ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳಿ : ಭಾಸ್ಕರ್ ರಾವ್

ಬೆಂಗಳೂರು

    ನಿರಂತರ ಓದುವ ಹವ್ಯಾಸದಿಂದ ಮಾತ್ರ ವಿದ್ಯಾರ್ಥಿಗಳು ಉತ್ತಮ ಜ್ಞಾನ ಪಡೆದುಕೊಳ್ಳಲು ಸಾಧ್ಯ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ತಿಳಿಸಿದರು.

    ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪೊಲೀಸ್ ಆಯುಕ್ತ ಅಭಿಮಾನಿಗಳ ಬಳಗ, ಕನ್ನಡ ಅಭಿವೃದ್ಧಿ ಬಳಗ ವತಿಯಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ಏರ್ಪಡಿಸಿದ್ದ, 500 ಕನ್ನಡ ಪುಸ್ತಕ ಗಳನ್ನು ಉಚಿತವಾಗಿ ವಿತರಿಸಿ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಪುಸ್ತಕಗಳು ಉತ್ತಮ ಸಂಗಾತಿಯಾಗಬೇಕು ಎಂದರು.

    ಕನ್ನಡ ಭಾಷೆಯಲ್ಲಿ ಓದಿದವರೂ ದೇಶ ದಲ್ಲಿ ಒಳ್ಳೆಯ ಹುದ್ದೆಗಳನ್ನು ಅಲಂಕರಿ ಸಿದ್ದಾರೆ. ಕಲಿಯುವ ಛಲವಿದ್ದರೆ ಭಾಷೆ ಅಡ್ಡಿಯಾಗಲಾರದು. ಕನ್ನಡ ಭಾಷೆ ಯನ್ನು ಉಳಿಸಿ ಬೆಳೆಸುವ ಕೆಲಸ ನಮ್ಮಿಂ ದಲೇ ಆಗಬೇಕಿದೆ’ ಎಂದರು.

    ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲ ಸಂಪನ್ನ ಕುಮಾರ್ ಮಾತನಾಡಿ,ನಾವೆಲ್ಲ ಯಾವುದೇ ಕನ್ನಡ ಕಾರ್ಯಕ್ರಮದಲ್ಲಿ ಇರಲಿ, ಕನ್ನಡಕ್ಕಾಗಿ ದುಡಿದ, ನಮ್ಮ ಸ್ಥಳೀಯ ಪರಿಸರದಲ್ಲಿಯೇ ಪ್ರಾತಸ್ಮರಣೀಯರಾದ ಬಹಳಷ್ಟು ಮಹನಿಯರು ಬದುಕಿ ಹೋಗಿದ್ದಾರೆ. ಅವರನ್ನೆಲ್ಲ ಸ್ಮರಿಸಿಕೊಳ್ಳುವ ಜತೆಗೆ ಅವರ ಕುರಿತಾಗಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬೇಕಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಪ್ರಯಾಣಿಕರಿಗೆ ಉಚಿತವಾಗಿ ಕನ್ನಡ ಪುಸ್ತಕ ಹಂಚಿಕೆ ಮಾಡಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link