ ಬೀಳುತ್ತಿದ್ದಂತೆಯೇ ಸ್ಥಳೀಯರು ಮಕ್ಕಳನ್ನು ರಕ್ಷಿಸಿ ಚಿಕ್ಕನಾಯಕನಹಳ್ಳಿ ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ.

     ಚಾಲನೆ ಮಾಡುತ್ತಿದ್ದ ರವೀಂದ್ರ ಕುಮಾರ್ (55) ಅವರಿಗೆ ಸ್ವಲ್ಪ ಹೆಚ್ಚಿನ ಪೆಟ್ಟಾಗಿದ್ದು, ಉಳಿದ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಮೊದಲಿಗೆ ಚಿಕ್ಕನಾಯಕನಹಳ್ಳಿ ಆಸ್ಪತ್ರೆಗೆ ಸುಮಾರು 5.30ರ ವೇಳೆಗೆ 7 ಮಕ್ಕಳನ್ನು ಚಿಕಿತ್ಸೆಗೆ ಕರೆದೊಯ್ದು ಅಲ್ಲಿಂದ ತುಮಕೂರಿಗೆ ಕರೆದುಕೊಂಡು ಬರಲಾಯಿತು. ಬ್ಯಾಡರಹಳ್ಳಿ, ಅಗಸರಹಳ್ಳಿ, ಮಲಗೊಂಡನಹಳ್ಳಿ ಈ ಭಾಗದ ಮಕ್ಕಳನ್ನು ಬಿಟ್ಟು ಬರಲೆಂದು ತೆರಳಿದ್ದಾಗ ಈ ಘಟನೆ ಜರುಗಿದ್ದಾಗಿ ತಿಳಿದು ಬಂದಿದೆ.

      ಪ್ರೀತಿ, ಕೀರ್ತನಾ, ಪಾವನ, ಜಗದೀಶ, ಸಿದ್ದರಾಮಯ್ಯ, ಹರ್ಷಿತ, ಪವಿತ್ರ, ರಮೇಶ್ ಇವರೆಲ್ಲರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. 8 ರಿಂದ 13 ವರ್ಷದ ಒಳಗಿನ ಮಕ್ಕಳೆಂದು ತಿಳಿದುಬಂದಿದೆ. ತುಮಕೂರು ಜಿಲ್ಲಾಸ್ಪತ್ರೆಗೆ ವಿವಿಧ ಅಧಿಕಾರಿಗಳು ಭೇಟಿ ನೀಡಿ ವಿಚಾರಿಸಿದರು. ಮಕ್ಕಳ ಪೋಷಕರು ಆಗಮಿಸಿದ್ದರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap