ಕೊರೋನಾ ಸೋಂಕಿನ ಭೀತಿ : 28ಲಕ್ಷ ರೂ ವೈದ್ಯಕೀಯ ಸಲಕರಣೆ ನೀಡಿದ ಸುಧಾ ಮೂರ್ತಿ

ಬೆಂಗಳೂರು
   ರಾಜ್ಯದ ಜನತೆ ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂಬ ಮಾಹಿತಿ ತಿಳಿದ ತಕ್ಷಣ  ಸಹಾಯ ಹಸ್ತ ನೀಡುವಲ್ಲಿ ಇನ್​ಫೋಸಿಸ್​ ಫೌಂಡೇಷನ್​​ ಮುಖ್ಯಸ್ಥೆ ಸುಧಾ ಮೂರ್ತಿ ಮುಂಚೂಣಿಯಲ್ಲಿರುತ್ತಾರೆ.ಈಗ ರಾಜ್ಯವೇ ಕೊರೊನಾ ವೈರಸ್​ ಸೋಂಕು ಹರಡುವ ಭೀತಿ ಎದುರಿಸುತ್ತಿದ್ದು, ಇದನ್ನು ಹೊಡೆದೋಡಿಸಲು ಸುಧಾ ಮೂರ್ತಿ ಕೈಜೋಡಿಸಿದ್ದಾರೆ.
   ದಕ್ಷಿಣ ಕನ್ನಡ ಜಿಲ್ಲಾಡಳಿತದ ಮನವಿ ಮೇರೆಗೆ ಕೊರೊನಾ ಚಿಕಿತ್ಸೆಗಾಗಿ ಸುಧಾ ಮೂರ್ತಿ ಅವರು ಸುಮಾರು 28 ಲಕ್ಷ ರೂಪಾಯಿ ಮೊತ್ತದ ವೈದ್ಯಕೀಯ ಸಲಕರಣೆಗಳನ್ನು ರವಾನಿಸಿದ್ದಾರೆ.ಈ ಕುರಿತು ಟ್ವೀಟ್​ ಮಾಡಿರುವ ಮಂಗಳೂರು ಪೊಲೀಸ್​​ ಕಮಿಷನರ್​ ಹರ್ಷಾ, ಜಿಲ್ಲಾಡಳಿತದ ವತಿಯಿಂದ ಮಂಗಳೂರು ಪೊಲೀಸರು ಮಾಡಿದ ಕರೆಗೆ ಸುಧಾಮೂರ್ತಿಯವರು ಸ್ಪಂದಿಸಿದ್ದು, 36 ಗಂಟೆಯೊಳಗೆ ವೈದ್ಯಕೀಯ ಸಲಕರಣೆಗಳು ಮಂಗಳೂರಿಗೆ ತಲುಪಿವೆ ಎಂದು ತಿಳಿಸಿದ್ದಾರೆ.
   ಸುಧಾಮೂರ್ತಿ ಹಾಗೂ ಇನ್​ಫೋಸಿಸ್​ ಸಂಸ್ಥಾನದ ಶ್ರೀ ರಾಮದಾಸ್​ ಕಾಮತ್​ ಹಾಗೂ ತಂಡಕ್ಕೆ ಹರ್ಷಾ ಅವರು ಧನ್ಯವಾದ ಅರ್ಪಿಸಿದ್ದಾರೆ. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap