ಸುಭಾಷ್ ರಾಥೋಡ್ ನೀತಿಗೆಟ್ಟವರು : ಉಮೇಶ್ ಜಾಧವ್

ಚಿಂಚೋಳಿ

   ಕಾಂಗ್ರೆಸ್ ನಾಯಕರ ಆರೋಪಗಳಿಗೆ ತಿರುಗೇಟು ನೀಡುವುದನ್ನು ಮುಂದುವರೆಸಿರುವ ಮಾಜಿ ಶಾಸಕ ಹಾಗೂ ಕಲಬುರ್ಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಇಂದು ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಥೋಡ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

     ಚುನಾವಣಾ ಪ್ರಚಾರವನ್ನು ಪ್ರಾರಂಭಿಸುವುದಕ್ಕೂ ಮುನ್ನ ಇಂದು ತಮ್ಮ ಚಿಂಚೋಳಿ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾಲ್ಕಾರು ಪಕ್ಷಗಳನ್ನು ತಿರುಗಿ ಬಂದ ಸುಭಾಷ್ ರಾಥೋಡ್ ನೀತಿಗೆಟ್ಟವನು. ನನ್ನ ಬಗ್ಗೆ ಹಾಗೂ ನನ್ನ ಮಗನ ಬಗ್ಗೆ ಮಾತನಾಡಲು ಅವನಿಗೆ ಅಧಿಕಾರವಿಲ್ಲ. ಖರ್ಗೆ ವಿರುದ್ದ ತನ್ನ ಜೀವನ ಪೂರ್ತಿ ಹೋರಾಟವನ್ನು ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಥೋಡ್ ನಡೆಸಿಕೊಂಡು ಬಂದಿದ್ದಾನೆ. ಈಗ ಟಿಕೆಟ್ ಗೋಸ್ಕರ ಅವರ ಕಾಲಿಗೆ ಬಿದ್ದ ತನ್ನ ತನವನ್ನು ತೋರಿಸಿಕೊಟ್ಟಿದ್ದಾನೆ. ನಾನು ಸ್ವಾಭಿಮಾನಕ್ಕೆ ಧಕ್ಕೆ ಆಗಿದ್ದರಿಂದ ಪಕ್ಷವನ್ನು ತೊರದಿದ್ದೇನೆ ಎಂದರು.

     ನನ್ನ ತಂದೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡವರು. ಅವರು ನನಗೆ ಊಟ ಮಾಡಿದ ತಟ್ಟೆಯನ್ನು ಕಾಲಿನಿಂದ ತಳ್ಳುವುದನ್ನು ಹೇಳಿ ಕೊಟ್ಟಿಲ್ಲ. ಸುಭಾಷ್ ರಾಥೋಡ್ ಈಗಾಗಲೇ ನಾಲ್ಕು ಪಕ್ಷಗಳ ತಟ್ಟೆಯನ್ನು ಕಾಲಿನಿಂದ ತಳ್ಳಿದ್ದಾನೆ. ಕ್ಷೇತ್ರದ ಹೊರಗಿನವನಾದ ರಾಥೋಡ್ ನ್ನು ಚಿಂಚೋಳಿ ಕ್ಷೇತ್ರದ ಮತದಾರರು ತಿರಸ್ಕರಿಸಲಿದ್ದಾರೆ. ಈ ಬಾರಿ ಉಪಚುಣಾವಣೆಯಲ್ಲಿ ಸೋತ ನಂತರ ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಥೋಡ್ ಮತ್ತೊಮ್ಮೆ ಪಕ್ಷವನ್ನು ಬದಲಾಯಿಸಲಿದ್ದಾರೆ ಎಂದು ಹೇಳಿದರು.

      ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿಂಚೋಳಿ ಕ್ಷೇತ್ರದಲ್ಲಿ ಪ್ರಚಾರ ನಡೆಸುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರ ಕೆಲಸ ಅವರು ಮಾಡುತ್ತಾರೆ, ನನ್ನ ಕೆಲಸ ನಾನು ಮಾಡಲಿದ್ದೇನೆ. ಅವರ ಮಾತುಗಳಿಗೆ ಪ್ರತಿಕ್ರಿಯೆ ನೀಡಲಿದ್ದೇನೆಯೇ ಹೊರತು ಯಾವುದೇ ಆರೋಪ ಮಾಡುವುದಿಲ್ಲ ಎಂದರು ಹೇಳಿದರು.

      ಉಮೇಶ್ ಜಾಧವ್ ಅವರು ಇಂದು ಟೆಂಗಳಿ, ಅರಜಂಬಗಾ, ಡೋಣ್ಣೂರು, ಸಾಲಹಳ್ಳಿ, ಕೊಡದೂರು, ಮಂಗಲಗಿ, ಮಳಗಿ, ರಾಜಾಪೂರ ಸೇರಿದಂತೆ ಹಲವು ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap