ಬೇವು, ಹೊಂಗೆ ಬೆಳೆಯಲು ಸಲಹೆ

ಹುಳಿಯಾರು:

    ಮನುಷ್ಯ ಸೇರಿದಂತೆ ಜೀವ ಸಂಕುಲಕ್ಕೆ ಅತ್ಯಗತ್ಯವಾಗಿ ಬೇಕಿರುವ ಆಮ್ಲಜನಕವನ್ನು ಹೆಚ್ಚಾಗಿ ಹೊರ ಸೂಸುವ ಬೇವು ಮತ್ತು ಹೊಂಗೆ ಮರಗಳನ್ನು ರೈತರು ತಮ್ಮತಮ್ಮ ಜಮೀನಿನ ಬದುವಿನಲ್ಲಿ ಬೆಳೆಯುವಂತೆ ವಕೀಲ ಜ್ಞಾನಮೂರ್ತಿ ಸಲಹೆ ನೀಡಿದರು.

    ಹಂದನಕೆರೆ ಹೋಬಳಿಯ ಗೂಬೆಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಇತ್ತಿಚಿನ ದಿನಗಳಲ್ಲಿ ಮರಗಳನ್ನು ಕಡಿಯುತ್ತಿರುವುದರಿಂದ ಭೂಮಿಯ ತಾಪಮಾನ ಹೆಚ್ಚಾಗಿ ಅನೇಕ ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ. ಈ ತಾಪಮಾನ ಹೀಗೆಯೇ ಹೆಚ್ಚಾಗುತ್ತಾ ಹೋದರೆ ಜಗತ್ತಿನ ಶೇ.25 ರಷ್ಟು ತೇವಾಂಶ ಒಣಗಿ ಜೀವ ಸಂಕುಲ ಬದುಕುವುದೇ ದುತ್ಸರವಾಗುತ್ತದೆ. ಹಾಗಾಗಿ ಎಲ್ಲರೂ ಎಚ್ಚೆತ್ತುಕೊಂಡು ಗಿಡಮರಗಳನ್ನು ಬೆಳೆಸಬೇಕು ಎಂದರು.

    ವೈದ್ಯೆ ಎನ್.ರಾಧಿಕಾ ಮಾತನಾಡಿ ಮನೆಗಳ ಸುತ್ತಮುತ್ತ ಕೈ ತೋಟ ಮಾಡಿ ಮನೆಗೆ ಅಗತ್ಯವಿರುವ ಹಣ್ಣಿನ ಗಿಡಗಳನ್ನಾದರೂ ಬೆಳೆದು ವೈಯಕ್ತಿಕ ಆರೋಗ್ಯದ ಜೊತೆಗೆ ಪರಿಸರದ ಆರೋಗ್ಯ ಕಾಪಾಡಬಹುದಾಗಿದೆ. ಹಾಗಾಗಿ ಪ್ರತಿಯೊಬ್ಬರೂ ಮನೆ ಸುತ್ತಮುತ್ತಲ ಪ್ರದೇಶವನ್ನು ವ್ಯರ್ಥವಾಗಿ ಬಿಡದೆ ಮರಗಿಡಗಳನ್ನು ಬೆಳಸಿ ಎಂದು ಕಿವಿ ಮಾತು ಹೇಳಿದರು.ಗ್ರಾಪಂ ಅಭಿವೃದ್ಧಿ ಅಧಿಕಾರಿ ಗೋವಿಂದರಾಜು, ಗ್ರಾಪಂ ಸದ್ಯರುಗಳಾದ ಸುರೇಶ್, ಜಯಲಕ್ಷ್ಮಮ್ಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap