ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಕ್ರಿಡೆ , ಸಾಹಿತ್ಯ ಕ್ಕೆ ಒತ್ತು ನೀಡಬೇಕು-ಪಿಎಸ್‍ಐ ಇಮ್ರಾನ್ ಬೇಗ್

ಜಗಳೂರು:

         ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಕ್ರಿಡೆ , ಸಾಹಿತ್ಯ ಕ್ಕೆ ಒತ್ತು ನೀಡಬೇಕು ಎಂದು ಜಗಳೂರು ಠಾಣೆಯ ಪಿಎಸ್‍ಐ ಇಮ್ರಾನ್ ಬೇಗ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು

          ಪಟ್ಟಣದ ಇಮಾಂ ಸ್ಮಾರಕ ಶಾಲೆಯ ಆವರಣದಲ್ಲಿ ಶನಿವಾರ ಇಮಾಂ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹದಿನೆಂಟನೇ ವರ್ಷದ ಮಕ್ಕಳ ಹಬ್ಬ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

         ಮಕ್ಕಳನ್ನು ಅಂಕ ಗಳಿಸುವ ಯಂತ್ರಗಳನ್ನಾಗಿ ಮಾಡದೇ ಅವರಲ್ಲಿ ಮಾನವಿಯ ಮೌಲ್ಯವನ್ನು ಬೆಳೆಸುವುದರ ಜೊತೆಗೆ ಅವರಿಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಬೆಳೆಯಲು ಅವಕಾಶ ನೀಡಬೇಕು. ತಾಲೂಕು ಬರದ ನಾಡಗಿದ್ದರು ಸಹ ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದುತ್ತಿದೆ ಇಂತ ಪ್ರದೇಶದಲ್ಲಿ ಆಂಗ್ಲ ಮಾದ್ಯಮ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸುವುದು ಅಷ್ಟು ಸುಲಭವಲ್ಲ. ಆದರು ಇಮಾಂ ಸಾಹೆಬರ ಹೆಸರಿನಲ್ಲಿ ಸಂಸ್ಥೆ ನಿರ್ಮಿಸಿ ತಾಲೂಕಿನ ಪ್ರತಿಯೊಬ್ಬರಿಗೆ ಗುಣ ಮಟ್ಟದ ಶಿಕ್ಷಣವನ್ನು ನೀಡುವಂತ ಕೆಲಸ ಮಾಡುತ್ತಿರುವುದು ಶ್ಲಾಘನಿಯವಾಗಿದೆ ಎಂದರು

          ಈ ಸಂಧರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಜಯಗಳಿಸಿದ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು ಈ ಸಂಧರ್ಭದಲ್ಲಿ ಇಮಾಂ ಟ್ರಸ್ಟ್ ನ ಅಧ್ಯಕ್ಷ ಹುಸೇನ್ ಮಿಯ್ಯಾ, ಸದಸ್ಯ ಮಸ್ತಾನ್, ಖಾಸಿಂ ಖಾನ್, ನೂರ್ ಪಾತಿಮಾ, ಮುನ್ನಾ , ದೈಹಿಕ ಪರಿವಿಕ್ಷಕರಾದ ವೆಂಕಟೇಶ್, ಶಾಲೆಯ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ, ಶಿಕ್ಷಕಿಯರಾದ ಶಿಲ್ಪ, ಸುಜಾತ, ಸೇರಿದಂತೆ ಇತರರು ಸಮಾರಂಭದಲ್ಲಿ ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap