ವಿದ್ಯಾರ್ಥಿ ನಿಲಯಗಳಿಗೆ ಶಾಸಕರ ದಿಢೀರ್ ಭೇಟಿ

ಚಿಕ್ಕನಾಯಕನಹಳ್ಳಿ

            ಸ್ವಚ್ಛತೆ, ಆಹಾರ ಮತ್ತು ವಿದ್ಯಾಭ್ಯಾಸದ ಬಗ್ಗೆ ಪರಿಶೀಲಿಸಲು ಪಟ್ಟಣದ ಹಾಸ್ಟೆಲ್‍ಗಳಿಗೆ ಶಾಸಕ ಜೆ.ಸಿ.ಮಾಧುಸ್ವಾಮಿ ದಿಢೀರ್ ಭೇಟಿ ನೀಡಿದರು.

          ಪಟ್ಟಣದ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯ, ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಗಳಿಗೆ ಮಂಗಳವಾರ ದಿಢೀರ್ ಭೇಟಿ ನೀಡಿದ ಶಾಸಕರು, ಅಲ್ಲಿನ ಸಮಸ್ಯೆಗಳ ಬಗ್ಗೆ ಹಾಗೂ ಅವಶ್ಯಕತೆಗಳ ಬಗ್ಗೆ ಮಾಹಿತಿ ಪಡೆದರು.

       ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಸರ್ಕಾರ ವಿದ್ಯಾರ್ಥಿಗಳಿಗಾಗಿ ಉಚಿತವಾಗಿ ವಸತಿಯೊಂದಿಗೆ ಊಟವನ್ನು ನೀಡಿ ಶಿಕ್ಷಣ ಅಭಿವೃದ್ಧಿಗೆ ಒತ್ತನ್ನು ನೀಡುತ್ತಿದೆ. ಇದನ್ನು ಸದ್ಬಳಕೆ ಮಾಡಿ ವಿದ್ಯಾರ್ಥಿಗಳನ್ನು ಉತ್ತಮ ವಿದ್ಯಾರ್ಥಿಗಳನ್ನಾಗಿಸಿ ಎಂದ ಅವರು, ವಸತಿ ನಿಲಯಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ, ಗುಣಮಟ್ಟದ ಆಹಾರವನ್ನು ವಿತರಿಸಿ, ವಿದ್ಯಾರ್ಥಿಗಳ ಕೊಠಡಿ, ಅಡುಗೆ ಮನೆ, ಊಟದ ಮನೆ, ಶೌಚಾಲಯಗಳ ಸ್ವಚ್ಛತೆಯನ್ನು ವೀಕ್ಷಿಸಿದರು.

      ಈ ಸಂದರ್ಭದಲ್ಲಿ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಕೊಠಡಿಗಳ ಅವಶ್ಯಕತೆ ಇದ್ದು, ಇದಕ್ಕೆ ಸಚಿವರಿಂದ ಹೆಚ್ಚುವರಿ ಅನುದಾನದಡಿ ಕೊಠಡಿಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

      ವಾರ್ಡನ್ ವೆಂಕಟೇಶ್‍ಶೆಟ್ಟಿ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಶಾಸಕರಲ್ಲಿ ತಿಳಿಸಿದ ಅವರು, ಈಗಾಗಲೇ ಒಂದು ಬೋರ್‍ವೆಲ್ ಇದ್ದು, ಇದರಲ್ಲಿ ಒಂದೂವರೆ ಇಂಚು ನೀರು ಸರಬರಾಜು ಆಗುತ್ತಿತ್ತು. ಇತ್ತೀಚೆಗೆ ಅದು ನಿಂತು, ವಸತಿ ನಿಲಯಕ್ಕೆ ನೀರಿನ ಅಭಾವ ಉಂಟಾಗಿದೆ ಎಂದು ತಿಳಿಸಿದ ಹಿನ್ನೆಲೆಯಲ್ಲಿ ಶಾಸಕರು ಪುರಸಭೆಯ ವತಿಯಿಂದ ಅಥವಾ ಪ್ರವಾಸಿ ಮಂದಿರದ ಹಿಂಬದಿಯ ಬೋರ್‍ವೆಲ್‍ನಿಂದ ನೀರು ಸರಬರಾಜು ಮಾಡಲು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ ಅವರು, ವಿದ್ಯಾರ್ಥಿ ನಿಲಯದ ಮಕ್ಕಳಿಗೆ ಕಂಪ್ಯೂಟರ್ ಜ್ಞಾನ ತಿಳಿಸುವಂತೆ ವಾರ್ಡ್‍ನ್‍ಗೆ ಸೂಚಿಸಿದರು.

     ಈ ಸಂದರ್ಭದಲ್ಲಿ ತಾ.ಪಂ ಸದಸ್ಯ ಕೇಶವಮೂರ್ತಿ, ಮಾಜಿ ತಾ.ಪಂ.ಅಧ್ಯಕ್ಷ ಹೆಚ್.ಆರ್ ಶಶಿಧರ್, ಮಾಜಿ ಸದಸ್ಯ ನಿರಂಜನ್‍ಮೂರ್ತಿ, ಎ.ಪಿ.ಎಮ್.ಸಿಯ ಶಿವರಾಜು, ಪುರಸಭಾ ಮಾಜಿ ಸದಸ್ಯ ರೇಣುಕಮೂರ್ತಿ, ಸಮಾಜ ಕಲ್ಯಾಣ ಅಧಿಕಾರಿ ರೇಣುಕಾದೇವಿ, ಹಿಂದುಳಿದ ವರ್ಗಗಳ ಇಲಾಖೆಯ ವಿಸ್ತರಣಾಧಿಕಾರಿ ಶಿವರಾಜ್, ವಾರ್ಡನ್ ಜ್ಯೋತಿ, ಮತ್ತಿತರರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap