ದೇವರಾಯಪಟ್ಟಣ ಕೆರೆಗೆ ಅಧಿಕಾರಿಗಳೊಂದಿಗೆ ಶಾಸಕರ ದಿಢೀರ್ ಭೇಟಿ

ತುಮಕೂರು-

        ಸಿದ್ದಗಂಗಾ ಮಠ ನಾಡಿನ ಪಾಲಿಗೆ ದೇವಾಲಯವಿದ್ದಂತೆ, ಈ ಸನ್ನಿದಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಬವಿಸಲು ಬಿಡುವುದಿಲ್ಲ ಈಗಾಗಲೇ ಎರಡು ಬೋರ್ವೆಲ್ಗಳನ್ನು ತೋಡಿಸಲಾಗಿದೆ , ಅವಶ್ಯಕತೆ ಬಿದ್ದರೆ ಇನ್ನೆರಡು ಹೊಸಬೋರ್‍ವೆಲ್ಗಳನ್ನು ತೋಡಿಸಲಾಗುವುದು .ಟ್ಯಾಂಕರ್ ಮೂಲಕವಾದರೂ ನೀರು ಪೂರೈಸಿ ಶ್ರೀಮಠದಲ್ಲಿ ನೀರಿನ ಭವಣೆ ತಲೆದೋರದಂತೆ ಎಚ್ಚರವಹಿಸುವುದಾಗಿ ಶಾಸಕ ಡಿ ಸಿ ಗೌರೀಶಂಕರ್ ಭರವಸೆ ನೀಡಿದರು

       ಸಿದ್ದಗಂಗಾ ಮಠದಲ್ಲಿ ಕುಡಿಯುವ ನೀರಿನ ಭವಣೆ ಎದುರಾಗಿದೆ ಎಂದು ಸೋಮವಾರ ಕೆಲ ಮಾಧ್ಯಮಗಳಲ್ಲಿ ವರದಿ ಭಿತ್ತರವಾದ ತಕ್ಷಣ ಶಾಸಕರು ದೇವರಾಯಪಟ್ಟಣ ಕೆರೆಗೆ ಅಧಿಕಾರಿಗಳೊಂದಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು, ಶ್ರೀ ಮಠಕ್ಕೆ ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ಲೋಪವಾಗಬಾರದು, ಏನೇ ಸಮಸ್ಯೆ ಎದುರಾಗಿದ್ದರೂ ತುರ್ತಾಗಿ ಬಗೆಹರಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು,

        ಬೆಳಗುಂಭ ಗ್ರಾಮಕ್ಕೆ ಅಧಿಕಾರಿಗಳ ಸಮೇತ ಭೇಟಿ ನೀಡಿದ ಶಾಸಕರು ಸ್ಮಶಾನದ ಸಮಸ್ಯೆ ಅವಲೋಕಿಸಿದರು,ಬೆಳಗುಂಭ
ಗ್ರಾಮದಲ್ಲಿ ಮಂಜೂರಾಗಿರುವ ಸ್ಮಶಾನದ ಜಾಗವನ್ನು ಸಾರ್ವಜನಿಕರ ಉಪಯೋಗಕ್ಕೆ ಅನುಕೂಲವಾಗುವಂತೆ ವ್ಯವಸ್ತೆ ಕಲ್ಪಿಸಬೇಕು, ಸ್ಮಶಾನ ಭೂಮಿಗೆ ಮಂಜೂರಾಗಿರುವ ಭೂಮಿಯನ್ನು ಸಮತಟ್ಟು ಮಾಡಿ.ತಂತಿ ಬೇಲಿ ಅಳವಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಿದರು.

        ಬಳಿಕ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡ ಶಾಸಕರು ಅರಿಯೂರು,ದೊಮ್ಮನಕುಪ್ಪೆ,ಹರಳೂರು,ದೊಡ್ಡೇಗೌಡನಪಾಳ್ಯ,ಬೆಳಗುಂಬ ಗ್ರಾಮಗಳಲ್ಲಿ ಸರ್ಕಾರ ಶಾಲಾ ಮಕ್ಕಳಿಗೆ ಸೈಕಲ್ ವಿತರಿಸಿದರು,

        ಹರಳೂರು ಗ್ರಾಮದಲ್ಲಿ ಮಕ್ಕಳಿಗೆ ಸೈಕಲ್ ವಿತರಿಸಿ ಶಾಸಕ ಡಿ ಸಿ ಗೌರೀಶಂಕರ್ ಮಾತನಾಡಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜಾರಿಗೆ ತಂದ ಸೈಕಲ್ ವಿತರಿಸುವ ಯೋಜನೆ ಶಾಲೆಯಿಂದ ದೂರವಾಗಿ ಶಿಕ್ಷಣದಿಂದ ವಂಚಿತವಾಗುತ್ತಿದ್ದ ನಾಡಿನ ಲಕ್ಷಾಂತರ ಮಕ್ಕಳಿಗೆ ಬೆಳಕಾಗಿದೆ ,ಸರ್ಕಾರಿ ಶಾಲೆ ಮಕ್ಕಳ ಉನ್ನತೀಕರಣಕ್ಕೆ ಸರ್ಕಾರ ಹಲವು ಮಹತ್ವದ ಯೋಜನೆ ಅನುಷ್ಟಾನಗೊಳಿಸಿದ್ದು ಮಕ್ಕಳು ಈ ಸೌಲಭ್ಯಗಳ ಸದುಪಯೋಗ ಪಡೆದು ಸುಶಿಕ್ಷಿತರಾಗಿ ಸರ್ಕಾರಿ ಶಾಲೆಗಳಿಗೆ ಕೀರ್ತಿ ತರಬೇಕು ಎಂದು ಕರೆಕೊಟ್ಟರು

        ಗ್ರಾಮಾಂತರ ಕ್ಷೇತ್ರದ ಸರ್ಕಾರಿ ಶಾಲೆಗಳ ಉನ್ನತೀಕರಣ ,ದುರಸ್ತಿ,ಹೊಸಶಾಲೆಗಳ ನಿರ್ಮಾಣಕ್ಕಾಗಿ 115 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರ ಹಾಗು ಶಿಕ್ಷಣ ಮಂತ್ರಿಗಳಿಗೆ ಪ್ರತಸ್ತಾವನೆ ಸಲ್ಲಿಸಿದ್ದೇನೆ ,ಈಗಾಗಲೇ ಮೊದಲ ಭಾಗವಾಗಿ ಸರ್ಕಾರ 4 ಕೋಟಿ ಹಣ ಮಂಜೂರು ಮಾಡಿದೆ ,ಬರುವ ಮಾರ್ಚ ತಿಂಗಳೊಳಗೆ 25 ಕೋಟಿ ಹಣ ಬಿಡುಗಡೆಯಾಗಲಿದ್ದು ಹಂತ ಹಂತವಾಗಿ ಸರ್ಕಾರಿ ಶಾಲೆಗಳ ಅಭಿವೃದ್ದಿ ಮಾಡಲಾಗುವುದು ಎಂದರು.

         ಈ ವೇಳೆ ತಾಲ್ಲೂಕು ಜೆಡಿಎಸ್ ಅಧ್ಯಕ್ಷಹಾಲನೂರು ಅನಂತ್ ,ಗೂಳೂರು ಜೆಡಿಎಸ್ ಅಧ್ಯಕ್ಷ ಪಾಲನೇತ್ರಯ್ಯ, ಯುವ ಘಟಕದ ರಾಜ್ಯ ಉಪಾಧ್ಯಕ್ಷ ಕೆಂಪರಾಜು.ತಾಲ್ಲೂಕು ಯುವ ಘಟಕದ ಅಧ್ಯಕ್ಷ ಸುವರ್ಣಗಿರಿ ಕುಮಾರ್ ,ಹರಳೂರು ರುದ್ರೇಶ್, ಜೆಡಿಎಸ್ ಮುಖಂಡರಾದ ನರುಗನಹಳ್ಳಿ ಮಂಜುನಾಥ್,ವಿಜಯ್ ಕುಮಾರ್,ಗ್ರಾಮ ಪಂಚಾಯ್ತಿ ಸದಸ್ಯರಾದ ಬೆಳಗುಂಬ ವೆಂಕಟೇಶ್,ಶಂಕರ್ ,ಭೈರೇಗೌಡ ಇತರರು ಉಪಸ್ತಿತರಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link