`ಅಮೃತ್’ ಯೋಜನೆ ಕಾಮಗಾರಿಗಳಲ್ಲಿ ಬದಲು

ತುಮಕೂರು

     ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ `ಅಮೃತ್’ ಯೋಜನೆಯಡಿ ಒಟ್ಟು 752.59 ಲಕ್ಷ ರೂ.ಮೊತ್ತದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಕೆಲವು ಕಾಮಗಾರಿಗಳಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದೆ. ಕೆಲವೊಂದು ಕಾಮಗಾರಿಗಳ ಬದಲಿಗೆ ಅದೇ ಮೊತ್ತವನ್ನು ಬಳಸಿಕೊಂಡು ಮತ್ತೊಂದು ಕಾಮಗಾರಿ ಕೈಗೊಳ್ಳಲು ತೀರ್ಮಾನಿಸಲಾಗಿದೆ.

ಬದಲಾದ ಕಾಮಗಾರಿಗಳು

  1. ನಗರದ ಕೋಡಿ ಬಸವೇಶ್ವರ ದೇವಾಲಯ ವೃತ್ತದಿಂದ ಹಿಡಿದು ಸ್ವಾತಂತ್ರೃ ಚೌಕ (ಚರ್ಚ್ ವೃತ್ತ)ದವರೆಗೆ 40 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಫುಟ್‍ಪಾತ್ ನಿರ್ಮಾಣ ಮತ್ತು ಎರಡೂ ಬದಿ ರೈಲಿಂಗ್ ಅಳವಡಿಕೆ ಕಾಮಗಾರಿ;
  2. ಗುಬ್ಬಿ ಗೇಟ್‍ನಲ್ಲಿ 80 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಜಂಕ್ಷನ್ ಅಭಿವೃದ್ಧಿ ಕಾಮಗಾರಿ;
  3. ಬಟವಾಡಿ ವೃತ್ತದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಜಂಕ್ಷನ್ ಅಭಿವೃದ್ಧಿ ಕಾಮಗಾರಿ;
  4. ಭದ್ರಮ್ಮ ಛತ್ರದ ವೃತ್ತದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಜಂಕ್ಷನ್ ಅಭಿವೃದ್ಧಿ ಕಾಮಗಾರಿ;
  5. ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ 75 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಜಂಕ್ಷನ್ ಅಭಿವೃದ್ಧಿ ಕಾಮಗಾರಿ- ಹೀಗೆ ಒಟ್ಟು 295 ಲಕ್ಷ ರೂ. ಮೊತ್ತದ ಒಟ್ಟು ಐದು ಕಾಮಗಾರಿಗಳನ್ನು ಕೈಗೊಳ್ಳಲು ಈ ಮೊದಲು ಉದ್ದೇಶಿಸಿದ್ದು, ಅವುಗಳನ್ನು ಈಗ ಕೈಬಿಡಲಾಗಿದೆ. 

ಇದರ ಬದಲಿಗೆ

  1. ನಗರದ ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿ ಮಾರುತಿ ನಗರದಿಂದ ಹಿಡಿದು ರಿಂಗ್ ರಸ್ತೆಯವರೆಗೂ 77.36 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಫುಟ್‍ಪಾತ್ ಅಭಿವೃದ್ಧಿ ಕಾಮಗಾರಿ;
  2. ಸರಸ್ವತಿಪುರಂ ಬಡಾವಣೆಯಲ್ಲಿ ದೇವರಾಜ ಅರಸ್ ರಸ್ತೆಯಲ್ಲಿ ವಿದ್ಯಾನಿಕೇತನ ಶಾಲೆಯವರೆಗೆ 90.43 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಫುಟ್‍ಪಾತ್ ಅಭಿವೃದ್ಧಿ ಕಾಮಗಾರಿ;
  3. ರಾಷ್ಟ್ರೀಯ ಹೆದ್ದಾರಿಯಿಂದ ಸಿದ್ಧಗಂಗಾ ಮಠದ ರಸ್ತೆಯಲ್ಲಿ ರೈಲ್ವೆ ಗೇಟ್‍ವರೆಗೆ 16.36 ಲಕ್ಷ ರೂ. ವೆಚ್ಚದಲ್ಲಿ ಫುಟ್‍ಪಾತ್ ಅಭಿವೃದ್ಧಿ ಕಾಮಗಾರಿ – ಈ ರೀತಿ ಒಟ್ಟು ಮೂರು ಕಾಮಗಾರಿಗಳನ್ನು ಒಟ್ಟು 184.15 ಲಕ್ಷ ರೂ. ಅಂದಾಜುವೆಚ್ಚದಲ್ಲಿ ಕೈಗೊಳ್ಳಲು ನಿರ್ಧರಿಸಲಾಗಿದೆ.

ಉಳಿತಾಯ ಮೊತ್ತದ ಕಾಮಗಾರಿ

     `ಅಮೃತ್’ ಯೋಜನೆಯ ಅನುದಾನದಲ್ಲಿ ಮಂಜೂರಾದ ಕಾಮಗಾರಿಗಳಲ್ಲಿ ಉಳಿತಾಯವಾದ ಮೊತ್ತದಲ್ಲಿ 440.54 ಲಕ್ಷ ರೂ. ಮೊತ್ತದಲ್ಲಿ ಮಳೆ ನೀರಿನ ಚರಂಡಿ ಕಾಮಗಾರಿಗಳನ್ನು ಕೈಗೊಳ್ಳಲು ಹಾಗೂ 127.91 ಲಕ್ಷ ರೂ. ಮೊತ್ತದಲ್ಲಿ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲು ನಿರ್ಣಯಿಸಲಾಗಿದೆ.

  1.  ನಗರದ ರಿಂಗ್ ರಸ್ತೆಯಲ್ಲಿರುವ ಎಸ್.ಟಿ.ಪಿ. (ಸಿವರೇಜ್ ಟ್ರೀಟ್‍ಮೆಂಟ್ ಪ್ಲಾಂಟ್)ನಿಂದ ಭೀಮಸಂದ್ರ ಕೆರೆಯವರೆಗೆ 152 ಲಕ್ಷ ರೂ. ವೆಚ್ಚದಲ್ಲಿ ಮಳೆನೀರಿನ ಚರಂಡಿ ನಿರ್ಮಾಣ;
  2. ಸೋಮೇಶ್ವರ ಪುರಂನಿಂದ ಎನ್.ಇ.ಪಿ.ಎಸ್.ವರೆಗೆ 257 ಲಕ್ಷ ರೂ. ವೆಚ್ಚದಲ್ಲಿ ಮಳೆನೀರಿನ ಚರಂಡಿ ಅಭಿವೃದ್ಧಿ;
  3. ಶಿವಕುಮಾರ ಸ್ವಾಮೀಜಿ ವೃತ್ತದಿಂದ ಕೋತಿತೋಪು ವೃತ್ತದವರೆಗೆ ಇರುವ ಮಳೆನೀರಿನ ಚರಂಡಿಗೆ 31.54 ಲಕ್ಷ ರೂ. ವೆಚ್ಚದಲ್ಲಿ ಕವರಿಂಗ್ ಸ್ಲಾಬ್ ಅಳವಡಿಸುವುದು – ಹೀಗೆ ಒಟ್ಟು 440.54 ಲಕ್ಷ ರೂ. ಅಂದಾಜು ವೆಚ್ಚದ ಕಾಮಗಾರಿಯನ್ನು ಕೈಗೊಳ್ಳಲುದ್ದೇಶಿಸಲಾಗಿದೆ.
  4.  ಮಾರುತಿನಗರದ ದಾಸಪ್ಪ ಗಾರ್ಡನ್ ಉದ್ಯಾನವನವನ್ನು 37.81 ಲಕ್ಷ ರೂ. ಅಂದಾಜಿನಲ್ಲಿ ಅಭಿವೃದ್ಧಿಪಡಿಸುವುದು;
  5. ಕುವೆಂಪುನಗರದಲ್ಲಿರುವ ಉದ್ಯಾನವನ್ನು 42.10 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವುದು;
  6. ಸಿದ್ಧರಾಮೇಶ್ವರ ಬಡಾವಣೆಯಲ್ಲಿರುವ ಉದ್ಯಾನವನ್ನು 48 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಪಡಿಸುವುದು- ಈ ರೀತಿ 127.91 ಲಕ್ಷ ರೂ. ವೆಚ್ಚದಲ್ಲಿ ಉದ್ಯಾನಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap