ಸುಡುಗಾಡು ಸಿದ್ಧರ ಕಾಲೋನಿಯಲ್ಲಿ ಆರೋಗ್ಯ ತಪಾಸಣೆ ಜನರ ಬಳಿಗೆ ಆರೋಗ್ಯ ಸೇವೆ; ಡಾ.ಕೀರ್ತನಾ

ಚಿತ್ರದುರ್ಗ:

       ಸರ್ಕಾರಆರೋಗ್ಯ ಶಿಬಿರಗಳನ್ನು ಆಯೋಜನೆ ಮಾಡುವ ಮೂಲಕ ಜನರ ಬಳಿಗೆ ಆರೋಗ್ಯ ಸೇವೆಯನ್ನುಕೊಂಡೊಯ್ದಿದ್ದು, ಇದರ ಸದುಪಯೋಗ ಪಡಿಸಿಕೊಂಡಾಗ ಮಾತ್ರ ಸರ್ಕಾರದಯೋಜನೆ ಸಫಲವಾಗಲು ಸಾಧ್ಯವೆಂದು ಚಿಕ್ಕಗೊಂಡನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|| ಕೀರ್ತನಾ ಹೇಳಿದರು.

     ಮೆದೇಹಳ್ಳಿ ಸುಡುಗಾಡು ಸಿದ್ಧರ ಕಾಲೋನಿಯಲ್ಲಿ ವಿಮುಕ್ತಿ ವಿದ್ಯಾಸಂಸ್ಥೆ, ಗ್ರಾಮಪಂಚಾಯಿತಿ ಮೆದೇಹಳ್ಳಿ, ಪ್ರಾಥಮಿಕಆರೋಗ್ಯಕೇಂದ್ರ ಚಿಕ್ಕಗೊಂಡನಹಳ್ಳಿ ಇವರ ವತಿಯಿಂದ ಸುಡುಗಾಡು ಸಿದ್ಧರ ಕಾಲೋನಿಯಲ್ಲಿಏರ್ಪಡಿಸಲಾಗಿದ್ದಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಸರ್ಕಾರಕೋಟ್ಯಾಂತರರೂಪಾಯಿ ವೆಚ್ಚ ಮಾಡಿ, ಔಷಧಿ ಮತ್ತುಚಿಕಿತ್ಸೆಯನ್ನು ಸಾರ್ವಜನಿಕರಿಗೆ ಹಮ್ಮಿಕೊಂಡಿದ್ದು, ವೈದ್ಯಾಧಿಕಾರಿಗಳೇ ಸ್ವತಃತಮ್ಮ ಮನೆ ಬಾಗಿಲಿಗೆ ಬಂದುಚಿಕಿತ್ಸೆ ನೀಡುವುದನ್ನು ಶಿಬಿರಗಳ ಮೂಲಕ ಮಾಡಲಾಗುತ್ತಿದೆ.ಇದರ ಸದುಪಯೋಗ ಪಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಡಾ|| ಕೀರ್ತನ ಹೇಳಿದರು.

     ವಿಮುಕ್ತಿ ವಿದ್ಯಾಸಂಸ್ಥೆಆರ್. ವಿಶ್ವಸಾಗರ್ ಮಾತನಾಡಿ, ಮುಂದಿನ 10 ವರ್ಷದಲ್ಲಿದೇಶದ ಪ್ರತಿಯೊಬ್ಬರು ಮನೆ ನಿರ್ಮಿಸಿಕೊಂಡು ಬದುಕುಕಟ್ಟಿಕೊಳ್ಳುತ್ತಾರೆ.ಆದರೆಆರೋಗ್ಯಕ್ಕಾಗಿ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆಎಂದು ಹೇಳಿದರು.ಆದ್ದರಿಂದ ಪ್ರತಿಯೊಬ್ಬರುಒತ್ತಡಕ್ಕೆ ಒಳಗಾಗದೇ ಶಾಂತಿಯುತವಾದ ಬದುಕು ನಡೆಸಲು ಪ್ರಯತ್ನಪಡಬೇಕುಎಂದು ಹೇಳಿದರು.ವಿಮುಕ್ತಿ ವಿದ್ಯಾಸಂಸ್ಥೆಯಅಧ್ಯಕ್ಷೆ ಶ್ರೀಮತಿ ಅನ್ನಪೂರ್ಣ ವಿಶ್ವಸಾಗರ್ ಮಾತನಾಡಿ, ವಿಮುಕ್ತಿ ವಿದ್ಯಾಸಂಸ್ಥೆಯ ಮೂಲಕ ಸುಡುಗಾಡು ಸಿದ್ಧರು, ಹಂದಿ ಜೋಗಿಗಳು, ಬುಡುಗಜಂಗಮರು, ಸಿಳ್ಳೆಕ್ಯಾತರು ಮುಂತಾದಅಲೆಮಾರಿ, ಅರೆಅಲೆಮಾರಿ ಜನಾಂಗಗಳ ಸರ್ವಾಂಗೀರ್ಣಅಭಿವೃದ್ಧಿಗಾಗಿ ಶ್ರಮಿಸಲಾಗುತ್ತಿದೆ.ಹಾಗೆಯೇಅಲೆಮಾರಿ ಮಕ್ಕಳ ಶಿಕ್ಷಣಕ್ಕಾಗಿ ವಿಶೇಷ ಆಧ್ಯತೆಯನ್ನು ನೀಡಲಾಗುತ್ತದೆಎಂದರು.

    ಅಲೆಮಾರಿಅರೆಅಲೆಮಾರಿ ಬುಡಕಟ್ಟು ಎಸ್‍ಸಿ, ಎಸ್‍ಟಿ ಮಹಾಸಭಾದಜಿಲ್ಲಾಧ್ಯಕ್ಷ ಕೆ.ಎಂ.ನಾಗರಾಜ್ ಮಾತನಾಡಿ, ಅಲೆಮಾರಿ ಜನಾಂಗಗಳು ಆರೋಗ್ಯ ಶಿಕ್ಷಣ ಹಾಗೂ ಬದುಕನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿದಾಗ ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯಎಂದು ಹೇಳಿದರು.ಆರೋಗ್ಯತಪಾಸಣಾ ಶಿಬಿರದಲ್ಲಿ ಕರ್ನಾಟಕ ಶಾಂತಿ ಮತ್ತು ಸೌಹಾರ್ದ ವೇದಿಕೆಯ ನರೇನಹಳ್ಳಿ ಅರುಣ್‍ಕುಮಾರ್, ಚಿಕ್ಕಗೊಂಡನಹಳ್ಳಿ ಪ್ರಾಥಮಿಕಆರೋಗ್ಯಕೇಂದ್ರದ ಹೆಲ್ತ್‍ಇನ್ಸ್‍ಪೆಕ್ಟರ್ ಶಂಕರ್‍ನಾಯ್ಕ, ಮೆದೇಹಳ್ಳಿ ಗ್ರಾಮ ಪಂಚಾಯಿತಿಯ ಅಜ್ಜಪ್ಪ, ಆಶಾ ಕಾರ್ಯಕರ್ತೆಯರು ವಿಮುಕ್ತಿ ವಿದ್ಯಾಸಂಸ್ಥೆಯ ಲಿಂಗರಾಜ್ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು .ಇದೇ ಸಂದರ್ಭದಲ್ಲಿ ನೂರಾರುಜನ ಸುಡುಗಾಡು ಸಿದ್ಧರ ಜನಾಂಗದವರಿಗೆಆರೋಗ್ಯತಪಾಸಣೆಗೆ ಒಳಪಡಿಸಲಾಯಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link