ಮಧುಗಿರಿ:
ಅಪ್ರಾಪ್ತ ಪ್ರೇಮಿಗಳಿಬ್ಬರು ಮರದ ರೆಂಬೆಗೆ ದುಪ್ಪಟದಿಂದ ಇಬ್ಬರು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ಸಂಜೆ ಗಡಿಭಾಗದ ಗ್ರಾಮದಲ್ಲಿ ಘಟನೆ ನಡೆದಿದೆ.
ತಾಲ್ಲೂಕಿನ ಕೋಡಿಗೇನಹಳ್ಳಿಯ ಸುದ್ದೇಕುಂಟೆ ಗ್ರಾಮದ ಒಂದೇ ಸಮುದಾಯದ ಮೀನಾ (17) ಹಾಗೂ ಸಂದೇಶ್ (17) ಆತ್ಮ ಹತ್ಯೆ ಮಾಡಿಕೊಂಡ ಮೃತ ದುರ್ದೈವಿಗಳು ಮೀನಾ ಹಾಗೂ ಸಂದೇಶ್ ಇಬ್ಬರು ಒಂದೆ ಸಮುದಾಯದವರಾಗಿದ್ದು ಪರಸ್ಪರ ಸುಮಾರು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಾಲಾಗಿದೆ.
ಇಬ್ಬರ ಪ್ರೀತಿಯ ವಿಷಯ ತಮ್ಮ ಮನೆಯಲ್ಲಿ ಪ್ರಸ್ತಾಪಿಸಿದಾಗ ಅಪ್ರಾಪ್ತರಾಗಿರುವುದರಿಂದ ಪೋಷಕರು ಮದುವೆಯನ್ನು ವಯಸ್ಸಾಗಿಲ್ಲವೆಂದು ಎಂದು ಒಪ್ಪಿಗೆ ನೀಡಿಲ್ಲವೆಂದು ಜತೆಯಲ್ಲಿ ಬಾಲಕಿಯ ತಾಯಿಯ ಸಂಭಂಧಿಕರಿಗೆ ಇನ್ನೂ ಕೆಲ ದಿನಗಳು ಕಳೆದ ನಂತರ ಬಾಲಕಿಗೆ ವಿವಾಹ ನಿಶ್ಚಯಿಸಲಾಗಿತ್ತೆಂದು ಹೇಳಲಾಗುತ್ತಿದೆ ವಿಚಾರ ತಿಳಿದ ಯುವ ಪ್ರೇಮಿಗಳಿಬ್ಬರು ಹೆದರಿ ಮನನೊಂದು ಗ್ರಾಮದ ಹೊರವಲಯದ ತೋಟದಲ್ಲಿ ಗುರುವಾರ ಸಂಜೆ ಹುಣಸೆ ಮರದ ರೆಂಬೆಗೆ ನೇಣಿಗೆ ಶರಣಾಗಿದ್ದಾರೆ. ಇದನ್ನು ಕಂಡು ಸ್ಥಳಿಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಪಿಎಸೈ ಮೊಹನ್ ಕುಮಾರ್ ತಂಡ ಭೇಟಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ