ತುಮಕೂರು:
ಪ್ರತಿಯೊಬ್ಬ ವಿದ್ಯಾರ್ಥಿಯೂ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿದರೆ ಯಶಸ್ಸು ಖಂಡಿತ ಹಾಗೂ ಜೀವನದಲ್ಲಿ ಪಾಠ ಕಲಿಯಬೇಕಾದರೆ ಧ್ಯೇಯ, ಬಡತನ, ಸೋಲು, ಅವಮಾನ, ನಿರುದ್ಯೋಗ ಅತ್ಯವಶ್ಯಕವಾಗಿದೆ ಎಂದು ಕನ್ನಡದ ಪೂಜಾರಿ ಖ್ಯಾತ ವಾಗ್ಮಿಗಳಾದ ಶ್ರೀಹಿರೇಮಗಳೂರು ಕಣ್ಣನ್‍ರವರು ಅನ್‍ಲೈನ್‍ನಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ತಿಳಿಸಿದರು.ನಗರದ ಅನನ್ಯ ಇನ್ಸ್‍ಸ್ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್‍ಮೆಂಟ್‍ನ ವತಿಯಿಂದ ಇತ್ತೀಚಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವಿಶೇಷ ಅನ್‍ಲೈನ್ ಕಾರ್ಯಕ್ರಮದಲ್ಲಿ ಶ್ರೀ ಹಿರೇಮಗಳೂರು ಕಣ್ಣನ್ ರವರು ಮಾತನಾಡುತ್ತಾ ಕನ್ನಡದ ಮಾತುಗಳನ್ನು ಸ್ವಚ್ಛವಾಗಿ ಉಚ್ಚರಿಸಬೇಕು, ಕನ್ನಡ ಭಾಷೆಯ ಸೌಂದರ್ಯವನ್ನು ಬೆಳೆಸಿಕೊಳ್ಳಬೇಕು, ಸ್ವಾಮಿ ವಿವೇಕಾನಂದರ ಮಾತುಗಳನ್ನಾಡುತ್ತಾ ವಿದ್ಯಾರ್ಥಿಗಳು ಜೀವನದಲ್ಲಿ ಗುರಿಯಟ್ಟುಕೊಳ್ಳಬೇಕು, ವಿದ್ಯಾರ್ಥಿಗಳು ಮೂರು ಗುಣಗಳು ಅತಿಮುಖ್ಯವಾಗಿದೆ. ವಿಜ್ಞಾರ್ಜನೆ ವೃದ್ಧಿ, ತತ್ವಜ್ಞಾನಿಗಳ ಮನಸ್ಸು, ಅಭಿವೃದ್ಧಿ ಅತ್ಯಂತ ಅವಶ್ಯಕವಾಗಿದೆ. ಉದಾಹರಣೆಗೆ ಮೈಕಾನಿಕಲ್ ಇಂಜಿನಿಯರಿಂಗ್ ಹುದ್ದೆಯಲ್ಲಿರುವವರು ತನ್ನೂಲಕ 10 ಜನರಿಗೆ ಉದ್ಯೋಗ ಒದಗಿಸುವುದು ಉತ್ತಮವಾಗಿದೆ ಎಂದು ಅರ್ಥಪೂರ್ಣವಾಗಿ ವಿವರಿಸಿದರು.
ಅನ್‍ಲೈನ್ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಅನನ್ಯ ಸಂಸ್ಥೆಯ ಟ್ರಸ್ಟಿಯಾದ ಹೆಚ್.ಹರೀಶ್, ಪ್ರಾಂಶುಪಾಲರಾದ ವಿಶ್ವಾಸ್ ಎಂ ಮತ್ತು ಅನನ್ಯ ಸಂಸ್ಥೆಯಲ್ಲಿ ವಿದ್ಯಾರ್ಥಿಗಳು ಅನ್‍ಲೈನ್‍ನಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
