ದೊಡ್ಡೇರಿ
ದೊಡ್ಡೇರಿ ಹೋಬಳಿಯು ಆಂಧ್ರಗಡಿ ಭಾಗಕ್ಕೆ ಹೊಂದಿಕೊಂಡಿದ್ದು ಈ ಭಾಗದಲ್ಲಿ ಸಾವಿರದ ಇನ್ನೂರು ಅಡಿಯಷ್ಟು ಆಳಕ್ಕೆ ಕೊಳವೆ ಬಾವಿಯನ್ನು ಕೊರೆದರೂ ಕೃಷಿಯನ್ನೆ ಅವಲಂಬಿಸಿರುವ ರೈತರಿಗೆ ನೀರು ಸಿಗುತ್ತಿಲ್ಲ. ಇದೆ ರೀತಿ ಮುಂದುವರೆದರೆ ರೈತರು ಕಂಗಾಲಾಗುವ ಪರಿಸ್ಥಿತಿ ಇರುತ್ತದೆ ಇಂತಹವರ ಮಕ್ಕಳಾದ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಿ ಐ.ಎ.ಎಸ್, ಕೆ.ಎ.ಎಸ್, ಐ.ಪಿ.ಎಸ್. ಅಂತಹ ಉನ್ನತ ಹುದ್ದೆಗಳನ್ನು ಪಡೆದುಕೊಂಡು ನಿಮ್ಮ ಪೋಷಕರಿಗೆ, ಉಪಾಧ್ಯಾಯರಿಗೆ ಕೀರ್ತಿ ತರಬೇಕು ಎಂದು ಬಡವನಹಳ್ಳಿ ಮೊರಾರ್ಜಿದೇಸಾಯಿ ವಸತಿ ಶಾಲೆಯ ಆವರಣದಲ್ಲಿ 2018/19ರ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಸಕ ಎಮ್.ವಿ.ವೀರಭದ್ರಯ್ಯ ತಿಳಿಸಿದರು.
ಜಿಲ್ಲಾ ಪಂ. ಸದಸ್ಯರಾದ ಹೂವಿನ ಚೌಡಪ್ಪನವರು ಗ್ರಾಮೀಣ ಭಾಗದಲ್ಲಿ ಇಂತಹ ವಸತಿ ಶಾಲೆಗಳು ಪ್ರಾರಂಭವಾಗಿರುವುದು ನಿಮ್ಮೆಲ್ಲರ ಸುದೈವ. ನಾವುಗಳು ವಿದ್ಯಾಭ್ಯಾಸ ಮಾಡಬೇಕಾದರೆ ಎರಡು-ಮೂರು ಕಿಲೋ ಮೀಟರ್ ದೂರ ನಡೆದುಕೊಂಡು ಹೋಗಬೇಕಾಗಿತ್ತು.
ಈ ಭಾಗದಲ್ಲಿ ದುಡಿಯುವ ಕೈಗಳಿಗೆ ಕೆಲಸ ವಿಲ್ಲದೆ ಬೆಳೆ ಬೆಳೆಯಲು ಬೋರ್‍ಗಳಲ್ಲಿ ನೀರು ಇಲ್ಲದೆ, ನಿಮ್ಮ ಪೋಷಕ ವೃಂದದವರು ಸೊರಗುವುದನ್ನು ಮನಗಂಡು ಮಾಜಿ ಶಾಸಕ ಕೆ.ಎನ್.ರಾಜಣ್ಣ ಈ ಭಾಗಕ್ಕೆ ಈ ವಸತಿ ಶಾಲೆಯನ್ನು ಮಂಜೂರು ಮಾಡಿಸಿ, ಅವರ ಅವಧಿಯಲ್ಲಿಯೆ ಈ ಶಾಲೆಯನ್ನು ಸಹ ಉದ್ಘಾಟನೆ ಮಾಡಿದ್ದರು. ಆ ಫಲವಾಗಿ ಸುಮಾರು 250 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುವಂತಹ ವಸತಿ ಶಾಲೆಯಾಗಿದೆ.
ಯಾವುದೇ ಖಾಸಗಿ ಶಾಲೆಗಳಿಗಿಂತಲೂ ಈ ಶಾಲೆಯಲ್ಲಿ ಗುಣಮಟ್ಟವಾದ ಶಿಕ್ಷಣವನ್ನು ನುರಿತ, ಪದವಿ ತರಬೇತಿ ಪಡೆದಿರುವ ಶಿಕ್ಷಕರುಗಳು ನೀಡುತ್ತಿದ್ದಾರೆ. ಕಳೆದ ವರ್ಷದಂತೆಯೆ ಈ ವರ್ಷವೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಮೊದಲನೆ ಬಹುಮಾನವಾಗಿ1,000ದಂತೆ, ಮೂರು ಬಹುಮಾನಗಳನ್ನು ನೀಡಿರುತ್ತಾರೆ. ಇದೇ ರೀತಿ ಪ್ರತಿ ವರ್ಷವೂ ನಾನು ಸಹ ಬಹುಮಾನ ನೀಡುತ್ತೇನೆ ಎಂದು ಈ ಸಂದರ್ಭದಲ್ಲಿ ಹೇಳಿರುತ್ತಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಡಿ.ಆರ್.ರಮೇಶ್, ಕಳೆದ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉನ್ನತ ಫಲಿತಾಂಶ ಬರಬೇಕಾದರೆ ನಮ್ಮ ಶಿಕ್ಷಕರ ಪಾತ್ರ ಮುಖ್ಯವಾಗಿದೆ.
ಕೆಲವೆ ದಿನಗಳಲ್ಲಿ ನಡೆಯುವ ಎಸ್.ಎಸ್.ಎಲ್.ಸಿ ಪರೀಕ್ಷೆಯೆಂಬ ಮಹಾ ಯುಧ್ದಕ್ಕೆ ಇಂದಿನಿಂದಲೆ ತಯಾರಾಗುವುದರ ಜೊತೆಗೆ ಪ್ರಬುದ್ದ ಸಮಾಜ ನಿರ್ಮಿಸಲು ಮತ್ತು ನಿಮ್ಮ ಜೀವನ ಮಟ್ಟ ಸುಧಾರಿಸಲು ಇಂತಹ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದರೆ ನೀವು ಒಳ್ಳೆಯ ವಿದ್ಯಾರ್ಥಿಗಳಾಗಿ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಶಾಸಕರ ನಿಧಿಯಿಂದ ಶಾಲಾ ಆವರಣಕ್ಕೆ ಸಿಮೆಂಟ್ ಕುರ್ಚಿ, ಮತ್ತು ಒಂದು ಕುಡಿಯುವ ನೀರಿನ ಬೋರ್‍ವೆಲ್ ಮಂಜೂರು ಮಾಡಿಕೊಡಬೇಕು.
ನಮ್ಮ ವಿದ್ಯಾರ್ಥಿಗಳು ಇಂತಹ ವಾತಾವರಣದಲ್ಲಿ ವಾಯು ವಿಹಾರಕ್ಕೆ ಕೈ ತೋಟ ಬೆಳೆಸಲು ಅನೂಕೂಲ ಆಗುತ್ತದೆ ಎಂದು ತಮ್ಮ ಮನವಿಯನ್ನು ನೀಡಿದರು.ಕಾರ್ಯಕ್ರಮದಲ್ಲಿ ತಾ.ಪಂ.ಸದಸ್ಯರಾ ಗೀತಾ ಬಸವರಾಜು, ಮುಖಂಡರಾದ ವಿಶ್ವನಾಥಪ್ಪ ಸಿಡದರಗಲ್ಲು, ರಂಗನಾಥ್ ಗ್ರಾ.ಪಂ.ಅದ್ಯಕ್ಷರು, ನೂರ್‍ಜಾನ್, ಗಬಲಿ ರಾಜಣ್ಣ, ಮಂಜುನಾಥ್ ಹಾಗೂ ಶಿಕ್ಷರುಗಳಾದ ಜನಾರ್ಧನ್, ರಾಜಣ್ಣ, ಮಂಜುನಾಥ್ ಇತರರು ಹಾಗೂ ಸಿಬ್ಬಂದಿ ವರ್ಗ, ಪೋಷಕರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ