ವಿದ್ಯೆಯ ಜೊತೆ ವ್ಯವಹಾರಿಕ ಜ್ಞಾನ ಅತ್ಯವಶ್ಯಕ : ಮುದ್ದಪ್ಪ

ತಿಪಟೂರು

       ವಿದ್ಯೆಯನ್ನು ನಾವು ಎಷ್ಟೇ ಜ್ಞಾನವನ್ನು ಸಂಪಾದಿಸಿದರು ಅದನ್ನು ಸೂಕ್ತ ಸ್ಥಳದಲ್ಲಿ ಬಳಸುವ ಜ್ಞಾನವನ್ನು ವ್ಯವಹಾರ ಕಲಿಸುತ್ತದೆ ಆದ್ದರಿಂದ ವಿದ್ಯೆಯಷ್ಟೇ ವ್ಯಾವಹಾರಿಕ ಜ್ಞಾನವು ಅತ್ಯವಶ್ಯಕವೆಂದು ತಿಪಟೂರಿನ ಎಸ್.ಬಿ.ಐ ಬ್ಯಾಂಕ್‍ನ ಸಹ ವ್ಯವಸ್ಥಾಪಕ ಮುದ್ದಪ್ಪ ತಿಳಿಸಿದರು.

      ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಮಾರಾಟ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ದಿನಗಳಲ್ಲಿ ವ್ಯವಹಾರಮಾಡುವವರು ಅಷೇನು ವಿದ್ಯಾವಂತರಾಗಿರದಿದ್ದರು ಅವರು ವ್ಯವಹಾರ ಜ್ಞಾನವನ್ನು ಚೆನ್ನಾಗಿ ಅರಿತಿದ್ದರು.

        ಆದರೆ ಇಂದು ಪೋಷಕರು ತಮ್ಮ ಮಕ್ಕಳು ಓದಿನಲ್ಲಿ ಯಾವಾಗಲು ಮೊದಲಿಗರಾಗಿರಬೇಕೆಂದು ಅವರನ್ನು ಹೊರಗಡೆ ಕಳುಹಿಸಿದೇ ಕೇವಲ ಪುಸ್ತಕದ ಹುಳುಗಳನ್ನಾಗಿ ಮಾಡಿರುತ್ತಾರೆ. ಆ ಮಕ್ಕಳಿಗೆ ಪರಿಸರದಲ್ಲಿ ದೊರೆಯುವ ವಸ್ತುಗಳು ಯಾವುವು ತಯಾರುಮಾಡುವವು ಯಾವುವು, ಯಾವುದು ನೈಸರ್ಗಿಕ, ಯಾವುದು ಕೃತಕ ಎಂಬುದೇ ತಿಳಿದಿರುವುದಿಲ್ಲ ಆದ್ದರಿಂದ ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಅವರ ವ್ಯವಾಹಾರಿಕ ಜ್ಞಾನವನ್ನು ಹೆಚ್ಚಿಸುತ್ತಿರುವುದು ಅಭಿನಂದನಾರ್ಹವೆಂದರು.

      ಪ್ರಾಂಶುಪಾಲ ಪ್ರೊ. ಕೆ.ಎಂ. ರಾಜಣ್ಣ ಮಾತನಾಡುತ್ತಾ ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಸರ್ಕಾರಿ ನೌಕರಿಗಳು ಗಗನಕುಸುಮವಾಗಿದ್ದು ಕೇಲವ ಸರ್ಕಾರಿ ನೌಕರಿಗಳನ್ನೇ ಅವಲಂಭಿಸದೇ ಇಂದಿನ ಯುವ ಜನಾಂಗ ತಾವೇ ಸ್ವಂತ ಉದ್ಯಮವನ್ನು ಸ್ಥಾಪಿಸಿ ರಾಷ್ಟ್ರದ ಅಭಿವೃದ್ಧಿಯ ಜೊತೆಗೆ ತಾವು ಉದ್ಯಮಿಗಳಾಗಿ ಇನ್ನಿತರರಿಗೂ ನೌಕರಿಯನ್ನು ಕೊಡುವಂತಾಗಬೇಕು.

      ಈ ಕಾರಣಕ್ಕಾಗಿಯೇ ನಾವು ಪ್ರತಿವರ್ಷ ಕಾಲೇಜಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ ಅದರಲ್ಲಿ ಈ ಮಾರಾಟಮೇಳವು ಒಂದು ಎಂದರು.ಕಾರ್ಯಕ್ರಮಕ್ಕೆ ಕಪ್ಪು ಚುಕ್ಕೆಯಾದ ಪ್ಲಾಸ್ಟಿಕ್ ಬಳಕೆ : ಪರಿಸರವನ್ನು ಕಾಪಾಡಬೇಕಾದ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದಲೇ ನಿಷೇದಿತ, ಮತ್ತು ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್‍ಲೋಟ, ಪ್ಲಾಸ್ಟಿಕ್ ಸ್ಪೂನ್, ಬ್ಯಾನರ್‍ಬಳಸಿರುವುದು ಎಷ್ಟು ಸರಿ, ರಾಷ್ಟ್ರೀಯ ಸೇವಾಯೋಜನೆ, ಎನ್.ಸಿ.ಸಿ, ರೆಡ್‍ಕ್ರಾಸ್, ಇಕೋಕ್ಲಬ್, ಸ್ಕೌಟ್ಸ್ & ಗೈಡ್ಸ್, ಮುಂತಾದ ಹಲವಾರು ಶಾಖೆಗಳನ್ನು ಹೊಂದಿರುವ ಕಾಲೇಜು ಅವುಗಳನ್ನು ಕೇವಲ ಪ್ರಚಾರಕ್ಕೆ ಬಳಸಿಕೊಂಡು ಪ್ಲಾಸ್ಟಿಕ್ ನಿಷೇದದ ಬಗ್ಗೆ ಜಾಗೃತಿ ಮೂಡಿಸುತ್ತಿವೆ ಆದರೆ ಇಲ್ಲಿಮಾತ್ರ ಪ್ಲಾಸ್ಟಿಕ್ ಬಳಸುತ್ತಿರುವುದು ಎಷ್ಟು ಸರಿ.

ಆಕರ್ಷಕ ತಿಂಡಿ ತಿನಿಸುಗಳು :

        ಕಾಲೇಜು ವಿದ್ಯಾರ್ಥಿಗಳು ತಾಮುಂದು, ತಾಮುಂದು ಎನ್ನುವಂತೆ ಚುರುಮುರಿ, ವಿವಿಧ ರೀತಿಯ ಪಾನಕಗಳು, ಮಜ್ಜಿಗೆ, ಪಾನಿಪುರಿ, ಕಲ್ಲಂಗಡಿ, ಮುಂತಾದವುಗಳನ್ನು ಮಾರಾಟಮಾಡುತ್ತಿದ್ದು ವಿಶೇಷವಾಗಿ ಕಾಣುತ್ತಿತ್ತು.

      ಕಾರ್ಯಕ್ರಮದಲ್ಲಿ ತುಮಕೂರು ಸಿದ್ದಾರ್ಥ ಕಾಲೇಜಿನ ಸಹ ಪ್ರಾಧ್ಯಾಪಕ ರಾಮಲಿಂಗಂ, ಐ.ಕ್ಯೂ.ಎ.ಸಿ ಸಂಚಾಲಕ ಪ್ರೊ. ಎಸ್.ಆರ್.ನಾಗಭೂಷಣ್, ಪ್ರೊ. ಯಶೋಧ, ಡಾ. ಜ್ಯೋತಿಕಿರಣ್, ಪ್ರೊ. ಮಮತಾ, ಪ್ರೊ. ಸುಭದ್ರಮ್ಮ, ಪ್ರೊ..ಅನುಪ್ರಸಾದ್, ಪ್ರೊ. ನರಸಿಂಹರಾಜು, ಪ್ರೊ. ಹೆಚ್.ಬಿ.ಕುಮಾರಸ್ವಾಮಿ ಮತ್ತಿರರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap